ಇದಲ್ಲ ಬೋಗಸ್: ನೌಕರರಿಗೆ ತಲಾ 30 ಲಕ್ಷ ರೂ. ಬೋನಸ್!

Suvarna News   | Asianet News
Published : Dec 13, 2019, 02:52 PM ISTUpdated : Dec 13, 2019, 06:34 PM IST
ಇದಲ್ಲ ಬೋಗಸ್:  ನೌಕರರಿಗೆ ತಲಾ 30 ಲಕ್ಷ ರೂ. ಬೋನಸ್!

ಸಾರಾಂಶ

ನೌಕರರಿಗೆ ಬರೋಬ್ಬರಿ 35 ಲಕ್ಷ ರೂ. ಬೋನಸ್| ಬೋನಸ್ ನೀಡಲು ಬರೋಬ್ಬರಿ 71 ಕೋಟಿ ರೂ. ತೆಗೆದಿರಿಸಿದ ಕಂಪನಿ| ಅಮೆರಿಕದ ರಿಯಲ್ ಎಸ್ಟೇಟ್ ಕಂಪನಿ ಸೇಂಟ್ ಜಾನ್ ಪ್ರಾಪರ್ಟೀಸ್| ಒಟ್ಟು 198 ಸಿಬ್ಬಂದಿಗೆ ತಲಾ  35.50 ಲಕ್ಷ ರೂ. ಬೋನಸ್| ಕಂಪನಿಯ ನಿರ್ಧಾರದಿಂದ ನೌಕರರು ಫುಲ್ ಖುಷ್| ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಸಿಬ್ಬಂದಿಗೆ ಭರ್ಜರಿ ಬೋನಸ್|

ಮೇರಿಲ್ಯಾಂಡ್(ಡಿ.13): ಹಬ್ಬ ಹರಿದಿನಗಳ ಸಂದರ್ಭದಲ್ಲಿ ಸಂಸ್ಥೆಗಳು ತಮ್ಮ ನೌಕರರಿಗೆ ಬೋನಸ್ ನೀಡುವುದು ಸಾಮಾನ್ಯ ಸಂಗತಿ. ಸಂಸ್ಥೆಯೊಂದರ ಆರ್ಥಿಕ ಸ್ಥಿತಿಗತಿಗೆ ಅನುಸಾರವಾಗಿ ಬೋನಸ್ ಪ್ರಮಾಣ ನಿರ್ಧಾರವಾಗುತ್ತದೆ.

ಆದರೆ ಅಮೆರಿಕದ ಕಂಪನಿಯೊಂದು ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ತನ್ನ ಸಿಬ್ಬಂದಿಗೆ ಬರೋಬ್ಬರಿ 35.50 ಲಕ್ಷ ರೂ. ಬೋನಸ್ ನೀಡಿದೆ. ಬೋನಸ್‌ಗಾಗಿಯೇ ಈ ಕಂಪನಿ ಬರೋಬ್ಬರಿ 71 ಕೋಟಿ ರೂ. ತೆಗೆದಿರಿಸಿದೆ.

ಈ ಸರ್ಕಾರಿ ಕಂಪನಿ ಎಲ್ಲಾ ನೌಕರರಿಗೂ ದಸರಾಗೆ ತಲಾ 1 ಲಕ್ಷ ರು. ಬೋನಸ್‌!

ಅಮೆರಿಕದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಸೇಂಟ್ ಜಾನ್ ಪ್ರಾಪರ್ಟೀಸ್, ತನ್ನ ಒಟ್ಟು 198 ಸಿಬ್ಬಂದಿಗೆ ತಲಾ  35.50 ಲಕ್ಷ ರೂ. ಬೋನಸ್ ಪ್ರಕಟಿಸಿದೆ. 

ಸಂಸ್ಥೆಯ ಸಿಬ್ಬಂದಿ ವಾರ್ಷಿಕ ಗುರಿ ಮೀರಿ ಕೆಲಸ ಮಾಡಿದ್ದರಿಂದ ಬೋನಸ್‌ಗೆ ಒಟ್ಟು 10 ಮಿಲಿಯನ್ ಯುಎಸ್ ಡಾಲರ್ ವಿನಿಯೋಗಿಸಲು ಸಂಸ್ಥೆ ನಿರ್ಧರಿಸಿದೆ ಎಂದು ಸೇಂಟ್ ಜಾನ್ ಹೇಳಿದ್ದಾರೆ.

ಕಂಪನಿಯ ನಿರ್ಧಾರದಿಂದ ನೌಕರರು ತುಂಬ ಖುಷಿಯಾಗಿದ್ದು, ಇಷ್ಟೊಂದು ಅಗಾಧ ಮೊತ್ತದ ಬೋನಸ್ ಸಿಕ್ಕಿರುವುದಕ್ಕೆ ಆಶ್ವರ್ಯ ವ್ಯಕ್ತಪಡಿಸಿದ್ದಾರೆ. 

ಬೋನಸ್ ಎಷ್ಟು ಕೊಡ್ತಿವಿ ಅಂತಾ ತೋರಿಸಲು ಹಣದ ಬೆಟ್ಟ ಕಟ್ಟಿದ ಕಂಪನಿ!

ಈ ಕುರಿತು ಮಾತನಾಡಿರುವ ಸಂಸ್ಥೆಯ ನೌಕರ ಡೇನಿಯಲ್ ವೆಲೆಂಜಿಯಾ, ಇಷ್ಟೊಂದು ದೊಡ್ಡ ಪ್ರಮಾಣದ ಬೋನಸ್ ನೀಡಿರುವುದಕ್ಕೆ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.

ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!