
ಲಾಸ್ ಏಂಜಲೀಸ್(ಡಿ.13): ಈಗಾಗಲೇ ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವ ಇನ್ಫೋಸಿಸ್’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಅಲ್ಪಾವಧಿಯ ಲಾಭವನ್ನು ಪಡೆಯಲು ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ, ಲಾಸ್ ಎಂಜಲೀಸ್ ಮೂಲದ ಷೇರುದಾರರ ಹಕ್ಕುಗಳ ಸಂಸ್ಥೆ ಇನ್ಫೋಸಿಸ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದೆ.
ಇನ್ಫೋಸಿಸ್ ಸಿಇಒ ವಿರುದ್ಧ ಗಂಭೀರ ಆರೋಪ : ಆಡಳಿತ ಮಂಡಳಿಗೆ ಪತ್ರ
ಇನ್ಫೋಸಿಸ್ ಸಿಇಓ ಸಲೀಲ್ ಪರೇಖ್ ಲೆಕ್ಕ ಪತ್ರಗಳ ಸಮೀಕ್ಷೆಯನ್ನು ಮರೆಮಾಚಿದ್ದು, ಲೆಕ್ಕ ಪತ್ರದ ವಿವರಗಳನ್ನು ಮ್ಯಾನೇಜ್’ಮೆಂಟ್ ಒತ್ತಡದಿಂದ ಹಣಕಾಸು ವಿಭಾಗಕ್ಕೆ ಒದಗಿಸದೆ ಮರೆಮಾಚಿದೆ ಎಂದು ಶಾಲ್ ಲಾ ಫರ್ಮ್ ದೂರಿನಲ್ಲಿ ಉಲ್ಲೇಖಿಸಿದೆ.
ಇದರಿಂದ ಮಾರುಕಟ್ಟೆಯಲ್ಲಿ ಇನ್ಫೋಸಿಸ್ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ ಎಂದೂ ಶಾಲ್ ಲಾ ಫರ್ಮ್ ತನ್ನ ದೂರಿನಲ್ಲಿ ತಿಳಿಸಿದೆ.
ದಕ್ಷಿಣದವರನ್ನು‘ ಮದ್ರಾಸಿ’ ಎಂದ ಇನ್ಫೋಸಿಸ್ ಸಿಇಒ: ಷೇರು ಕುಸಿತಕ್ಕೆ ಲಬೋ ಲಬೋ!
ಜುಲೈ 7, 2018 ರಿಂದ ಅಕ್ಟೋಬರ್ 20, 2019 ರವರೆಗೆ ಸೆಕ್ಯೂರಿಟಿಗಳನ್ನು ಖರೀದಿಸಿದ ಹೂಡಿಕೆದಾರರು ಶಾಲ್ ಲಾ ಫರ್ಮ್ ಅನ್ನು ಸಂಪರ್ಕಿಸಬಹುದು ಎಂದು ಕೋರಿದೆ.
ಶಾ ಲಾ ಫರ್ಮ್ ವಿಶ್ವದಾದ್ಯಂತ ಷೇರುದಾರರು ಮತ್ತು ಷೇರುದಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಂಸ್ಥೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.