ಚೀನಾ ಮೇಲೆ ಅಮೆರಿಕದ 90 ದಿನ ತೆರಿಗೆ ತಡೆ ಏಕಿಲ್ಲ ? ತಂತ್ರಗಾರಿಕೆ ತೆರಿಗೆ ಏರಿಕೆ ಹಿಂದೆ ವ್ಯೂಹಾತ್ಮಕ ಕಾರಣ

Published : Apr 11, 2025, 09:16 AM ISTUpdated : Apr 11, 2025, 09:27 AM IST
ಚೀನಾ ಮೇಲೆ ಅಮೆರಿಕದ 90 ದಿನ ತೆರಿಗೆ ತಡೆ ಏಕಿಲ್ಲ ? ತಂತ್ರಗಾರಿಕೆ ತೆರಿಗೆ ಏರಿಕೆ ಹಿಂದೆ ವ್ಯೂಹಾತ್ಮಕ ಕಾರಣ

ಸಾರಾಂಶ

ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳ ಮೇಲಿನ ತೆರಿಗೆಯನ್ನು ಟ್ರಂಪ್ ತಡೆಹಿಡಿದಿದ್ದಾರೆ, ಆದರೆ ಚೀನಾಕ್ಕೆ ಶೇ.125 ತೆರಿಗೆ ವಿಧಿಸಿದ್ದಾರೆ. ಚೀನಾ ಬ್ಲ್ಯಾಕ್ಮೇಲ್ ತಂತ್ರಗಳಿಗೆ ಹೆದರುವುದಿಲ್ಲ ಎಂದು ತಿರುಗೇಟು ನೀಡಿದೆ.

ವಾಷಿಂಗ್ಟನ್ (ಏ.11) : ಅಮೆರಿಕದೊಂದಿಗೆ ವ್ಯಾಪಾರ ಸಂಬಂಧ ಹೊಂದಿರುವ ದೇಶಗಳ ಮೇಲೆ ತೆರಿಗೆ ಹೇರಿದ್ದ ಟ್ರಂಪ್ , ಅದು ಜಾರಿಗೆ ಬರಬೇಕಿದ್ದ ದಿನವೇ ತೆರಿಗೆಯನ್ನು 90 ದಿನಗಳ ಮಟ್ಟಿಗೆ ತಡೆಹಿಡಿದು 75 ದೇಶಗಳು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ . ಆದರೆ ಚೀನಾಗೆ ಈ ವಿನಾಯಿತಿ ನೀಡದೆ , ಶೇ .125 ತೆರಿಗೆ ವಿಧಿಸಿದೆ .

ಟ್ರುಥ್‌ನಲ್ಲಿ ಮಾಹಿತಿ ನೀಡಿರುವ ಟ್ರಂಪ್ , ' ಚೀನಾ ಜಾಗತಿಕ ಮಾರುಕಟ್ಟೆಗೆ ಅಗೌರವ ತೋರಿದೆ . ಅವರು ಪ್ರತಿತೆರಿಗೆಯ ಸೇಡು ತೀರಿಸಿಕೊಳ್ಳಲು ನಮ್ಮ ಮೇಲೆ ಶೇ .84 ರಷ್ಟು ತೆರಿಗೆ ವಿಧಿಸಿದರು . ಅನ್ಯ ದೇಶಗಳನ್ನು ಆರ್ಥಿಕವಾಗಿ ಶೋಷಿಸುವುದು ಸ್ವೀಕಾರಾರ್ಹವಲ್ಲ ಎಂಬುದು ಚೀನಾಗೆ ಅರಿವಾದೀತು ' ಎಂದಿದ್ದಾರೆ .

ಚೀನಾ ಮೇಲಿನ ತೆರಿಗೆ ಹೆಚ್ಚಳಕ್ಕೆ , ಅದನ್ನು ಆರ್ಥಿಕವಾಗಿ ಪ್ರತ್ಯೇಕಿಸುವುದರ ಜೊತೆಗೆ , ಕೆಲವೈಯಕ್ತಿಕ ಹಾಗೂ ವ್ಯೂಹಾತ್ಮಕಕಾರಣಗಳೂ ಇವೆ . ಚೀನಾ ಅಮೆರಿಕದಲ್ಲಿ ಕಡಿಮೆ ಬೆಲೆ ವಸ್ತುಗಳನ್ನು ರಾಶಿ ಹಾಕುವುದು , ದೇಶದ ಬೌದ್ಧಿಕ ಆಸ್ತಿಯನ್ನು ದೋಚುವುದು ಟ್ರಂಪ್‌ಗೆ ಹಿಡಿಸದು . ಇದರಿಂದ ಅಮೆರಿಕದ ಕಂಪನಿಗಳನ್ನು ರಕ್ಷಿಸುವುದು ಮತ್ತು ಮಾತುಕತೆಗೆ ಬರುವಂತೆ ಚೀನಾವನ್ನು ಒತ್ತಾಯಿಸುವುದೂ ತೆರಿಗೆ ಹೆಚ್ಚಳದ ಉದ್ದೇಶವಾಗಿದೆ .

ಬ್ಲಾಕ್‌ಮೇಲ್‌ಗೆ ಹೆದರಲ್ಲ , ಅಮೆರಿಕಕ್ಕೆ ಚೀನಾ ತಿರುಗೇಟು
ತೈಪೆ : ತನ್ನ ಮೇಲೆ ಶೇ .125 ರಷ್ಟು ತೆರಿಗೆ ಹಾಕಿರುವ ಅಮೆರಿಕದ ಬಗ್ಗೆ ಕಿಡಿಕಾರಿರುವ ಚೀನಾ , ' ಇಂಥ ಬೆದರಿಕೆ , ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆಲ್ಲಾ ನಾವು ಹೆದರುವುದಿಲ್ಲ . ಅಮೆರಿಕದ ಜತೆ ಮಾತುಕತೆಗೆ ನಾವು ಸಿದ್ಧ . ಆದರೆ ಇಂಥ ಮಾತುಕತೆ ಸಮಾನ ನೆಲೆಯಲ್ಲಿ ಮತ್ತು ಪರಸ್ಪರ ಗೌರವದ ರೀತಿಯಲ್ಲಿರಬೇಕು . ಅಮೆರಿಕ ವ್ಯಾಪಾರ ಯುದ್ಧ ನಡೆಸಲು ನಿರ್ಧರಿಸಿದರೆ , ಚೀನಾ ಕೊನೆಯವರೆಗೂ ಹೋರಾಡುತ್ತದೆ ' ಎಂದು ಹೇಳಿದೆ .

ಟ್ರಂಪ್‌ ಸುಂಕದಿಂದ ಬಚಾವ್‌ ಆಗಲು 600 ಟನ್‌ iPhone ಭಾರತದಿಂದ ಏರ್‌ಲಿಫ್ಟ್‌; ಮೋದಿ ಸಹಕಾರ!

ಇನ್ನೊಂದೆಡೆ ಅಮೆರಿಕದ ವಿರುದ್ದ ಜಂಟಿ ಹೋರಾಟ ಸಂಘಟಿಸುವ ಭಾಗವಾಗಿ ಚೀನಾ ಅನ್ಯ ದೇಶಗಳೊಂದಿಗೆ ಮಾತುಕತೆಗೆ ಮುಂದಾಗಿದೆ . ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ಅವರೊಂದಿಗೆ ಪ್ರಧಾನಿ ಲಿ ಕಿಯಾಂಗ್ ದೂರವಾಣಿಯಲ್ಲಿ ಮಾತನಾಡಿದ್ದು , ' ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರ ನಡುವಿನ ಒಮ್ಮತದ ನಿರ್ಧಾರಗಳನ್ನು , ಸಂವಹನ ಮತ್ತು ವಿನಿಮಯವನ್ನು ಬಲಪಡಿಸಲು , ವ್ಯಾಪಾರ ,ಹೂಡಿಕೆ , ಕೈಗಾರಿಕಾ ಸಹಕಾರವನ್ನು ಗಾಢವಾಗಿಸಲು ಇಯುದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ' ಎಂದಿದ್ದಾರೆ . ಬುಧವಾರವಷ್ಟೇ , ' ಭಾರತ ಮತ್ತು ಚೀನಾ ಟ್ರಂಪ್ ವಿರುದ್ಧ ನಿಲ್ಲಬೇಕು ' ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಆಗ್ರಹಿಸಿದ್ದರು .

ಟಿವಿ, ಫ್ರಿಜ್‌, ಸ್ಮಾರ್ಟ್‌ಫೋನ್‌ ಬೆಲೆ ಇಳಿಕೆ, ಭಾರತಕ್ಕೆ ಡಿಸ್ಕೌಂಟ್‌ ಆಫರ್‌ ಮಾಡಿದ ಚೀನಾ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮತ್ತೆ ಜಿಗಿದ ಬೆಳ್ಳಿ: ಒಂದೇ ದಿನ ₹40000 ಏರಿಕೆ!
ಬೆಂಗಳೂರು ಮೆಟ್ರೋ ಟಿಕೆಟ್ ಬೆಲೆ ಹೆಚ್ಚಳ: ಫೆಬ್ರವರಿ 9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ: ಇಲ್ಲಿದೆ ಹೊಸ ದರಪಟ್ಟಿ!