UPI: ಅ.15 ರಿಂದ ಜಾರಿಗೊಳಿಸುವ ನಿಯಮಕ್ಕೆ ಈಗ ದೊಡ್ಡ ಟ್ವಿಸ್ಟ್ ; ಯುಪಿಐ ನಿಯಮ ಬದಲಾವಣೆ ಮುಂದೂಡಿಕೆ?

Published : Oct 08, 2026, 12:47 PM IST
upi charges

ಸಾರಾಂಶ

₹2,000 ಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲಿನ MDR ಶುಲ್ಕವನ್ನು ಅಕ್ಟೋಬರ್ 15 ರಿಂದ ಜಾರಿಗೊಳಿಸುವ ನಿಯಮಕ್ಕೆ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿಯನ್ನು ನೋಡಿಕೊಂಡು ಬರೋಣ ಬನ್ನಿ

ಇವತ್ತಿನ ಡೇ-ಟು-ಡೇ ಲೈಫ್‌ನಲ್ಲಿ ಚಾಯ್ ಶಾಪ್‌ನಿಂದ ಹಿಡಿದು ಮಾಲ್‌ನೋಡೊತನಕ ಎಲ್ಲಾದಕ್ಕೂ ಯುಪಿಐ ಸ್ಕ್ಯಾನ್ ಮಾಡೋದೇ ನಮಗೊಂದು ಅಭ್ಯಾಸ ಆಗೋಗಿದೆ. ಆದ್ರೆ ಈಗ ಇದೇ ಯುಪಿಐ ವರ್ಲ್ಡ್‌ನಲ್ಲಿ ಒಂದು ದೊಡ್ಡ ಕನ್‌ಫ್ಯೂಷನ್ ಶುರುವಾಗಿದೆ. ಮೊನ್ನೆ ತಾನೇ ₹2,000 ಗಿಂತ ಜಾಸ್ತಿ ಟ್ರಾನ್ಸಾಕ್ಷನ್ ಮಾಡಿದ್ರೆ MDR ಶುಲ್ಕ ಕಟ್‌ ಆಗುತ್ತೆ, ಅಕ್ಟೋಬರ್ 15 ರಿಂದ ಹೊಸ ರೂಲ್ಸ್ ಅಪ್ಲೈ. ಅಂತ ಸುದ್ದಿ ಹರಿದಾಡ್ತಿತ್ತು. ಆದ್ರೆ ಈಗ ಆ ಸ್ಟೋರಿಗೆ ಕಂಪ್ಲೀಟ್ ಯು-ಟರ್ನ್ ಸಿಕ್ಕಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಏನಿದು ಹೊಸ ಗಲಾಟೆ?

ಅಕ್ಟೋಬರ್ 15ಕ್ಕೆ ಜಸ್ಟ್ ಕೆಲವೇ ದಿನಗಳು ಬಾಕಿ ಇರುವಾಗ, ದೊಡ್ಡ ದೊಡ್ಡ ಮರ್ಚೆಂಟ್ ಗ್ರೂಪ್ಸ್ ಮತ್ತು ಪೇಮೆಂಟ್ ಕಂಪನಿಗಳು ಎನ್‌ಪಿಸಿಐ (NPCI) ಬಾಗಿಲು ತಟ್ಟಿವೆ. "ಬಾಸ್, ಯಾವ ಟ್ರಾನ್ಸಾಕ್ಷನ್‌ಗೆ ಎಷ್ಟು ಚಾರ್ಜ್ ಮಾಡಬೇಕು, ಸಿಸ್ಟಮ್ ಹೇಗೆ ವರ್ಕ್ ಆಗುತ್ತೆ ಅನ್ನೋದೇ ಇನ್ನು ಕ್ಲಿಯರ್ ಇಲ್ಲ. ನಮಗೆ ಇದನ್ನ ಸೆಟ್ ಮಾಡೋಕೆ ಟೈಮ್ ಬೇಕು. ಸೋ, ಈ ರೂಲ್ಸ್ ಅನ್ನು ಜನವರಿ 2027 ರವರೆಗೆ ಮುಂದೂಡಿ ಅಂತ ರಿಕ್ವೆಸ್ಟ್ ಮಾಡಿಕೊಂಡಿವೆ.

ಶೇರ್ ಮಾರ್ಕೆಟ್‌ನಲ್ಲಿ ಪ್ಯಾನಿಕ್‌!

ಈ ಸುದ್ದಿ ಆಚೆ ಬರ್ತಿದ್ದಂತೆ ಶೇರ್ ಮಾರ್ಕೆಟ್‌ನಲ್ಲಿ ಪೇಮೆಂಟ್ ಆಪ್‌ಗಳ ಕಂಪನಿಗಳಿಗೆ ದೊಡ್ಡ ಶಾಕ್ ಸಿಕ್ಕಿದೆ. MDR ಬಂದಿಟ್ರೆ ಈ ಕಂಪನಿಗಳಿಗೆ ಒಳ್ಳೆ ಕಮಿಷನ್ ಸಿಗುತ್ತೆ ಅಂತ ಇನ್ವೆಸ್ಟ್ ಮಾಡಿದವರೆಲ್ಲಾ, ಡೆಡ್‌ಲೈನ್ ಮುಂದಕ್ಕೆ ಹೋಗೋ ಸೀನ್ ನೋಡಿ ಶೇರ್‌ಗಳನ್ನು ಧಟಾಪಟಾ ಅಂತ ಮಾರಿಬಿಟ್ಟಿದ್ದಾರೆ.

ಪೇಟಿಎಂ (Paytm); ಶೇರ್ ಪ್ರೈಸ್ ಒಂದೇ ದಿನದಲ್ಲಿ 5.29% ಡೌನ್ ಆಗಿ ₹1,640.30 ಕ್ಕೆ ಬಂತು.

ಮೊಬಿಕ್ವಿಕ್ (MobiKwik): ಇದರ ಶೇರ್ ಅಂತೂ 5.65% ಕುಸಿದು ₹241 ತಲುಪಿದೆ.

ಪೈನ್ ಲ್ಯಾಬ್ಸ್ (Pine Labs): ಇದರ ಕಥೆಯೂ ಸೇಮ್, 2.83% ಇಳಿಕೆಯಾಗಿ ₹172.65 ಕ್ಕೆ ಬಂದು ನಿಂತಿದೆ.

ಆರ್ಬಿ‌ಐ ಗವರ್ನರ್ ಏನಂತಾರೆ?

ಇಷ್ಟೆಲ್ಲಾ ಡ್ರಾಮಾ ನಡೀತಿದ್ರೂ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮಾತ್ರ ಫುಲ್ ಕೂಲ್ ಆಗಿದ್ದಾರಂತೆ. ಸ್ವಲ್ಪ ಸಣ್ಣ ಶುಲ್ಕ ಹಾಕಿದ ತಕ್ಷಣ ಯಾರೂ ಯುಪಿಐ ಯೂಸ್ ಮಾಡೋದು ಬಿಡಲ್ಲ, ಮಾರ್ಕೆಟ್‌ನಲ್ಲಿ ಇದರಿಂದ ಏನೂ ದೊಡ್ಡ ಇಂಪ್ಯಾಕ್ಟ್ ಆಗಲ್ಲ" ಅಂತ ಕಾನ್ಫಿಡೆಂಟ್ ಆಗಿ ಹೇಳಿದ್ದಾರೆ. ಕಳೆದ ತಿಂಗಳು ₹2,000 ಗಿಂತ ಹೆಚ್ಚಿನ ವಹಿವಾಟಿಗೆ 0.4% ಶುಲ್ಕ ಹಾಕೋಕೆ ಪ್ಲಾನ್ ಮಾಡಲಾಗಿತ್ತು.

ನೆಕ್ಸ್ಟ್ ಏನು?

ಈಗ ಎನ್‌ಪಿಸಿಐ, ಫೈನಾನ್ಸ್ ಮಿನಿಸ್ಟ್ರಿ ಜೊತೆ ಮಾತುಕತೆ ನಡೆಸ್ತಿದೆ. ಅಕ್ಟೋಬರ್ 15 ರಿಂದಲೇ ಚಾರ್ಜಸ್ ಜಾರಿಗೆ ಬರುತ್ತಾ ಅಥವಾ 2027 ರವರೆಗೆ ಪೋಸ್ಟ್‌ಪೋನ್ ಆಗುತ್ತಾ ಅನ್ನೋ ಆಫಿಷಿಯಲ್ ನ್ಯೂಸ್ ಇನ್ನೆರಡು ದಿನಗಳಲ್ಲಿ ಬರಲಿದೆ. ಒಟ್ಟಿನಲ್ಲಿ ಜೇಬಲ್ಲಿ ನಗದು ಇಟ್ಟುಕೊಳ್ಳದೆ ಬರೀ ಫೋನ್‌ನಲ್ಲೇ ಸಕಲ ಕಾರ್ಯ ಮುಗಿಸೋ ನಮ್ ಜೆನ್-ಜಿ ಗ್ಯಾಂಗ್‌ಗಂತೂ ಈ ಯುಪಿಐ ಗೊಂದಲ ಒಂಥರಾ ಸಸ್ಪೆನ್ಸ್ ಥ್ರಿಲ್ಲರ್ ತರ ಅನಿಸ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಾಜ್ಯದ ಆರ್ಥಿಕತೆಗೆ ಬಿಯರ್ ಕಂಪೆನಿ ಯುಬಿಎಲ್ ಭಾರಿ ಬೆಂಬಲ: ₹4,500 ಕೋಟಿ ಕೊಡುಗೆ, 36,400 ಉದ್ಯೋಗ ಸೃಷ್ಟಿ!
ಗಂಟೆಗೆ ₹210… ಸ್ನ್ಯಾಕ್ಸ್, ವೈ-ಫೈ, ಕಾಫಿ ಉಚಿತ: ಯುವಕರ ಕ್ರೇಜ್ ಹೆಚ್ಚಿಸಿದ ಈ ಕೆಫೆ ಎಲ್ಲಿದೆ ಗೊತ್ತಾ?