Jio Platforms IPO: ದಸರಾಗೆ ಜಿಯೋ ಐಪಿಒ, ಒಂದೊಂದು ಶೇರ್ ಬೆಲೆ ಎಷ್ಟು ಇರಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Published : Oct 07, 2026, 06:22 PM IST
Jio IPO

ಸಾರಾಂಶ

ಮುಕೇಶ್ ಅಂಬಾನಿ ಒಡೆತನದ ಜಿಯೋ ಫ್ಲಾಟ್‌ಫಾರ್ಮ್ಸ್ ಲಿಮಿಟೆಡ್ ಶೀಘ್ರದಲ್ಲೇ ಭಾರತದ ಅತಿದೊಡ್ಡ ಐಪಿಒ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸುಮಾರು 37,700 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿರುವ ಈ ಐಪಿಒ ಅಕ್ಟೋಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಹೂಡಿಕೆದಾರರು ಈ ಬೃಹತ್ ಐಪಿಒ ಮೇಲೆ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಸ್ಟಾಕ್‌ ಮಾರ್ಕೆಟ್‌ನಲ್ಲಿ ಐಪಿಒಗಳಿಗೆ ಭಾರೀ ಡಿಮ್ಯಾಂಡ್ ಇದೆ. ಚಿಕ್ಕವರು, ದೊಡ್ಡವರು ಎಂಬ ವ್ಯತ್ಯಾಸ ಇಲ್ಲದೆ ಇದರಲ್ಲಿ ಶೇರ್‌ಗಳನ್ನು ಖರೀದಿ ಮಾಡಲು ಪೈಪೋಟಿ ಮಾಡುತ್ತಿದ್ದಾರೆ. ಕಳೆದ 2-3 ತಿಂಗಳಿನಿಂದ ಬಂದ ಬಹುತೇಕ ಐಈಒಗಳು ಹಣದ ಮಳೆಯನ್ನು ಸುರಿಸಿದ್ದರು. ಆದರೆ ಇದರಲ್ಲಿ ಬಂದ ಮೆಗಾ ಐಪಿಒಗಳು ಎಸ್‌ಬಿಐ ಫಂಡ್ಸ್ ಮ್ಯಾನೇಜ್‌ಮೆಂಟ್, ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ನಂತಹ ಐಪಿಒಗಳು ನಿರಾಸೆ ಮೂಡಿಸಿದ್ದವು. ಸ್ವಲ್ಪ ಲಾಭಗಳೊಂದಿಗೆ ಲಿಸ್ಟಿಂಗ್ ಆದರೂ, ಐಪಿಒ ಪ್ರೈಸ್‌ನಿಂದ ಪಾತಾಳಕ್ಕೆ ಬಿದ್ದು ಹೋದವು. ಆದರೆ ಈಗ ಮತ್ತೊಂದು ದೊಡ್ಡ ಐಪಿಒ ಕಡೆ ಹೂಡಿಕೆದಾರರು ಗಮನಹರಿಸುತ್ತಿದ್ದಾರೆ. ಇದು ಸಾಮಾನ್ಯ ಕಂಪನಿ ಅಲ್ಲ. ಭಾರತ ದೇಶ ಮಾರ್ಕೆಟ್ ಪರ ನೋಡುವುದಾದರೆ, ಅತ್ಯಂತ ದೊಡ್ಡ ಸಂಸ್ಥೆಯಾದ ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಸಬ್ಸಿಡರಿ, ಅಂದರೆ ಜಿಯೋ ಫ್ಲಾಟ್‌ಫಾರ್ಮ್ಸ್ ಲಿಮಿಟೆಡ್. ಈ ಐಪಿಒಗೆ ಸಂಬಂಧಿಸಿದಂತೆ ಒಂದು ಬಿಗ್ ಅಪ್‌ಡೇಟ್ ಹೊರ ಬಿದ್ದಿದೆ. ಭಾರತದ ದೇಶದಲ್ಲಿ ಇದುವರೆಗೂ ನಡೆದ ಅತೀ ದೊಡ್ಡ ಐಪಿಒ ಆಗಿ ನೋಡುತ್ತಿದ್ದಾರೆ. ಇದರಿಂದ ಹೂಡಿಕೆದಾರರು ಕೂಡ ಕಾತುರದಿಂದ ನೋಡುತ್ತಿದ್ದಾರೆ.

ಭಾರತದ ಅತಿದೊಡ್ಡ ಐಪಿಒ ಬರಲಿದೆ!

ಇದರೊಂದಿಗೆ ಹೊಸ ಶೇರ್‌ಗಳನ್ನು ಜಾರಿ ಮಾಡುವ ಮೂಲಕ ಸುಮಾರು 4 ಬಿಲಿಯನ್ ಡಾಲರ್ ವರೆಗೂ ಹೂಡಿಕೆ ಸಂಗ್ರಹಿಸಲು ಟಾರ್ಗೆಟ್ ಹೊಂದಿದೆ. ಇದನ್ನು ನಮ್ಮ ಭಾರತದ ಹಣದಲ್ಲಿ ನೋಡುವುದಾದರೆ ಸುಮಾರು 37,700 ಕೋಟಿ ರೂಪಾಯಿ ಆಗಿರಬಹುದು ಎಂದು ಅಂದಾಜು ಮಾಡಲಾಗುತ್ತಿದೆ. ಈ ಐಪಿಒ ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಐಪಿಒಗೆ ಸೆಬಿ ಅನುಮತಿ ನೀಡಿದ್ದು, ಪ್ರೈಸ್ ಬ್ಯಾಂಡ್, ಸೈಜ್, ಲಾಟ್ ಸೈಜ್, ಇಶ್ಯು ಡೇಟ್ಸ್, ಲಿಸ್ಟಿಂಗ್ ಡೇಟ್ಸ್ ನಂತಹ ವಿವರಗಳೊಂದಿಗೆ 'ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್' (RHP) ಅನ್ನು ಅಕ್ಟೋಬರ್ 12ರ ನಂತರ ಸಲ್ಲಿಸುವ ನಿರೀಕ್ಷೆ ಇದೆ ಎಂದು ಎಕಾನಮಿಕ್ ಟೈಮ್ಸ್ ವರದಿ ಮಾಡಿದೆ.

ಹೂಡಿಕೆದಾರರಿಗೆ ಕಾದಿದೆಯಾ ಅಚ್ಚರಿ?

ಇಶ್ಯು ಶೇರ್ ಪ್ರೈಸ್ ಬ್ಯಾಂಡ್ ಸುಮಾರು 1150 ರೂ., 1220 ರೂಪಾಯಿ ವರೆಗೂ ಇರಬಹುದು. ಇತ್ತೀಚೆಗೆ ಬಂದ NSE IPO ಪ್ರೈಸ್ ಬ್ಯಾಂಡ್ 1700-1785 ರೂಪಾಯಿ ವರೆಗೂ ಇದೆ, ಇದಕ್ಕೆ ಹೋಲಿಕೆ ಮಾಡಿದರೆ ಇದು ಕಡಿಮೆ ಇರೋದು ಶುಭ ಸೂಚನೆಯಾಗಿದೆ. ಫ್ರೆಶ್ ಇಶ್ಯು ಅಡಿ ಸುಮಾರು 270 ಮಿಲಿಯನ್ ವರೆಗೂ ಶೇರ್ ಮಾಡಬಹುದು ಎಂಬುವುದು ಇಲ್ಲಿನ ಸುದ್ದಿ. ಮೂಲಗಳ ಅನ್ವಯ, ದಸರಾ ಸಮಯಕ್ಕೆ ಸರಿಯಾಗಿ ಅಂದರೆ ಅಕ್ಟೋಬರ್ 21ರ ವೇಳೆಗೆ ಸಬ್‌ಸ್ಕ್ರೀಪ್ಷನ್ ಆರಂಭಿಸಿ, ಅಕ್ಟೋಬರ್ 23ರ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇದೆ. ಇದಕ್ಕೂ ಮುನನ್ ಅಕ್ಟೋಬರ್ 19ರಂದು ಯಾಂಕರ್ ಇನ್ವೆಸ್ಟರ್ ಗಾಗಿ ಬಿಡ್ಡಿಂಗ್ ನಿರ್ವಹಿಸಲಿದ್ದಾರೆ. ಅಕ್ಟೋಬರ್ 26ರಂದು ಅಲಾಟ್‌ಮೆಂಟ್, ಅಕ್ಟೋಬರ್ 28ರಂದು ಲಿಸ್ಟಿಂಗ್ ಇರಬಹುದು ಎಂದು ಊಹೆ ಮಾಡಲಾಗಿದೆ. ಏನೇ ಆದರೂ ಅಕ್ಟೋಬರ್ 30ರ ಒಳಗೆ ಲಿಸ್ಟಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲು ಕಂಪನಿ ಮುಂದಾಗಿದೆ ಎನ್ನಲಾಗಿದೆ.

ಜಿಯೋ ಐಪಿಓ ಜಿಎಂಪಿ ಎಷ್ಟಿರಲಿದೆ?

ಅನ್ ಅಫಿಶಿಯಲ್ ಗ್ರೇ ಮಾರ್ಕೆಟ್‌ನಲ್ಲಿ ಪ್ರೀಮಿಯಂ ಸದ್ಯ ಅಕ್ಟೋಬರ್ 6ರ ಬೆಳಗ್ಗೆ ಒಂದು ಈಕ್ವಿಟಿ ಶೇರ್ 160 ರೂಪಾಯಿ ವರೆಗೂ ಇರಬಹುದು. ಜಿಯೋ ಈ ವರ್ಷದ ಜೂನ್‌ನಲ್ಲಿ ಐಪಿಒಗಾಗಿ ದಾಖಲೆ ಸಲ್ಲಿಕೆ ಮಾಡಿತ್ತು. ಸೆಬಿ ಇದಕ್ಕೆ ಆಗಸ್ಟ್ 28ರಂದು ಅನುಮೋದನೆ ನೀಡಿತ್ತು. ಸುಮಾರು 37 ಸಾವಿರದ 700 ಕೋಟಿ ರೂಪಾಯಿ ಸಂಗ್ರಹಿಸಿದರೆ ಇದು ಭಾರತದ ಅತಿದೊಡ್ಡ ಐಪಿಓ ಆಗಲಿದೆ.

2024ರಲ್ಲಿ ಹುಂಡೈ ಮೋಟಾರ್ ಇಂಡಿಯಾ ಐಪಿಒಗೆ ಬಂದಿತ್ತು. ಆ ವೇಳೆ 27,859 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಇತ್ತೀಚೆಗೆ ಬಿಡುಗಡೆಯಾಗಿದ್ದ ಎನ್‌ಇಎಸ್ ಸುಮಾರು 22,562 ಕೋಟಿ ರೂಪಾಯಿ ಮೊದಲ ಸ್ಥಾನ ಪಡೆದುಕೊಂಡಿತ್ತು. ನಂತರ ಸ್ಥಾನದಲ್ಲಿ ಎಲ್‌ಐಸಿ, ಪೇಟಿಎಂ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಜಿಯೋ ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಹೂಡಿಕೆದಾರರು ಕಾತುರದಿಂದ ನೋಡುತ್ತಿದ್ದಾರೆ.

Disclaimer: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಕೇವಲ ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರ. ಈ ಕುರಿತ ಅಧಿಕೃತ ಮಾಹಿತಿಗಾಗಿ ಜಿಯೋ ಪ್ಲಾಟ್ ಫಾರ್ಮ್‌ಗಳಿಂದ ಅಧಿಕೃತ ಪ್ರಕಟಣೆ ಹೊರಬರಬೇಕಿದೆ. ಆದರಿಂದ ಇದ ಕೇವಲ ಮಾಹಿತಿ ಆಗಿದ್ದು, ಹೂಡಿಕೆ ಮಾಡುವವರಿಗೆ ಯಾವುದ ಸಲಹೆಯನ್ನು ನೀಡುವುದಿಲ್ಲ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಪ್ರಾಣಿ ದಯೆಗೆ ಹೊಸ ಭಾಷ್ಯ ಬರೆದ ಅನಂತ್ ಅಂಬಾನಿ; ದೇಶಾದ್ಯಂತ 20 ಲಕ್ಷ ಪ್ರಾಣಿಗಳ ರಕ್ಷಣೆಗೆ ವಂತಾರಾ ಹೊಸ ಪ್ಲಾನ್!
ಹುಟ್ಟಿದ 28 ದಿನಕ್ಕೆ ಷೇರು ಮಾರುಕಟ್ಟೆ ಪ್ರವೇಶಿಸಿದ ಕಂದಮ್ಮ: ಜೀರೋಧಾದ ಅತ್ಯಂತ ಕಿರಿಯ ಗ್ರಾಹಕನಾದ ನವಜಾತ ಶಿಶು