ಆ್ಯಪ್ ಸಾಲದ ವಿರುದ್ಧ ಕೇಂದ್ರದ ಹೊಸ ಕಾನೂನು: 10 ವರ್ಷ ಜೈಲು?

By Kannadaprabha News  |  First Published Dec 20, 2024, 8:41 AM IST

ಅನಿಯಂತ್ರಿತ ಆ್ಯಪ್ ಸಾಲಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸುತ್ತಿದೆ. ಈ ಕಾನೂನು ಅಡಿ ಅಪರಾಧಿಗಳಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಈ ಮಸೂದೆಯ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು 2025ರ ಫೆಬ್ರವರಿ 13ರವರೆಗೆ ಸಂಗ್ರಹಿಸಲಾಗುತ್ತಿದೆ.


ನವದೆಹಲಿ (ಡಿ.20): ಆ್ಯಪ್‌ ಸಾಲ ಸೇರಿ ಅನಿಯಂತ್ರಿತ ಸಾಲಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ಈ ಸಂಬಂಧ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ಇದರ ಪ್ರಕಾರ ಅಪರಾಧಿಗಳಿಗೆ 10 ವರ್ಷ ಸೆರೆವಾಸ ಹಾಗೂ ದಂಡ ವಿಧಿಸಲಾಗುವುದು.

ಅನಿಯಂತ್ರಿತ ಸಾಲವನ್ನು ನಿಯಂತ್ರಿಸುವ ಸಲುವಾಗಿ ರಚಿಸಲಾಗಿದ್ದ ಆರ್‌ಬಿಐನ ತಂಡ 2021ರ ನವೆಂಬರ್‌ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ವ್ಯಕ್ತಿಗಳು ಅಥವಾ ಕಂಪನಿಗಳು ನೀಡುವ ಅನಿಯಂತ್ರಿತ ಸಾಲ ನಿಷೇಧಿಸುವ ಕಾನೂನು ಸೇರಿದಂತೆ ಕೆಲ ಕ್ರಮಗಳನ್ನು ಸೂಚಿಸಲಾಗಿದೆ.

Tap to resize

Latest Videos

undefined

ಇದರ ಪ್ರಕಾರ, ಡಿಜಿಟಲ್‌ ಅಥವಾ ಯಾವುದೇ ರೂಪದಲ್ಲಿ ಅನಿಯಂತ್ರಿತ ಸಾಲ ವ್ಯವಹಾರದಲ್ಲಿ ತೊಡಗಿದವರಿಗೆ ಕನಿಷ್ಠ 2 ವರ್ಷ, ಗರಿಷ್ಠ 7 ವರ್ಷ ಸೆರೆವಾಸ, 2 ಲಕ್ಷದಿಂದ 1 ಕೋಟಿ ರು. ವರೆಗೆ ದಂಡ ವಿಧಿಸಲಾಗುವುದು. ಸಾಲ ತೆಗೆದುಕೊಂಡವರ ಶೋಷಣೆ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಸಾಲ ವ್ಯವಹಾರದಲ್ಲಿ ತೊಡಗಿದವರು ಅಥವಾ ಅವರ ಆಸ್ತಿಗಳು ವಿವಿಧ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದರೆ, ಇಲ್ಲವೇ, ಸಾಲದ ಮೊತ್ತ ಅತ್ಯಧಿಕವಿದ್ದರೆ ಆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಗುವುದು. ಸಂಬಂಧಿತರು ಹೊಸ ಮಸೂದೆಯಾದ ಬುಲಾ(ಅನಿಯಂತ್ರಿತ ಸಾಲ) ಬಗ್ಗೆ 2025ರ ಫೆ.13ರ ಒಳಗೆ ಅಭಿಪ್ರಾಯಗಳನ್ನು ತಿಳಿಸಬಹುದು.

ಬಿಜೆಪಿ ಸಂಸದ ಪ್ರತಾಪ್‌ ಸಾರಂಗಿಯ ತಳ್ಳಿದ ರಾಹುಲ್‌ ಗಾಂಧಿ, ಚಿಕಿತ್ಸೆ ನೀಡಿದ ಡಾ. ಸಿಎನ್‌ ಮಂಜುನಾಥ್‌!

ತೀರಾ ಇತ್ತೀಚಿನ ಪ್ರಕರಣದಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾದ 47 ದಿನಕ್ಕೆ ಯುವಕನೊಬ್ಬ ಈ ಲೋನ್‌ ಆಪ್‌ಗಳ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ಸ್‌ಟಂಟ್‌ ಲೋನ್‌ ಆಪ್‌ನಿಂದ 2 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ ಆತ. ಸಾಲ ತೆಗೆದುಕೊಂಡಿದ್ದ ಮೊತ್ತವನ್ನು ವಾಪಾಸ್‌ ಕಟ್ಟಿದ್ದ. ಆದರೆ, ದೊಡ್ಡ ಮಟ್ಟದ ಬಡ್ಡಿ ಕಟ್ಟುವಂತೆ ನಿರಂತರವಾಗಿ ಲೋನ್‌ ಆಪ್‌ನಿಂದ ಕಿರುಕುಳ ಎದುರಿಸಿದ್ದ 37 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ,

Tumkur: ಗ್ಯಾರಂಟಿ ಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರಾಜ್ಯ ಸರ್ಕಾರ; ಸಿದ್ಧಗಂಗಾ ಮಠಕ್ಕೆ ಬಂತು 70 ಲಕ್ಷದ ಕರೆಂಟ್‌ ಬಿಲ್‌!


ಜೀವನ ಸಾಗಿಸಲು ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ನರೇಂದ್ರ ಎನ್ನುವ ವ್ಯಕ್ತಿ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಮೀನುಗಾರಿಕೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಈ ವೇಳೆ ಜೀವನ ಸಾಗಿಸಲು ಲೋನ್‌ ಆಪ್‌ನಿಂದ 2 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದ ಆತ ಅದನ್ನು ವಾಪಾಸ್‌ ಕೂಡ ಮಾಡಿದ್ದ. ಆದರೆ, ಈ ಹಣದ ದೊಡ್ಡ ಮೊತ್ತದ ಬಡ್ಡಿ ಪಾವತಿ ಮಾಡುವಂತೆ ಸಾಲ ನೀಡಿದ ಕಂಪನಿಯು ಪೀಡಿಸುತ್ತಿತ್ತು.

click me!