ಕೋವಿಡ್ ಬಳಿಕ ಹಲವು ದೇಶಗಳು ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ. ಈ ಪೈಕಿ ನ್ಯೂಜಿಲೆಂಡ್ ಕಳದೆ 33 ವರ್ಷಗಳ ಇತಿಹಾಸದಲ್ಲಿ ಘನಘೋರ ಎಕನಾಮಿಕ್ ಕ್ರೈಸಿಸ್‌ಗೆ ತುತ್ತಾಗಿದೆ. ಇದರ ಪರಿಣಾಮ ಉದ್ಯೋಗ ಕಡಿತ ಸೇರಿದಂತೆ ಹಲವು ಕಠಿಣ ಕ್ರಮಗಳು ಜಾರಿಯಾಗುತ್ತಿದೆ.
ವೆಲ್ಲಿಂಗ್ಟನ್(ಡಿ.19) ಕೊರೋನಾ ವಕ್ಕರಿಸಿದ ಬಳಿಕ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತ ಸೃಷ್ಟಿಯಾಗಿದೆ. ಈ ಪೈಕಿ ನ್ಯೂಡಿಲೆಂಡ್ ಇದೀಗ ಅತೀ ಕೆಟ್ಟ ಎಕನಾಮಿಕ್ ಕ್ರೈಸಿಸ್ ಎದುರಿಸುತ್ತಿದೆ. 1991ರ ಬಳಿಕ ನ್ಯೂಜಿಲೆಂಡ್ ಎದುರಿಸುತ್ತಿರುವ ಅತೀ ದೊಡ್ಡ ಎಕನಾಮಿಕ್ ಕ್ರೈಸಿಸ್ ಇದಾಗಿದೆ. ನ್ಯೂಜಿಲೆಂಡ್ ಜಿಡಿಪಿ ಶೇಕಡಾ 1ಕ್ಕೆ ಕುಸಿದಿದೆ. ಪರಿಣಾ ನ್ಯೂಜಿಲೆಂಡ್ ಮಾತ್ರವಲ್ಲ ಕೆಲ ದೇಶಗಳಲ್ಲಿ ಉದ್ಯೋಗ ಕಡಿತ ಭೀತಿ ಎದುರಾಗಿದೆ. ಈಗಾಗಲೇ ಹಲವು ಕಂಪನಿಗಳು ಉದ್ಯೋಗ ಕಡಿತ, ವೇತನ ಕಡಿತ ಮಾಡಿದೆ. ಯೊರೋಪಿಯನ್ ದೇಶಗಳಲ್ಲಿನ ಈ ರೀತಿಯ ಆರ್ಥಿಕ ಸಂಕಷ್ಟ ಇತರ ದೇಶಗಳ ಮೇಲೂ ಪರಿಣಾಮ ಬೀರಲಿದೆ.
ಕೋವಿಡ್ ಬಳಿಕ ಹಲವು ದೇಶಗಳ ಆರ್ಥಿಕ ಪರಿಸ್ಥಿತಿ ಮೇಲೆದ್ದಿಲ್ಲ. ಇದರ ನಡುವೆ ಯುದ್ಧ, ಭಯೋತ್ಪಾದಕ ಸಂಘರ್ಷ, ಸರ್ಕಾರ ಪತನ, ಆತಂರಿಕ ದಂಗೆ ಸೇರಿದಂತೆ ಹಲವು ಘಟನೆಗಳು ಕೆಲ ದೇಶಗಳಲ್ಲಿ ನಡೆಯುತ್ತಿದೆ. ಇದು ವ್ಯಾಪಾರ ವಹಿವಾಟುಗಳ ಮೇಲೂ ಪರಿಣಾಮ ಬೀರುತ್ತಿದೆ. ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ. ಆಯಾ ದೇಶದ ಕರೆನ್ಸಿಗಳ ಮೌಲ್ಯ ಕುಸಿಯುತ್ತಿದೆ. ಮಾರುಕಟ್ಟೆ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನಲೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ. ಇದನ್ನು ಸರಿದೂಗಿಸಲು ಕಂಪನಿಗಳು ಉದ್ಯೋಗ ಕಡಿತಕ್ಕೆ ಮುಂದಾಗುತ್ತಿದೆ.
undefined
ಪಾಕಿಸ್ತಾನದಲ್ಲಿ ಪೆಟ್ರೋಲ್‌ಗಿಂತ ದುಬಾರಿಯಾದ ಹಾಲು, ಲೀಟರ್‌ಗೆ 370 ರೂಪಾಯಿ!
2024 ಆರ್ಥಿಕ ವರ್ಷದ ಮೊದೆಲೆರಡು ಕ್ವಾರ್ಟರ್‌ನಲ್ಲಿ ನ್ಯೂಡಿಲೆಂಡ್ ಜಿಡಿಪಿ ಶೇಕಾ 1.1ರಷ್ಟಿತ್ತು. ಆದರೆ 3ನೇ ಕ್ವಾರ್ಟರ್‌ಗೆ ಇದೀಗ ಶೇಕಡಾ 1ಕ್ಕೆ ಕುಸಿತ ಕಂಡಿದೆ. ಉತ್ಪಾದಾನೆ, ನಿರ್ಮಾಣ ಹಾಗೂ ಯುಟಿಲಿಟಿ ಕ್ಷೇತ್ರದಲ್ಲಿನ ಹೊಡೆತ ನ್ಯೂಡಿಲೆಂಡ್ ದೇಶವನ್ನು ಕಂಗಾಲು ಮಾಡಿದೆ. ಇತ್ತ ನ್ಯೂಜಿಲೆಂಡ್‌ನಲ್ಲಿ ಹೂಡಿಕೆ, ಬಂಡವಾಳ ಹರಿದುಬರುವಿಕೆ ಕೂಡ ನಿಂತು ಹೋಗಿದೆ. ಇದು ನ್ಯೂಜಿಲೆಂಡ್ ರಿಸರ್ವ್ ಬ್ಯಾಂಕ್ ಒತ್ತಡ ಹೆಚ್ಚಿಸಿದೆ.
2024ರ ಮೂರನೇ ತ್ರೈಮಾಸಿಕದಲ್ಲಿ ನ್ಯೂಜಿಲೆಂಡ್ 16 ಕೈಗಾರಿಕೆಗ ಬಳಿಕ 11ರ ಕೊಡುಗೆ ಕ್ಷೀಣಿಸಿದೆ. ಕೈಗಾರಿಗೆ ಹಾಗೂ ಉತ್ಪಾದನಾ ವಲಯಗಳಲ್ಲಿ ಹೊಡೆತ ದೇಶದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಿದೆ. ವಿದೇಶಗಳಿಗೆ ನ್ಯೂಜಿಲೆಂಡ್ ಮಾಡುತ್ತಿದ್ದ ರಫ್ತು ಪ್ರಮಾಣ ಕುಸಿದಿದೆ. ಆದರೆ ಕೃಷಿ ಕ್ಷೇತ್ರ, ರಿಯಲ್ ಎಸ್ಟೇಟ್ ಸೇರಿದಂತೆ ಕೆಲ ಕ್ಷೇತ್ರಗಳಿಗೆ ಹೆಚ್ಚಿನ ಹೊಡೆತ ಬಿದ್ದಿಲ್ಲ. ಹಾಲಿನ ಉತ್ಪನ್ನಗಳಾದ ಹಾಲಿನ ಪುಡಿ, ಬೆಣ್ಣೆ, ತುಪ್ಪ ಸೇರಿದಂತೆ ಕೆಲ ಉತ್ಪನ್ನಗಳ ರಫ್ತು ಪ್ರಮಾಣ ಹೆಚ್ಚಾಗಿದೆ. ಆದರೆ ಆರ್ಥಿಕ ಹಿಂಜರಿತದ ಕಾರಣ ಕೆಲ ಕ್ಷೇತ್ರದ ಪ್ರಗತಿ ಕಾಣದಾಗಿದೆ. ನ್ಯೂಜಿಲೆಂಡ್ ಆರ್ಥಿಕ ಸಂಕಷ್ಟದಿಂದ ಪಾರಾಗಲು ಹರಸಾಹಸವೇ ಮಾಡಬೇಕು ಅನ್ನೋದು ತಜ್ಞರು ಅಭಿಪ್ರಾಯವಾಗಿದೆ.
ಕೋವಿಡ್ ಬಳಿಕ ನ್ಯೂಜಿಲೆಂಡ್ ಮಾತ್ರವಲ್ಲ ಹಲವು ಮುಂದುವರಿದ ದೇಶಗಳು ಆರ್ಥಿಕವಾಗಿ ಹೊಡೆತ ತಿಂದಿದೆ. ಹೀಗಾಗಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಗೂಗಲ್ ಸೇರಿದಂತೆ ಹಲವು ಕಂಪನಿಗಳು ಆರ್ಥಿಕ ಹೊರೆ ಕಡಿಮೆ ಮಾಡಲು ಎಲ್ಲಾ ಪ್ರಯತ್ನ ಮಾಡಿದೆ. ಇದರ ನಡುವೆ ಭಾರತ ಜಿಡಿಪಿಯಲ್ಲಿ ಪ್ರಗತಿ ಸಾಧಿಸಿದೆ. ವಿಶ್ವ ಬ್ಯಾಂಕ್ ಸಮೀಕ್ಷೆಯಲ್ಲಿ ಭಾರತದ ಜಿಡಿಪಿ ಪ್ರಗತಿಯತ್ತ ಮುನ್ನುಗ್ಗುತ್ತಿದೆ ಎಂದು ವರದಿ ಮಾಡಿದೆ. ಇದು ದೇಶದ ನೆಮ್ಮದಿಗೆ ಕಾರಣವಾಗಿದೆ. ಸುತ್ತ ಮುತ್ತ ದೇಶಗಳಲ್ಲಿನ ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿ ತದ್ವಿರುದ್ದವಾಗಿದೆ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ. ವಿಶ್ವ ಬ್ಯಾಂಕ್ ಸಾಲ ಕೊಡಲು ನಿರಾಕರಿಸಿದೆ. ಹಾಲು, ಗೋಧಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ ವರ್ಷಗಳೇ ಉರುಳಿಸಿದೆ. ಇನ್ನು ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಇದಕ್ಕಿಂತ ಕಟ್ಟದಾಗಿದೆ. ದಾಳಿ, ಪ್ರತಿಭಟನೆ ನಡುವೆ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ಶ್ರೀಲಂಕಾ ಈಗಷ್ಟೇ ಚೇತರಿಕೆ ಕಾಣುತ್ತಿದೆ. ಆದರೂ ಪರಿಸ್ಥಿತಿ ಬದಲಾಗಿಲ್ಲ.