ತಕ್ಷಣದಿಂದ ‘ವ್ಯಾಪಕವಾಗಿ ಉಳ್ಳಾಗಡ್ಡಿ’ ರಫ್ತಿಗೆ ಮೋದಿ ಸರ್ಕಾರ ನಿರ್ಬಂಧ!

By Web DeskFirst Published Sep 29, 2019, 4:56 PM IST
Highlights

ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಕೇಂದ್ರ ಸರ್ಕಾರ| ತಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ| ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ| ಎಲ್ಲಾ ರೀತಿಯ ಈರುಳ್ಳಿ ರಫ್ತಿಗೆ ಕೇಂದ್ರ ಸರ್ಕಾರದ ನಿರ್ಬಂಧ| 

ನವದೆಹಲಿ(ಸೆ.29): ಈರುಳ್ಳಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಕೇಂದ್ರ ಸರ್ಕಾರ, ತಕ್ಷಣದಿಂದಲೇ ಜಾರಿಗೆ ಬರುವಂತೆ ಈರುಳ್ಳಿ ರಫ್ತಿನ ಮೇಲೆ ನಿರ್ಬಂಧ ಹೇರಿದೆ.

Central government has imposed stock limits on onion traders to facilitate release of stocks in the market and prevention of hoarding by traders. The stock limit of 100 quintals on retail traders and 500 quintals on wholesale traders has been imposed across the country, today. pic.twitter.com/44grS5GDTi

— ANI (@ANI)

ಎಲ್ಲಾ ರೀತಿಯ ಈರುಳ್ಳಿ ರಪ್ತುನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಮಾಹಿತಿ ನೀಡಿದೆ. 

ಮಳೆ ಹಾಗೂ ಕಡಿಮೆ ಇಳುವರಿ ಪರಿಣಾಮ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಏರಿಕೆ ಕಂಡಿದೆ ಎನ್ನಲಾಗಿದೆ.

Ministry of Consumer Affairs, Food & Public Distribution: The reported export below Minimum Export Price to Bangladesh & Sri Lanka will be immediately stopped and strict action will be initiated against those who are found to be violating this decision of the Central government. https://t.co/hlt8KBfUxE

— ANI (@ANI)

ಈ ಹಿನ್ನೆಲೆಯಲ್ಲಿ ರಫ್ತಿಗೆ ಕಡಿವಾಣ ಹಾಕಿ ಪ್ರಸ್ತುತ ಲಭ್ಯ ಇರುವ ಈರುಳ್ಳಿಯನ್ನು, ಆಂತರಿಕ ಬಳಕೆಗೆ ಮೀಸಲಿಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

click me!