6 ಕೋಟಿ ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಳಕ್ಕೆ ಕೇಂದ್ರದ ಆದೇಶ!

By Web DeskFirst Published Sep 17, 2019, 3:43 PM IST
Highlights

ಇಂದು ಪ್ರಧಾನಿ ನರೇಂದ್ರ ಮೋದಿ 69ನೇ ಜನ್ಮದಿನ| ಮೋದಿ ಹುಟ್ಟುಹಬ್ಬಕ್ಕೆ 6 ಕೋಟಿ ಜನರಿಗೆ ಕೇಂದ್ರದ ಭರ್ಜರಿ ಗಿಫ್ಟ್| ನೌಕರರ ಭವಿಷ್ಯ ನಿಧಿ ಬಡ್ಡಿದರ ಹೆಚ್ಚಿಸಿ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ| EPFO ಬಡ್ಡಿದರವನ್ನು ಶೇ.8.65ಕ್ಕೆ ಹೆಚ್ಚಿಸಿ ಕೇಂದ್ರ ಸರ್ಕಾರ ಘೋಷಣೆ| 2018-19ರ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಆದೇಶ|

ನವದೆಹಲಿ(ಸೆ.17): ಇಂದು ಪ್ರಧಾನಿ ನರೇಂದ್ರ ಮೋದಿ 69ನೇ ವಸಂತಕ್ಕೆ ಕಾಲಿಟ್ಟಿದ್ದು, ದೇಶಾದ್ಯಂತ ವಿಭಿನ್ನ ರೀತಿಯಲ್ಲಿ ಮೋದಿ ಹುಟ್ಟುಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಅದರಂತೆ ಕೇಂದ್ರ ಕಾರ್ಮಿಕ ಇಲಾಖೆ ಕೂಡ ಪ್ರಧಾನಿ ಹುಟ್ಟುಹಬ್ಬವನ್ನು ತುಂಬ ವಿಶಿಷ್ಟ ರೀತಿಯಲ್ಲಿ ಆಚರಿಸಿದಂತಿದೆ.

ಹೌದು, ನೌಕರರ ಭವಿಷ್ಯ ನಿಧಿ(EPFO) ಬಡ್ಡಿದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ, ಸುಮಾರು 6 ಕೋಟಿ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. 2018-19ರ ಹಣಕಾಸು ವರ್ಷದಲ್ಲಿ ನೌಕರರ ಭವಿಷ್ಯ ನಿಧಿಯ ಬಡ್ಡಿದರವನ್ನು ಶೇ.8.65ಕ್ಕೆ ಏರಿಸಲಾಗಿದೆ.

2017-18ರ ಹಣಕಾಸು ವರ್ಷದಲ್ಲಿ 8.55ರಷ್ಟಿದ್ದ ನೌಕರರ ಭವಿಷ್ಯ ನಿಧಿ ಬಡ್ಡಿದರವನ್ನು ಇದೀಗ 8.65ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಘೋಷಿಸಿದ್ದಾರೆ.

click me!