ಕೇಂದ್ರ ಬಜೆಟ್ ಮಂಡನೆಯಾಗಿದೆ. ಬಜೆಟ್ ಕುರಿತು ಚರ್ಚೆಗಳು ಜೋರಾಗಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಜನತೆಯನ್ನುದ್ದೇಶಿ ಮಾತನಾಡಿದ್ದಾರೆ. ಈ ಬಜೆಟ್ ಎಲ್ಲಾ ವರ್ಗದ ಜನರಿಗೆ ಶಕ್ತಿ ತುಂಬುವ ಬಜೆಟ್ ಎಂದಿದ್ದಾರೆ. ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಹಾಗೂ ದೇಶದ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು(ಜು.23) ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕೆಲ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡಲಾಗಿದೆ. ಬಜೆಟ್ ಮಂಡನೆ ಬಳಿಕ ದೇಶದ ಜನತೆಯುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್ ಎಂದು ಬಣ್ಣಿಸಿದ್ದಾರೆ. ದೇಶದ ನಾಗರೀಕರಿಗೆ ಅಭಿನಂದನೆಗಳು. ಸಮಾಜದ ಪ್ರತಿ ವರ್ಗದ ಜನರಿಗೆ ಶಕ್ತಿ ನೀಡುವ ಬಜೆಟ್ ಇದಾಗಿದೆ. 25 ಕೋಟಿ ಜನರು ಬಡತದಿಂದ ಹೊರಬಂದಿದ್ದಾರೆ. ಬಡವರು, ಮಧ್ಯಮವರ್ಗ ಜನರನ್ನು ಸಶಕ್ತಗೊಳಿಸುವ ಬಜೆಟ್ ಇದಾಗಿದೆ. ಯುವ ಸಮೂಹ, ಶಿಕ್ಷಣ, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಿದ ಬಜೆಟ್ ಇದಾಗಿದೆ ಎಂದು ಮೋದಿ ಹೇಳಿದ್ದಾರೆ.
ಈ ಬಜೆಟ್‌ನಿಂದ ಮಹಿಳೆಯ ಆರ್ಥಿಕತೆ, ಭದ್ರತೆ ಹೆಚ್ಚಾಗಲಿದೆ. ಸಣ್ಣ ವ್ಯಾಪಾರಿಗಳು, ಎಂಎಸ್ಎಂಇ ಕ್ಷೇತ್ರ, ವ್ಯಾಪರ ವಹಿವಾಟುಗಳಿಗೆ ಹೊಸ ದಾರಿ ತೆರೆದುಕೊಳ್ಳಲಿದೆ. ಮೂಲಭೂತ ಸೌಕರ್ಯ, ಆರ್ಥಿಕ ವಿಕಾಸಕ್ಕೆ ಹೊಸ ವೇಗ ಸಿಗಲಿದೆ. ಉದ್ಯೋಗ, ಸ್ವಉದ್ಯೋಗಕ್ಕೆ ಈ ಬಜೆಟ್ ವಿಫುಲ ಅವಕಾಶ ನೀಡಿದೆ ಎಂದು ಮೋದಿ ಹೇಳಿದ್ದಾರೆ
undefined
Union Budget 2024, ಮೊಬೈಲ್, ಚಿನ್ನ ಸೇರಿ ಕೆಲ ವಸ್ತುಗಳು ಅಗ್ಗ, ಯಾವುದು ದುಬಾರಿ?
ವಿಶ್ವದಲ್ಲೇ ಭಾರತ ಮತ್ತಷ್ಟು ಆರ್ಥಿಕವಾಗಿ ಸದೃಢವಾಗಲು ಈ ಬಜೆಟ್ ಸಹಕಾರಿಯಾಗಿಗದೆ ಎಂದು ಮೋದಿ ಹೇಳಿದ್ದಾರೆ. ಪ್ರತಿ ಗ್ರಾಮದಲ್ಲೂ ಉದ್ಯೋಗದಾತರನ್ನು ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಮುದ್ರ ಯೋಜನೆ ಸಾಲ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಯಾಗಿ ಮಾಡಲು ಈ ಯೋಜನೆ ಪೂರಕವಾಗವಿದೆ. ನಾವೆಲ್ಲೂ ಜೊತೆಯಾಗಿ ಸೇರಿ ಭಾರತವನ್ನು ಗ್ಲೋಬಲ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಬೇಕು. ಎಂಎಸಎಂಇ ಯೋಜನೆ ಮೇಲೆ ಮಧ್ಯಮ ವರ್ಗದ ಹೆಚ್ಚು ಅವಲಂಭಿತವಾಗಿದೆ ಎಂದು ಮೋದಿ ಹೇಳಿದ್ದಾರೆ.
ಎಂಎಸಎಂಇ ಹಾಗೂ ರಫ್ತನ್ನು ಪ್ರತಿ ಜಿಲ್ಲೆಗೆ ವಿಸ್ತರಿಲು ಯೋಜನೆ ರೂಪಿಸಲಾಗಿದೆ. ಈ ಬಜೆಟ್ ನಮ್ಮ ಸ್ಟಾರ್ಟ್ಅಪ್, ಸಂಶೋಧನೆಗೆ ಹೊಸ ಅವಕಾಶಗಳನ್ನು ಕಲ್ಪಿಸಿದೆ. ಎಂಜೆಲ್ ತೆರಿಗೆ ಪದ್ದತಿ ನಿರ್ಮೂಲನೆ ಸೇರಿದಂತೆ ಹಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದಲ್ಲಿ ಹೊಸ ಸ್ಯಾಟಲೈಟನ್ ಪಟ್ಟಣಗಳ ಅಭಿವೃದ್ಧಿಗೆ ಈ ಬಜೆಟ್ ನೆರವಾಗಲಿದೆ ಎಂದು ಮೋದಿ ಹೇಳಿದ್ದಾರೆ.
ರಕ್ಷಣಾ ಕ್ಷೇತ್ರದ ರಫ್ತು ದಾಖಲೆ ಬರೆದಿದೆ. ಈ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರವನ್ನು ಆತ್ಮನಿರ್ಭರ್ ಮಾಡಲು ಕೆಲ ಯೋಜನೆ ಘೋಷಿಸಲಾಗಿದೆ. ಪ್ರವಾಸೋಧ್ಯಮ ಕ್ಷೇತ್ರದಲ್ಲಿನ ಅವಕಾಶ, ಆದಾಯ, ಮೂಲಭೂತ ಸೌಕರ್ಯ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಕಳೆದ 10 ವರ್ಷದಲ್ಲಿ ಎನ್‌ಡಿಎ ಸರ್ಕಾರ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ತೆರಿಗೆ ಕಡಿತ ಮಾಡುವ ಮೂಲಕ ಜೀವನ ಸರಳೀಕರಣಗೊಳಿಸು ಯೋಜನೆ ರೂಪಿಸಿದೆ. ಈ ಬಜೆಟ್‌ನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಹೆದ್ದಾರಿ, ನೀರಾವರಿ ಯೋಜನೆ, ಶಕ್ತಿ ಯೋಜನೆ ಸೇರಿದಂತೆ ಹಲವು ಯೋಜನೆಗಳಿಗೂ ಈ ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಈ ಬಜೆಟ್‌ನಲ್ಲೂ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬಜೆಟ್‌ನಲ್ಲಿ ಪ್ರಮುಖವಾಗಿ ತರಕಾರಿ ಬೆಳೆಗೆ ಹೆಚ್ಚಿನ ಉತ್ತೇಜನೆ ನೀಡಲು ಅನುಕೂಲ ಮಾಡಿಕೊಡಲಾಗಿದೆ. ಎಲ್ಲರಿಗೂ ಪೋಷಣಯುಕ್ತ ಆಹಾರ ಲಭ್ಯವಾಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
Union Budget 2024 ಸರ್ಕಾರದಿಂದ ಮೊದಲ ತಿಂಗಳ ವೇತನ ಸೇರಿ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಘೋಷಣೆ!
ದೇಶದ ಬಡತನ ನಿರ್ಮೂಲನ, ಬಡತನದಿಂದ ಜನರನ್ನು ಮೇಲಕ್ಕೆತ್ತಲು ಈ ಬಜೆಟ್ ನೆರವಾಗಲಿದೆ. ಬಡವರಿಗೆ 3 ಕೋಟಿ ಮನೆ ನಿರ್ಮಾಣ, 5 ಕೋಟಿ ಆದಿವಾದಿ ಕುಟುಂಬಗಳಿಗೆ ಮೂಲಭೂತ ಸೌಕರ್ಯ, ಗ್ರಾಮೀಣ ರಸ್ತೆ ಯೋಜನೆ, 25,000 ಗ್ರಾಮಗಳ ರಸ್ತೆ ಸಂಪರ್ಕ ಯೋಜನೆಗಳಿಂದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿದೆ ಎಂದು ಮೋದಿ ಹೇಳಿದ್ದಾರೆ.