
ನವದೆಹಲಿ (ಜ.14): ಸಂಸತ್ತಿನ (Parliament)ಬಜೆಟ್ (Budget)ಅಧಿವೇಶನ (Session)ಜನವರಿ 31ರಿಂದ ಪ್ರಾರಂಭವಾಗಲಿದೆ. ರಾಷ್ಟ್ರಪತಿ (President) ಉಭಯ ಸದನಗಳನ್ನುದ್ದೇಶಿಸಿ ಮಾತನಾಡಿದ ಬಳಿಕ ಅಧಿವೇಶನಕ್ಕೆ(Session)ಚಾಲನೆ ಸಿಗಲಿದೆ. ಫೆಬ್ರವರಿ 1ರ ಬೆಳಗ್ಗೆ 11ಕ್ಕೆ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) 2022ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತ ಜನವರಿ 31ರಿಂದ ಫೆಬ್ರವರಿ 11ರವರೆಗೆ ನಡೆಯಲಿದೆ. ಇನ್ನು ಎರಡನೇ ಹಂತ ಮಾರ್ಚ್ 14ರಂದು ಪ್ರಾರಂಭವಾಗಿ ಏಪ್ರಿಲ್ 8ರಂದು ಕೊನೆಗೊಳ್ಳಲಿದೆ. ಇನ್ನು ಪ್ರತಿವರ್ಷದಂತೆ ಈ ವರ್ಷ ಕೂಡ ಆರ್ಥಿಕ ಸಮೀಕ್ಷೆಯನ್ನು ಜನವರಿ 31ರಂದು ಮಂಡಿಸಲಾಗೋದು.
ಭಾರತದಲ್ಲಿ ಒಮಿಕ್ರಾನ್(Omicron) ಹಾಗೂ ಕೋವಿಡ್ -19 (COVID-19)ಪ್ರಕರಣಗಳ ದಿಢೀರ್ ಹೆಚ್ಚಳದ ನಡುವೆಯೂ ಎಲ್ಲರ ಗಮನ ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್ (Budget) ಮೇಲೆ ಕೇಂದ್ರೀಕೃತವಾಗಿದೆ. ಕೋವಿಡ್ -19 (COVID-19) ಪರಿಹಾರದಿಂದ ಹಿಡಿದು ಆದಾಯ ತೆರಿಗೆ (Income Tax) ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಮಿತಿ (Limit) ಹೆಚ್ಚಳದ ತನಕ ಮಧ್ಯಮ ವರ್ಗದ ಜನರು 2022ನೇ ಕೇಂದ್ರ ಬಜೆಟ್ ನಲ್ಲಿ (Central Budget)ವಿತ್ತ ಸಚಿವರು ಅನೇಕ ಕ್ರಮಗಳನ್ನು ಘೋಷಿಸಬಹುದೆಂಬ ನಿರೀಕ್ಷೆ ಹೊಂದಿದ್ದಾರೆ. 'ಭಾರತದಲ್ಲಿ ಆದಾಯ ತೆರಿಗೆ ಕಾಯ್ದೆ(Income Tax Act) ಸೆಕ್ಷನ್ 80ಸಿ ಅಡಿಯಲ್ಲಿ ಬಹುತೇಕ ಜನರು ತೆರಿಗೆ ಉಳಿತಾಯದ (Income Saving) ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಸ್ತುತವಿರೋ 1.5ಲಕ್ಷ ರೂ. ಕಡಿತದ ಮಿತಿ (Dedction Limit)ತುಂಬಾ ನಿರ್ಬಂಧಗಳಿಗೊಳಪಟ್ಟಿದೆ. ಹೀಗಾಗಿ ಈ ಮಿತಿಯನ್ನು ಇನ್ನಷ್ಟು ವಿಸ್ತರಿಸಲು ಹೆಚ್ಚುವರಿ ಹೂಡಿಕೆ ಅವಕಾಶಗಳನ್ನು ಕಲ್ಪಿಸಬೇಕು. ಸುದೀರ್ಘ ಸಮಯದಿಂದ 1.5ಲಕ್ಷ ರೂ. ಮಿತಿ ಸ್ಥಿರವಾಗಿದ್ದು, ಈ ಮಿತಿಯನ್ನು ಹೆಚ್ಚಿಸಬೇಕಾದ ಅಗತ್ಯವಿದೆ' ಎಂದು ಇನ್ ಕ್ರೆಡ್ (InCred) ಕಾರ್ಯನಿರ್ವಹಣಾ ನಿರ್ದೇಶಕ ಹಾಗೂ ಗ್ರೂಪ್ ಸಿಎಫ್ಒ (executive director and group CFO) ವಿವೇಕ್ ಬನ್ಸಾಲ್ (Vivek Bansal)ತಿಳಿಸಿದ್ದಾರೆ.
Budget 2022: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಮರುಬಂಡವಾಳೀಕರಣಕ್ಕೆ ಹಣ ಮೀಸಲಿಡೋ ಸಾಧ್ಯತೆ ಕಡಿಮೆ: Icra ವರದಿ
ಕಳೆದ ಸಾಲಿನ ಬಜೆಟ್ ನಲ್ಲಿ(Budget) ಕೋವಿಡ್ -19ನಿಂದ ಜರ್ಜರಿತಗೊಂಡಿದ್ದ ಆರ್ಥಿಕತೆಗೆ ಚೈತನ್ಯ ನೀಡುವಂಥ ಉತ್ತೇಜನಕಾರಿ ಪ್ಯಾಕೇಜ್ ಗಳನ್ನು(Packages)ಕೇಂದ್ರ ಸರ್ಕಾರ ಘೋಷಿಸಿತ್ತು.ಇದ್ರಿಂದ ಭಾರತದ ಆರ್ಥಿಕತೆ ನಿರೀಕ್ಷೆಗಿಂತ ಬೇಗನೇ ಚೇತರಿಕೆ ಕೂಡ ಕಂಡಿತ್ತು. ಈ ಬಾರಿ ಮತ್ತೆ ಕೊರೋನಾ ಮೂರನೇ ಅಲೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಇದು ಮತ್ತೆ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಈ ಬಾರಿ ಕೂಡ ಸರ್ಕಾರ ಕಳೆದ ಸಾಲಿನಂತೆ ಉತ್ತೇಜನಕಾರಿ ಪ್ಯಾಕೇಜ್ ಗಳನ್ನು ಘೋಷಿಸಬಹುದೆಂಬ ನಿರೀಕ್ಷೆಯಿದೆ.
ಇನ್ನು ಕೊರೋನಾ ಕಾರಣಕ್ಕೆ ಉದ್ಯೋಗ ನಷ್ಟ, ಆದಾಯದಲ್ಲಿ ಇಳಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಗೆ ಸಿಲುಕಿರೋ ಸಾಮಾನ್ಯ ಮನುಷ್ಯ ಅರ್ಥ ಸಚಿವರು ಘೋಷಿಸೋ ಪ್ಯಾಕೇಜ್ ಗಳ ಕಡೆಗೆ ಈ ಬಾರಿ ಹೆಚ್ಚಿನ ನಿರೀಕ್ಷೆಗಳನ್ನು ಹೊತ್ತು ಕುಳಿತಿರೋದು ಮಾತ್ರ ಸುಳ್ಳಲ್ಲ.ವೇತನ (Salary) ಪಡೆಯುತ್ತಿರೋ ಉದ್ಯೋಗಿಗಳು ಕೂಡ ಬಜೆಟ್ ನಲ್ಲಿ ಸರ್ಕಾರ ವರ್ಕ್ ಫ್ರಂ ಹೋಮ್ ( Work From Home) ಭತ್ಯೆ (Allowance) ಘೋಷಿಸೋ ಜೊತೆಗೆ ಕೊರೋನಾ ಕಾರಣದಿಂದ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸಲು ವ್ಯಯಿಸಿದ ವೆಚ್ಚಗಳಿಗೆ (Expenses) ತೆರಿಗೆ ವಿನಾಯ್ತಿ (Tax relief) ನೀಡಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.ಸರ್ಕಾರ 50,000 ರೂ. ವರ್ಕ್ ಫ್ರಂ ಹೋಮ್ ಭತ್ಯೆ ಹಾಗೂ ಒಂದು ಲಕ್ಷ ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction)ಘೋಷಿಸಬಹುದೆಂಬ ನಿರೀಕ್ಷೆ ಹೊಂದಿದ್ದಾರೆ.
Budget 2022 :ಕೈಗಾರಿಕಾ ವಲಯಕ್ಕೆ ಸಂಬಂಧಿಸಿ ವಿತ್ತ ಸಚಿವರಿಗೆ 12 ಸಲಹೆ ನೀಡಿದ FICCI
ಕೋವಿಡ್ ಚಿಕಿತ್ಸೆಗೆ ವ್ಯಯಿಸಿದ ಹಣದ ಮೇಲೆ ತೆರಿಗೆ ಕಡಿತ ನೀಡಬೇಕೆಂಬುದು ತೆರಿಗೆ ತಜ್ಞರ ಅಭಿಪ್ರಾಯವಾಗಿದೆ. ಇನ್ನು ಕೊರೋನಾ ಸೋಂಕಿತರಿಗೆ ನೆರವಿನ ರೂಪದಲ್ಲಿ ನೀಡಿದ ಹಣದ ಮೇಲೂ ತೆರಿಗೆ ವಿನಾಯ್ತಿ ನೀಡಬೇಕು ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.