ಬಜೆಟ್ ಬೆನ್ನಲ್ಲೇ ಷೇರು ಮಾರುಕಟ್ಟೆ ಜಿಗಿತ; 22 ವರ್ಷಗಳ ಬಳಿಕ ದಾಖಲೆ!

By Suvarna News  |  First Published Feb 1, 2021, 6:17 PM IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬಳಿಕ ಷೇರು ಮಾರುಕಟ್ಟೆ ದಾಖಲೆ ಜಿಗಿತ ಕಂಡಿದೆ. ಕಳೆದ 22 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶೇಕಡಾ 5 ರಷ್ಟು ಜಿಗಿತ ಕಂಡಿದೆ. ಕೇಂದ್ರದ ಬಜೆಟ್ ಹಾಗೂ ಷೇರು ಮಾರುಕಟ್ಟೆ ದಾಖಲೆ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ನವದೆಹಲಿ(ಫೆ.01): ಕೊರೋನಾ ಹೊಡೆತ, ಆರ್ಥಿಕ ಕುಸಿತ ಸೇರಿದಂತೆ ಹಲವು ಸವಾಲುಗಳ ನಡುವೆ 2021-22ರ ಆಯವ್ಯಯಗಳ ಕೇಂದ್ರ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಕುರಿತು ಚರ್ಚೆ ಇದೀಗ ಜೋರಾಗುತ್ತಿದೆ. ಆದರೆ ಬಜೆಟ್ ಭಾಷಣ ಪೂರ್ಣಗೊಳ್ಳುತ್ತಿದ್ದಂತೆ, ಇತ್ತ ಷೇರುಮಾರುಕಟ್ಟೆಯಲ್ಲಿ ದಾಖಲೆಯ ಜಿಗಿತ ಕಂಡಿದೆ.

ಬೆಂಬಲ ಬೆಲೆ ಹೆಚ್ಚಳ, ಆಹಾರ ಧಾನ್ಯ ಖರೀದಿಗೆ 1.72 ಲಕ್ಷ ಕೋಟಿ; ಕೃಷಿಗೆ ಖುಷಿ ನೀಡಿದ ಬಜೆಟ್!

Tap to resize

Latest Videos

undefined

ಸೆನ್ಸೆಕ್ಸ್ ಷೇರುಮಾರುಕಟ್ಟೆ ಸೂಚ್ಯಂಕ 2,200 ಅಂಕ ಜಿಗಿತ ಕಂಡಿದೆ. ಇದು ಭಾರತದ ಕೇಂದ್ರ ಬಜೆಟ್ ದಿನದ ಇತಿಹಾಸದಲ್ಲಿ ಕಂಡ ಅತ್ಯಂತ ಗರಿಷ್ಠ ಏರಿಕೆಯಾಗಿದೆ. ಇಷ್ಟೇ ಅಲ್ಲ ಬಜೆಟ್ ದಿನ ಷೇರು ಪೇಟೆ ಕಳೆದ 22 ವರ್ಷಗಳಿಂದ ಶೇಕಡಾ 5 ರಷ್ಟು ಏರಿಕೆ ಕಂಡಿಲ್ಲ.  ಫೆಬ್ರವರಿ 27, 1999ರ ಬಜೆಟ್ ದಿನ ಷೇರು ಪೇಟೆ 5.13% ಏರಿಕೆ ಕಂಡಿತ್ತು. ಬಳಿಕ ಇದೇ ಮೊದಲ ಬಾರಿಗೆ 5% ಏರಿಕೆ ಕಂಡಿದೆ.

2,314.84 ಅಂಕ ಏರಿಕೆ ಕಂಡಿದ್ದ(ಶೇಕಾಡ 5) ಸೆನ್ಸೆಕ್ಸ್  48,600.61 ರಲ್ಲಿ ದಿನದ ವಹಿವಾಟಿನ ಅಂತ್ಯಗೊಳಿಸಿತು. ಇನ್ನು ನಿಫ್ಟಿ  ಶೇಕಡಾ 4.74 ರಷ್ಟು ಏರಿಕೆ ಕಂಡಿದ್ದು, 14,281.20 ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು.

ಬಜೆಟ್ ಮಂಡನೆ ದಿನ ಷೇರು ಮಾರುಕಟ್ಟೆಯಲ್ಲಾದ ಏರಿಳಿತದ ವಿವರ

click me!