ಕೊರೋನಾ ಮಧ್ಯೆ ಬಜೆಟ್ ಅಗ್ನಿ ಪರೀಕ್ಷೆ, ನಿರ್ಮಲಾ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ!

Published : Feb 01, 2021, 04:37 PM ISTUpdated : Feb 01, 2021, 04:47 PM IST
ಕೊರೋನಾ ಮಧ್ಯೆ ಬಜೆಟ್ ಅಗ್ನಿ ಪರೀಕ್ಷೆ, ನಿರ್ಮಲಾ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ!

ಸಾರಾಂಶ

ಕೊರೋನಾ ಮಧ್ಯೆ ಆರ್ಥಿಕತೆಗೆ ಟಾನಿಕ್ ನೀಡುವ ಸವಾಲು| ನಿರ್ಮಲಾ ಸೀತಾರಾಮನ್ ಲೆಕ್ಕಾಚಾರಕ್ಕೆ ಭೇಷ್ ಎಂದ ಪಿಎಂ ಮೋದಿ| ಭಾರತ ಎದುರಿಸಬೇಕಾಗಿರುವ ಎಲ್ಲಾ ಸವಾಲುಗಳನ್ನು ಈ ಬಜೆಟ್ ಸ್ವೀಕರಿಸುವ ಸಾಮರ್ಥ್ಯ ಪ್ರದರ್ಶಿಸಿದೆ

ನವದೆಹಲಿ(ಫೆ. 01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ 2021ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೊರೋನಾದಿಂದಾಗಿ ನಲುಗಿದ್ದ ದೇಶದ ಆರ್ಥಿಕತೆಗೆ ಬಜೆಟ್ ಮೂಲಕ ಟಾನಿಕ್ ನೀಡಿರುವ ನಿರ್ಮಲಾ ಲೆಕ್ಕಾಚಾರವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. 

"

ಕೊರೋನಾ ಸೇರಿ ಪ್ರಸ್ತುತ ಭಾರತ ಎದುರಿಸಬೇಕಾಗಿರುವ ಎಲ್ಲಾ ಸವಾಲುಗಳನ್ನು ಈ ಬಜೆಟ್ ಸ್ವೀಕರಿಸುವ ಸಾಮರ್ಥ್ಯ ಪ್ರದರ್ಶಿಸಿದೆ. ಬಜೆಟ್ ಮಂಡಿಸುವ ಸವಾಲು ಸ್ವೀಕರಿಸಿ, ಅದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ನಿಜಕ್ಕೂ ಅಭಿನಂನೆಗೆ ಅರ್ಹ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಜೆಟ್ ಆತ್ಮನಿರ್ಭರ್ ಭಾರತದತ್ತ ದೃಢ ಹೆಜ್ಜೆಯನ್ನಿಟ್ಟಿದ್ದು, ಭಾರತೀಯರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿದ್ದಕ್ಕೆ ನಿರ್ಮಲಾ ಸೀತಾರಾಮನ್ ತಂಡಕ್ಕೆ ಅಭಿನಂದನೆ. ಕೊರೋನಾನಾ ಹಾವಳಿ ನಡುವೆ ದೇಶದ ಅರ್ಥವ್ಯವಸ್ಥೆಯನ್ನು ನಿಗದಿತ ಮಾರ್ಗದಲ್ಲಿ ಮುನ್ನಡೆಸುವುದು ಸುಲಭದ ವಿಚಾರವಲ್ಲ. ಹೀಗಿದ್ದರೂ ಈ ಬಾರಿಯ ಬಜೆಟ್ ಈ ನಿಟ್ಟಿನಲ್ಲಿ ನಮ್ಮನ್ನು ಪ್ರೆರೇಪಿಸುವ ಕೆಲಸ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಷ್ಟ ಎದುರಿಸುತ್ತಿರುವ ಉದ್ಯಮಗಳನ್ನು ಮೇಲೆಕ್ಕೆತ್ತಲು ಈಗಾಗಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಈ ಬಜೆಟ್ ಈ ಹಿಂದೆ ಘೋಷಣೆ ಮಾಡಲಾದ ಪ್ಯಾಕೇಜ್‌ಗೆ ಪೂರಕವಾಗಿ ಕೆಲಸ ಮಾಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Business Idea: ಕಡಿಮೆ ಬಂಡವಾಳ, ಅಧಿಕ ಆದಾಯ.. ಎಂದಿಗೂ ಲಾಸ್‌ ಆಗದ ವ್ಯವಹಾರಗಳಿವು!
Whatsapp ಮೂಲಕವೂ ಗ್ಯಾಸ್​ ಸಿಲಿಂಡರ್​ ಬುಕಿಂಗ್​ಗೆ ಅವಕಾಶ: ಸಂಪೂರ್ಣ ಡಿಟೇಲ್ಸ್​ ಇಲ್ಲಿದೆ