15 ಸಾವಿರ ಮಾದರಿ ಶಾಲೆ, 100 ಹೊಸ ಸೈನಿಕ ಶಾಲೆ: ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ ಕೊಡುಗೆ!

By Suvarna News  |  First Published Feb 1, 2021, 5:41 PM IST

ನಿರ್ಮಲಾ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೇನು ಮೀಸಲು?| 15 ಸಾವಿರ ಮಾದರಿ ಶಾಲೆ, 100 ಹೊಸ ಸೈನಿಕ ಶಾಲೆ| ರಾಷ್ಟ್ರೀಯ  ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ 


ನವದೆಹಲಿ(ಜ.01): ರೈತ ಪ್ರತಿಭಟನೆ, ಕೊರೋನಾ ಮಹಾಮಾರಿಯಿಂದಾಗಿ ನಲುಗಿರುವ ದೇಶಕ್ಕೆ ಆರ್ಥಿಕ ಬಲ ತುಂಬುವ ನಿಟ್ಟಿನಲ್ಲಿ ಇಂದು ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಅಳೆದು, ತೂಗಿ ಎಲ್ಲಾ ಲೆಕ್ಕಾಚಾರಗಳನ್ನು ಮಾಡಿ ಮಂಡಿಸಿರುವ ಈ ಬಜೆಟ್‌ನಲ್ಲಿ ಬಹುತೇಕ ಎಲ್ಲಾ ಕ್ಷೇತ್ರಗಳಿಗೂ ಅನುದಾನ ಘೋಷಿಸಿದ್ದಾರೆ. ಹಾಗಾದ್ರೆ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುದಾನವೇನು? ಹೊಸ ಯೋಜನೆಗಳೇನು? ಇಲ್ಲಿದೆ ವಿವರ

ಶಿಕ್ಷಣ ಕ್ಷೇತ್ರಕ್ಕೆ ಬಜೆಟ್ ಅನುದಾನ ಹೀಗಿದೆ

Tap to resize

Latest Videos

undefined

* ಸಂಶೋಧನೆಗೆ ಹೆಚ್ಚು ಒತ್ತು, ಐದು ವರ್ಷದಲ್ಲಿ 50,000 ಕೋಟಿ ರೂ. ವೆಚ್ಚ 

* ರಾಷ್ಟ್ರೀಯ  ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ

* ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂದರ್ಭದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ದೊಡ್ಡ ಹೆಜ್ಜೆ

* ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪನೆಗೆ ಆಯೋಗ ರಚನೆಗೆ ಈ ವರ್ಷ ಕಾಯ್ದೆ ಜಾರಿ

* ಒಂದೇ ವೇದಿಕೆಯಡಿ ಗುಣಮಟ್ಟ ನಿಗದಿ, ಮಾನ್ಯತೆ, ನಿಯಂತ್ರಣ ಹಾಗೂ ಹಣಕಾಸು ನೆರವಿನ ನಾಲ್ಕು ಪ್ರತ್ಯೇಕ ವಿಭಾಗ

* ಲೇಹ್‌ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆ 

* ಶಾಲಾ ಶಿಕ್ಷಣದಲ್ಲಿ 15,000ಕ್ಕೂ ಹೆಚ್ಚು ಶಾಲೆಗಳನ್ನು ಗುಣಾತ್ಮಕವಾಗಿ ಬಲಪಡಿಸಲಾಗುತ್ತದೆ

* ಆದಿವಾಸಿ ಪ್ರದೇಶದಲ್ಲಿ 758 ಏಕಲವ್ಯ ಶಾಲೆಗಳು ಆರಂಭ

* 15,000 ಮಾದರಿ ಶಾಲೆ, 100 ನೂತನ ಸೈನಿಕ ಶಾಲೆ 

click me!