
ಮಂಗಳೂರು(ಮೇ.29): ಕೋವಿಡ್ 2ನೇ ಅಲೆಯ ಸಂಕಷ್ಟದ ನಡುವೆಯೂ ಹೈನುಗಾರರಿಗೆ ನೆರವಾಗಲು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ನಿರ್ಧರಿಸಿದ್ದು ಜೂನ್ 1ರಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಲು ಖರೀದಿಸುವವರಿಗೆ ಲೀಟರ್‌ಗೆ ಹೆಚ್ಚುವರಿ ಹಾಲನ್ನು ಕೊಡುಗೆಯಾಗಿ ನೀಡಲಿದೆ.
ರೈತರಿಂದ ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು KMF ಚಿಂತನೆ..!
ಅರ್ಧ ಲೀಟರ್ ಹಾಲಿಗೆ 20 ಎಂ.ಎಲ್. 1 ಲೀಟರ್‌ಗೆ 40 ಎಂ.ಎಲ್. ಹೆಚ್ಚುವರಿ ಹಾಲನ್ನು ಪ್ಯಾಕೆಟ್‌ನಲ್ಲೇ ತುಂಬಿಸಿ ಗ್ರಾಹಕರಿಗೆ ಉಚಿತವಾಗಿ ನೀಡಲಿದೆ. ಗ್ರಾಹಕರು ನಿಗದಿತ ಲೀಟರ್‌ಗೆ ಮಾತ್ರ ಈಗಿನಂತೆ ದರ ಪಾವತಿಸಿದರೆ ಸಾಕಾಗುತ್ತದೆ. ಪ್ರಸಕ್ತ ಲಾಕ್ಡೌನ್ ಇರುವುದರಿಂದ ಲೀಟರ್‌ಗಟ್ಟಲೆ ಹಾಲು ಒಕ್ಕೂಟಗಳಲ್ಲಿ ಶೇಖರಣೆಯಾಗುತ್ತಿದೆ.
ಹಾವೇರಿ ಮೆಗಾ ಡೇರಿಗೆ ಅಸ್ತು: ಹೈನುಗಾರರಲ್ಲಿ ಸಂತಸ
ಇಷ್ಟೊಂದು ಸಂಗ್ರಹವಾಗುವ ಹಾಲನ್ನು ಏನು ಮಾಡುವುದು ಎಂಬ ಬಗ್ಗೆ ಒಕ್ಕೂಟಗಳು ಚಿಂತನೆ ನಡೆಸುತ್ತಿವೆ. ದ.ಕ.ದಲ್ಲಿ ಹೈನುಗಾರರ ಹಿತರಕ್ಷಣೆ ಸಲುವಾಗಿ ಹಾಲು ಖರೀದಿಯನ್ನು ಸ್ಥಗಿತಗೊಳಿಸದೇ ಇರಲು ಒಕ್ಕೂಟ ತೀರ್ಮಾನಿಸಿದೆ. ಅದರ ಬದಲು ಖರೀದಿದಾರರಿಗೆ ಹೆಚ್ಚುವರಿ ಉಚಿತ ಹಾಲು ನೀಡಲು ಉದ್ದೇಶಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.