ಬ್ಲ್ಯಾಕ್‌ ಫಂಗಸ್‌ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ!

By Kannadaprabha News  |  First Published May 29, 2021, 8:01 AM IST

* ಬ್ಲ್ಯಾಕ್‌ ಫಂಗಸ್‌ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ

* ಲಸಿಕೆ, ಚಿಕಿತ್ಸಾ ಉಪಕರಣ ತೆರಿಗೆ ದರ ಬದಲಿಲ್ಲ

* ಜಿಎಸ್‌ಟಿ ಮಂಡಳಿಯಿಂದ ನಿರ್ಧಾರ


ನವದೆಹಲಿ(ಮೇ.29): ಕೊರೋನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತಿರುವ ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ಬಳಸಲಾಗುವ ಆಂಫೋಟೆರಿಸಿನ್‌-ಬಿ ಔಷಧದ ಮೇಲಿನ ಆಮದು ಸುಂಕವನ್ನು ಶೇ.5ರಿಂದ ಶೂನ್ಯಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಶುಕ್ರವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಮಹತ್ವದ ನಿರ್ಧಾರಗಳು

Tap to resize

Latest Videos

* ಆಂಫೋಟೆರಿಸಿನ್‌-ಬಿ ಔಷಧದ ಮೇಲಿನ ಶೇ.5ರಷ್ಟುಆಮದು ಸುಂಕ ರದ್ದು.

* ಲಸಿಕೆ, ಚಿಕಿತ್ಸಾ ಉಪಕರಣಗಳ ಮೇಲಿನ ತೆರಿಗೆ ತಕ್ಷಣಕ್ಕೆ ರದ್ದಿಲ್ಲ. ವಿಷಯ ಸಚಿವರ ಸಮಿತಿಗೆ

* ವಿದೇಶದಿಂದ ಆಮದಾಗುವ ಕೋವಿಡ್‌ ಸಂಬಂಧಿ ವಸ್ತುಗಳ ಐ-ಜಿಎಸ್‌ಟಿ ವಿನಾಯ್ತಿ ವಿಸ್ತರಣೆ

* ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟಭರಿಸಲು ಕೇಂದ್ರದಿಂದ 1.58 ಲಕ್ಷ ಕೋಟಿ ಸಾಲ

* ಜಿಎಸ್‌ಟಿ ಜಾರಿಯಿಂದಾದ ನಷ್ಟಭರಿಸುವ ಯೋಜನೆಯನ್ನು 2022ರ ವಿಸ್ತರಣೆ ಬಗ್ಗೆ ನಿರ್ಧಾರಕ್ಕೆ ವಿಶೇಷ ಸಭೆ

* ಸಣ್ಣ ಹೂಡಿಕೆದಾರರು ಜಿಎಸ್‌ಟಿಯನ್ನು ವಿಳಂಬವಾಗಿ ಸಲ್ಲಿಸಿದರೆ ವಿಧಿಸುವ ದಂಡದ ಪ್ರಮಾಣದಲ್ಲಿ ಇಳಿಕೆ.

click me!