ಬ್ಯಾಕಿಂಗ್ ನಿಯಮ ಉಲ್ಲಂಘನೆ: HDFC ಬ್ಯಾಂಕ್‌ಗೆ 10 ಕೋಟಿ ರೂಪಾಯಿ ದಂಡ!

By Suvarna NewsFirst Published May 28, 2021, 10:11 PM IST
Highlights
  • HDFC ಬ್ಯಾಂಕ್‌ಗೆ ಬರೋಬ್ಬರಿ 10 ಕೋಟಿ ರೂಪಾಯಿ ದಂಡ ವಿಧಿಸಿದ RBI  
  • ಸಾಲ ವ್ಯವಹಾರದಲ್ಲಿ ಅಕ್ರಮ ಬಯಲಿಗೆ
  • ನಿಯಮ ಉಲ್ಲಂಘಿಸಿದ ಬ್ಯಾಂಕ್‌ಗೆ ದುಬಾರಿ ದಂಡ ವಿಧಿಸಿದ ರಿಸರ್ವ್ ಬ್ಯಾಂಕ್

ನವದೆಹಲಿ(ಮೇ.28): ಬ್ಯಾಂಕಿಂಗ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಹೆಚ್‌ಡಿಎಫ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್ 10 ಕೋಟಿ ರೂಪಾಯಿ ದಂಡ ವಿಧಿಸಿದೆ. ಸಾಲದ ಪೋರ್ಟ್‌ಪೊಲಿಯೋದಲ್ಲಿ ಅಕ್ರಮ ನಡೆದಿರುವುದನ್ನು ಆರ್‌ಬಿಐ ಪತ್ತೆ ಹಚ್ಚಿದೆ. ಹೀಗಾಗಿ 10 ಕೋಟಿ ರೂಪಾಯಿ ದಂಡ ವಿಧಿಸಿದೆ.

ಚಲಾವಣೆಯಿಂದ 2 ಸಾವಿರ ಮುಖ ಬೆಲೆಯ ನೋಟು ಹಿಂದೆ ಪಡೆಯುವ ಬಗ್ಗೆ ಮತ್ತಷ್ಟು ಸುಳಿವು?

ಸಾಲ ವ್ಯವಹಾರದಲ್ಲಿನ ಅಕ್ರಮ ಕುರಿತು ದೂರು ದಾಖಲಾಗಿತ್ತು. ಹೀಗಾಗಿ ರಿವಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಚಾರಣೆ ನಡೆಸಿತ್ತು.  ವಿಚಾರಣೆಯ ವೇಳೆ ಬ್ಯಾಂಕ್ ಒದಗಿಸಿದ  ಸ್ಪಷ್ಟೀಕರಣ, ದಾಖಲೆಗಳ ಪರಿಶೀಲನೆ ಪರಿಗಣಿಸಿದ ಆರ್‌ಬಿಐ ಈ ಕ್ರಮ ಕೈಗೊಂಡಿದೆ. 

ಈ ಕುರಿತು HDFC ಬ್ಯಾಂಕ್‌ಗೆ ಆರ್‌ಬಿಐ ನೊಟೀಸ್ ನೀಡಿತ್ತು. ಬ್ಯಾಕಿಂಗ್ ರೆಗ್ಯುಲೇಶನ್ ಕಾಯ್ದೆ, 1949ರ ಸೆಕ್ಷನ್6(2) ಹಾಗೂ ಸೆಕ್ಷನ್ 8ರ ನಿಯಮಾವಳಿ ಉಲ್ಲಂಘಿಸಿದ ಕಾರಣ ಇದೀಗ ಹೆಚ್‌ಡಿಎಫ್‌ಸಿ ಬ್ಯಾಂಕ್ ದುಬಾರಿ ದಂಡ ಕಟ್ಟಬೇಕಿದೆ. ಆರ್‌ಬಿಐ ಕಾಯ್ದೆಯಲ್ಲಿ ಸೆಕ್ಷನ್ 47A (1) (c) ಹಾಗೂ ಸೆಕ್ಷನ್ 46(4)(i) ಕಾಯ್ದೆ ಅಡಿ ರಿಸರ್ವ್ ಬ್ಯಾಂಕ್ ದಂಡ ಹಾಕಿದೆ.

ಶಿಕ್ಷಣ ಸಾಲ ಪಡೆಯುವ ಮುನ್ನ ಈ ಸಂಗತಿಗಳ ಬಗ್ಗೆ ತಿಳಿದಿರಲಿ..!.

ಇದು ಬ್ಯಾಂಕ್ ಹಾಗೂ ಗ್ರಾಹಕರ ನಡುವಿನ ವ್ಯವಾಹಾರದಲ್ಲಿನ ಒಪ್ಪಂದದ ವಿರುದ್ಧ ತೆಗೆದುಕೊಂಡ ಕ್ರಮ ಇದಲ್ಲ. ಆದರೆ ಥರ್ಡ್ ಪಾರ್ಟಿ ಹಣಕಾಸೇತರ ದಾಖಲಾತಿಗಳಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿದೆ. ಮಾರ್ಕೆಂಟಿಂಗ್ ಹಾಗೂ ಥರ್ಡ್ ಪಾರ್ಟಿ ವ್ಯವಹಾರದಲ್ಲಿನ ಲೋಪಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. 

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 8 ರ ಪ್ರಕಾರ, ಸರಕುಗಳನ್ನು ಖರೀದಿಸುವುದು, ಮಾರಾಟ ಮಾಡುವುದು ಅಥವಾ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಬ್ಯಾಂಕ್ ನೇರವಾಗಿ ಅಥವಾ ಪರೋಕ್ಷವಾಗಿ ವ್ಯವಹರಿಸಲು ಸಾಧ್ಯವಿಲ್ಲ. ಆದಾಗ್ಯೂ, ಸಂಗ್ರಹಣೆ ಅಥವಾ ಸಮಾಲೋಚನೆಗಾಗಿ ಸ್ವೀಕರಿಸಿದ ವಿನಿಮಯದ ಬಿಲ್‌ಗಳಿಗೆ ಸಂಬಂಧಿಸಿದ ವ್ಯವಹಾರಗಳನ್ನು ಬ್ಯಾಂಕ್ ವಿನಿಮಯ ಮಾಡಿಕೊಳ್ಳಬಹುದು. 

click me!