FD Scheme:ಏಪ್ರಿಲ್ 1ರಿಂದ ಈ ಎರಡು ಬ್ಯಾಂಕುಗಳ ವಿಶೇಷ ಸ್ಥಿರ ಠೇವಣಿ ಸ್ಥಗಿತ?

Suvarna News   | Asianet News
Published : Mar 27, 2022, 11:34 AM IST
FD Scheme:ಏಪ್ರಿಲ್ 1ರಿಂದ ಈ ಎರಡು ಬ್ಯಾಂಕುಗಳ ವಿಶೇಷ ಸ್ಥಿರ ಠೇವಣಿ ಸ್ಥಗಿತ?

ಸಾರಾಂಶ

*ಕೋವಿಡ್-19 ಸಮಯದಲ್ಲಿ ಹಿರಿಯ ನಾಗರಿಕರಿಗಾಗಿ ವಿಶೇಷ FD ಪ್ರಾರಂಭಿಸಿರೋ ಬ್ಯಾಂಕುಗಳು *ಎಚ್ ಡಿಎಫ್ ಸಿ ಹಾಗೂ ಬ್ಯಾಂಕ್ ಆಫ್ ಬರೋಡ ಈ ಯೋಜನೆ ನಿಲ್ಲಿಸೋ ಸಾಧ್ಯತೆ *2022ರ ಮಾರ್ಚ್ 31ಕ್ಕೆ ಈ ಯೋಜನೆ ಅಂತ್ಯ

Business Desk:ಕೋವಿಡ್-19 (COVID-19) ಪೆಂಡಾಮಿಕ್ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (Sate Bank of India), ಬ್ಯಾಂಕ್ ಆಫ್ ಬರೋಡ (Bank of Baroda) ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ (HDFC Bank) ಸೇರಿದಂತೆ ಕೆಲವು ಬ್ಯಾಂಕುಗಳು ಹಿರಿಯ ನಾಗರಿಕರಿಗೆ ನೆರವಾಗಲು ಅಧಿಕ ಬಡ್ಡಿದರ (Interest)ನೀಡೋ ವಿಶೇಷ ಸ್ಥಿರ ಠೇವಣಿಗಳನ್ನು ಪ್ರಾರಂಭಿಸಿದವು. ಸುಮಾರು ಎರಡು ವರ್ಷಗಳ ಹಿಂದೆ ಸಣ್ಣ ಅವಧಿಗೆ ಪ್ರಾರಂಭಿಸಿದ ಈ ವಿಶೇಷ ಎಫ್ ಡಿ (FD) ಯೋಜನೆಗಳನ್ನು ಎಚ್ ಡಿಎಫ್ ಸಿ ಹಾಗೂ ಬ್ಯಾಂಕ್ ಆಫ್ ಬರೋಡ ಏಪ್ರಿಲ್ 1ರಿಂದ ನಿಲ್ಲಿಸಲಿವೆ.

ವಿಶೇಷ ಎಫ್ ಡಿ (FD) ಯೋಜನೆಯನ್ನು ಅಲ್ಪಾವಧಿಗೆ ಪ್ರಾರಂಭಿಸಲಾಗಿತ್ತು, ಆದ್ರೆ ತೆರಿಗೆ ವ್ಯವಸ್ಥೆ ಮೇಲೆ ಕೋವಿಡ್ -19 (COVID-19) ದೊಡ್ಡ ಪ್ರಮಾಣದಲ್ಲಿ ಪರಿಣಾಮ ಬೀರಿದ ಹಿನ್ನೆಲೆಯಲ್ಲಿ ಬ್ಯಾಂಕುಗಳು (Banks) ಈ ಯೋಜನೆಯನ್ನು ವಿಸ್ತರಿಸಿದ್ದವು. ಆದ್ರೆ, ಪ್ರಸ್ತುತ ಆರ್ಥಿಕತೆ ಚೇತರಿಸಿಕೊಳ್ಳುತ್ತಿರೋ ಹಿನ್ನೆಲೆಯಲ್ಲಿ  ಎಚ್ ಡಿಎಫ್ ಸಿ (HDFC) ಹಾಗೂ ಬ್ಯಾಂಕ್ ಆಫ್ ಬರೋಡ  (Bank of Baroda) ಈ ಯೋಜನೆ ನಿಲ್ಲಿಸಲಿವೆ. ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆಯ ಅಂತಿಮ ಗಡುವು ಸಮೀಪಿಸುತ್ತಿದ್ದು, ಈ ಬ್ಯಾಂಕುಗಳು ದಿನಾಂಕ ವಿಸ್ತರಣೆ ಮಾಡೋ ಬಗ್ಗೆ ಈ ತನಕ ಯಾವುದೇ ಘೋಷಣೆ ಮಾಡಿಲ್ಲ. 2022ರ ಮಾರ್ಚ್ 31ಕ್ಕೆ ಈ ಯೋಜನೆ ಕೊನೆಗೊಳ್ಳಲಿದೆ. ಹೀಗಾಗಿ ಇದಕ್ಕೂ ಮುನ್ನ ಬ್ಯಾಂಕುಗಳು ಈ ಯೋಜನೆ ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ನೀಡದಿದ್ರೆ ಅದು ಕೊನೆಗೊಂಡಿದೆ ಎಂದೇ ಅರ್ಥ. 

ಮುಂದಿನ ವಾರ 5 ದಿನ ಬ್ಯಾಂಕ್‌ ಬಂದ್‌..!

ಎಚ್ ಡಿಎಫ್ ಸಿ ಹಿರಿಯ ನಾಗರಿಕರ ಕಾಳಜಿ ಎಫ್ ಡಿ
ಎಚ್ ಡಿಎಫ್ ಸಿ ಬ್ಯಾಂಕ್ ಪ್ರಾರಂಭದಲ್ಲಿ 'ಎಚ್ ಡಿಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರ ಕಾಳಜಿ ಎಫ್ ಡಿ' ಯೋಜನೆಯನ್ನು ತೆರಿಗೆ ಉಳಿಸೋ ಎಫ್ ಡಿ ಮೇಲೆ ಹೆಚ್ಚುವರಿ 25 ಬೇಸಿಕ್ ಪಾಯಿಂಟ್ಸ್ ( bps) ಬಡ್ಡಿದರದೊಂದಿಗೆ 5ರಿಂದ 10 ವರ್ಷಗಳ ಸುದೀರ್ಘ ಅವಧಿಗೆ ಪರಿಚಯಿಸಿತ್ತು. ಈ ಯೋಜನೆಯ ಕೊನೆಯ ದಿನಾಂಕ ಮಾರ್ಚ್ 31, 2022. ಹೀಗಾಗಿ ಬ್ಯಾಂಕ್ ಈ ಯೋಜನೆ ವಿಸ್ತರಣೆ ಬಗ್ಗೆ ಯಾವುದೇ ಘೋಷಣೆ ಮಾಡದಿದ್ರೆ ಏಪ್ರಿಲ್ 1ಕ್ಕೆ ಅಂತ್ಯವಾಗಲಿದೆ.

ಬ್ಯಾಂಕ್ ಆಫ್ ಬರೋಡ ವಿಶೇಷ ಎಫ್ ಡಿ ಯೋಜನೆ
ಹಿರಿಯ ನಾಗರಿಕರಿಗೆ ಬ್ಯಾಂಕ್ ಆಫ್ ಬರೋಡ (Bank of Baroda) ಕೂಡ ವಿಶೇಷ ಎಫ್ ಡಿ ಯೋಜನೆ ಪ್ರಾರಂಭಿಸಿತ್ತು. 60 ವರ್ಷ ಮೇಲ್ಪಟ್ಟ ಎಫ್ ಡಿ  ಖಾತೆದಾರರಿಗೆ ಠೇವಣಿ ಮೊತ್ತದ ಮೇಲೆ ಹೆಚ್ಚುವರಿ ಶೇ.1 ಹೆಚ್ಚುವರಿ ವಾರ್ಷಿಕ ರಿಟರ್ನ್ ಪಡೆಯಲು ಈ ಯೋಜನೆ ಅವಕಾಶ ಒದಗಿಸಿತ್ತು. ಸಾರ್ವಜನಿಕ ವಲಯದ ಬ್ಯಾಂಕ್ ಹಿರಿಯ ನಾಗರಿಕರ ಎಫ್ ಡಿ ಖಾತೆದಾರರಿಗೆ 5ರಿಂದ 7 ವರ್ಷಗಳ ಅವಧಿಗೆ  ಶೇ.0.50 ಹೆಚ್ಚುವರಿ ರಿಟರ್ನ್ (Return) ನೀಡುತ್ತಿವೆ. ಹಿರಿಯ ನಾಗರಿಕರ ತೆರಿಗೆ ಉಳಿತಾಯ ಸ್ಥಿರ ಠೇವಣಿಗಳ ಮೇಲೆ ಬ್ಯಾಂಕ್ ಹೆಚ್ಚುವರಿ 50 ಬೇಸಿಕ್ ಪಾಯಿಂಟ್ಸ್ ನೀಡುತ್ತಿವೆ. 

Pension Scheme:ಮಾಸಿಕ 9,250 ರೂ. ಪಿಂಚಣಿ ಪಡೆಯಬೇಕೇ? ಹಾಗಾದ್ರೆ ತಪ್ಪದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (Sate Bank of India) ಇತ್ತೀಚೆಗಷ್ಟೇ ಸ್ಥಿರ ಠೇವಣಿಗಳ (Fixed Deposit) ಮೇಲಿನ ಬಡ್ಡಿದರದಲ್ಲಿ (Interest rate) ಹೆಚ್ಚಳ ಮಾಡಿದೆ. ಹಿರಿಯ ನಾಗರಿಕರ ಎಫ್ ಡಿ ಮೇಲೆ ಪ್ರಸ್ತುತವಿರೋದಕ್ಕಿಂತ ಶೇ.0.5 ಹೆಚ್ಚುವರಿ ಬಡ್ಡಿದರ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ಅವಧಿ ಹೊಂದಿರೋ ಠೇವಣಿಗಳ ಮೇಲೆ ಹಿರಿಯ ನಾಗರಿಕರು  ಶೇ.3.5ದಿಂದ ಶೇ.4.10 ಬಡ್ಡಿ ಪಡೆಯಲಿದ್ದಾರೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!