
ದೇಶದಲ್ಲಿ ಎರಡು ಸಾವಿರ ರೂಪಾಯಿ ಮುಖಬೆಲೆಯೆ ನೋಟುಗಳ ಮೇಲೆ ನಿಷೇಧ ಹೇರಲಾಗಿದೆ. ಮೇ, 23ರಿಂದಲೇ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ. ಎರಡು ಸಾವಿರ ರೂಪಾಯಿ ನೋಟನ್ನು ಹೊಂದಿರುವ ಜನರು ನೋಟಿನ ಬದಲಾವಣೆಗೆ ತೊಡಗಿದ್ದಾರೆ. ಈ ವರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
3. 62 ಲಕ್ಷ ಕೋಟಿ ಮೌಲ್ಯದ ಎರಡು ಸಾವಿರ ರೂಪಾಯಿ ನೋಟು (Note) ಚಲಾವಣೆಯಲ್ಲಿ ಇತ್ತು. ಇದ್ರಲ್ಲಿ ಈವರೆಗೆ 2. 41 ಲಕ್ಷ ಕೋಟಿ ಮೌಲ್ಯದ ಹಣ ವಾಪಸ್ ಬ್ಯಾಂಕ್ ಗೆ ಬಂದಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank) ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಮೇ. 19, 2023ರಂದು, 2 ಸಾವಿರ ರೂಪಾಯಿ ನೋಟುಗಳನ್ನು ರದ್ದುಗೊಳಿಸುವುದಾಗಿ ಬ್ಯಾಂಕ್ ಹೇಳಿಕೆ ನೀಡಿತ್ತು. ನೋಟುಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆ ಮೇ. 23ರಿಂದ ಶುರುವಾಗಿತ್ತು.
10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ರೂ. ಇರ್ತಿತ್ತು!
ಶೇಕಡಾ 84ರಷ್ಟು ನೋಟು ಬ್ಯಾಂಕ್ (Bank) ಗೆ ವಾಪಸ್ : ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಕ್ತಿಕಾಂತ್ ದಾಸ್, ಈಗ ಶೇಕಡಾ 84ರಷ್ಟು ನೋಟು, ಬ್ಯಾಂಕ್ ಗೆ ಜಮಾವಣೆ ರೂಪದಲ್ಲಿ ವಾಪಸ್ ಬಂದಿದೆ ಎಂದಿದ್ದಾರೆ. ಜೂನ್ 8ರಂದು ಮಾತನಾಡಿದ್ದ ಶಕ್ತಿಕಾಂತ್ ದಾಸ್, ಆಗ 1.8 ಲಕ್ಷ ಕೋಟಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ವಾಪಸ್ ಬಂದಿದೆ ಎಂದಿದ್ದರು. ಬಹುತೇಕರು ಬ್ಯಾಂಕ್ ಖಾತೆಯಲ್ಲಿ 2 ಸಾವಿರ ರೂಪಾಯಿ ನೋಟನ್ನು ಜಮಾ ಮಾಡಿದ್ದಾರೆ. ಉಳಿದವರು ಬದಲಿ ನೋಟು ಪಡೆದಿದ್ದಾರೆ. ನೋಟು ಜಮಾ ಮಾಡಲು ತರಾತುರಿ ಬೇಡ : ನಿಮ್ಮ ಬಳಿಯೂ 2 ಸಾವಿರ ರೂಪಾಯಿ ನೋಟಿದ್ದರೆ ನೀವು ಇಂದೇ ಬ್ಯಾಂಕ್ ಗೆ ಹೋಗಿ ಅದನ್ನು ಜಮಾ ಮಾಡುವ ಅಗತ್ಯವಿಲ್ಲ. ರಿಸರ್ವ್ ಬ್ಯಾಂಕ್ ನೋಟನ್ನು ಬದಲಿಸಲು ಅಥವಾ ಜಮಾ ಮಾಡಲು ಸಾಕಷ್ಟು ಅವಕಾಶವನ್ನು ನೀಡಿದೆ. ನೀವು ಸೆಪ್ಟೆಂಬರ್ 20, 2023ರ ಒಳಗೆ ಬ್ಯಾಂಕ್ ಗೆ ಹೋಗಿ ನಿಮ್ಮ ಬಳಿ ಇರುವ 2 ಸಾವಿರ ರೂಪಾಯಿ ನೋಟನ್ನು ಜಮಾ ಮಾಡಬಹುದು. ಜಮಾವಣೆ ಅಥವಾ ಬದಲಾವಣೆಗೆ ಸಾಕಷ್ಟು ಸಮಯವಿರುವ ಕಾರಣ ಜನರು, ತರಾತುರಿಯಲ್ಲಿ ಹಣ ಜಮಾ ಮಾಡಬೇಕಾಗಿಲ್ಲ ಎಂದು ಶಕ್ತಿಕಾಂತ್ ದಾಸ್ ಕೂಡ ಹೇಳಿದ್ದಾರೆ.
2000 ನೋಟು ಜಾರಿಗೆ ಬಂದಿದ್ದು ಎಂದು? : ನವೆಂಬರ್ 2016ರಲ್ಲಿ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಆದ್ರೆ 2018 – 2019ರಲ್ಲಿಯೇ 2 ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು.
ಆರ್ಥಿಕ ಸ್ಥಿತಿ ಮೇಲೆ ಯಾವುದೇ ಪರಿಣಾಮವಿಲ್ಲ: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿದ್ದರಿಂದ ಭಾರತದ ಆರ್ಥಿಕ ಸ್ಥಿತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೆಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಆರ್ಥಿಕ ವರ್ಷದ ಬೆಳವಣಿಗೆ ದರ ಶೇ.6.5ರಷ್ಟಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಇನ್ನೊಂದೆಡೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆ ಪ್ರಕಾರ, 2 ಸಾವಿರ ರೂಪಾಯಿ ನೋಟುಗಳ ಮೇಲೆ ನಿಷೇಧ ಹೇರಿರುವ ಕಾರಣ ಭಾರತದ ಆರ್ಥಿಕ ಬೆಳವಣಿಗೆ ಶೇಕಡಾ 6.5ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ.
ವೈಟ್‌ಹೌಸ್ ಡಿನ್ನರ್‌ಗೆ ನೀತಾ ಅಂಬಾನಿ ಧರಿಸಿದ್ದ ಸೀರೆ ತಯಾರಿಸೋಕೆ ಬರೋಬ್ಬರಿ 1 ತಿಂಗ್ಳು ಬೇಕಾಯ್ತಂತೆ!
2 ಸಾವಿರ ರೂಪಾಯಿ ನೋಟು ಬದಲಾವಣೆ ನಿಯಮ :
• ಒಂದು ಬಾರಿ 20 ಸಾವಿರ ರೂಪಾಯಿ ಮೌಲ್ಯದ ನೋಟನ್ನು ನೀವು ಬದಲಿಸಬಹುದು
• ಹಣ ಬದಲಾವಣೆಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ.
• ಬ್ಯಾಂಕ್ ಖಾತೆ ಹೊಂದಿರುವವರು ತಮ್ಮ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಹಣವನ್ನು ಜಮಾ ಮಾಡಬಹುದು.
• ಬ್ಯಾಂಕ್ ಖಾತೆ ಇಲ್ಲದ ಜನರು ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ, ನೋಟು ನೀಡಿ ಅದನ್ನು ಬದಲಿಸಿಕೊಳ್ಳಬಹುದು.
• ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿಯೂ ನೀವು ನೋಟು ಪಡೆಯಬಹುದು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.