ಟ್ವಿಟ್ಟರ್ ಲೋಗೋ ಚೇಂಜ್‌: ಹಕ್ಕಿಯನ್ನೂ ಕೆಲಸದಿಂದ ತೆಗೆದ ಎಲಾನ್ ಮಸ್ಕ್..!

By Anusha KbFirst Published Jul 24, 2023, 3:25 PM IST
Highlights

ಟ್ವಿಟ್ಟರ್‌ ಮಾಲೀಕತ್ವ ವಹಿಸಿಕೊಂಡಾಗಿನಿಂದಲೂ ಒಂದಲ್ಲ, ಒಂದು ಬದಲಾವಣೆ ಮಾಡುತ್ತಿರುವ ಉದ್ಯಮಿ ಎಲಾನ್ ಮಸ್ಕ್‌ ಈಗ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದಾರೆ.

ಸ್ಯಾನ್‌ಫ್ರಾನ್ಸಿಸ್ಕೋ: ಟ್ವಿಟ್ಟರ್‌ ಮಾಲೀಕತ್ವ ವಹಿಸಿಕೊಂಡಾಗಿನಿಂದಲೂ ಒಂದಲ್ಲ, ಒಂದು ಬದಲಾವಣೆ ಮಾಡುತ್ತಿರುವ ಉದ್ಯಮಿ ಎಲಾನ್ ಮಸ್ಕ್‌ ಈಗ ಟ್ವಿಟ್ಟರ್ ಲೋಗೋವನ್ನು ಬದಲಾಯಿಸಿದ್ದಾರೆ. ಟ್ವಿಟ್ಟರ್ ಲೋಗೊ ಹಾಗೂ ಅದರ ಹೆಸರನ್ನು ಬದಲಾಯಿಸಲಾಗುತ್ತದೆ ಎಂದು ದಿನಗಳ ಹಿಂದಷ್ಟೇ ಸುದ್ದಿ ಹಬ್ಬಿತ್ತು. ಈಗ ಅದು ನಿಜವಾಗಿದ್ದು, ಹಕ್ಕಿ ಇದ್ದ ಜಾಗದಲ್ಲಿ ಎಕ್ಸ್‌ ಚಿಹ್ನೆ ಬಂದಿದೆ.  ಟ್ವಿಟ್ಟರ್ ಕಂಪನಿಯ ಮಾಲೀಕ ಹಾಗೂ ಜಗತ್ತಿನ ಶ್ರೀಮಂತ ಉದ್ಯಮಿ, ಸ್ಪೇಸ್‌ ಎಕ್ಸ್ ಸಂಸ್ಥಾಪಕನೂ ಆದ ಎಲಾನ್‌ ಮಸ್ಕ್ ಅವರೇ ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಸ್ಪಷ್ಟ ಸುಳಿವು ನೀಡಿದ್ದರು. ಶೀಘ್ರದಲ್ಲೇ ಟ್ವೀಟರ್‌ ಬ್ರ್ಯಾಂಡ್‌, ಬಳಿಕ ಹಂತಹಂತವಾಗಿ ಎಲ್ಲ ಹಕ್ಕಿಗಳಿಗೂ ವಿದಾಯ ಹೇಳುತ್ತೇವೆ ಎಂದು ಮಸ್ಕ್‌ ಅವರು ಟ್ವೀಟ್‌ ಮಾಡಿದ್ದರು. 

2022ರ ಅಕ್ಟೋಬರ್‌ನಲ್ಲಿ ಟ್ವೀಟರ್‌ ಕಂಪನಿಯನ್ನು ಖರೀದಿಸಿದ ಬಳಿಕ ಹಲವಾರು ಬದಲಾವಣೆಗಳನ್ನು ಮಸ್ಕ್ ಅವರು ತಂದಿದ್ದಾರೆ. ಈ ಪೈಕಿ ಬಹುತೇಕ ರೂಪಾಂತರಗಳು ವಿವಾದದ ಅಲೆ ಎಬ್ಬಿಸಿದ್ದೂ ಉಂಟು. ಅಲ್ಪಾವಧಿಗೆ ಟ್ವೀಟರ್‌ ಲೋಗೋದಲ್ಲಿ ಹಕ್ಕಿಗಳ ಬದಲಾಗಿ ನಾಯಿಯ ಚಿತ್ರವನ್ನೂ ಅವರು ಅಳವಡಿಸಿ ಟೀಕೆ ಎದುರಿಸಿದ್ದರು. ಮಸ್ಕ್ ತೆಕ್ಕೆಗೆ ಬರುವ ಮುನ್ನ ಟ್ವೀಟರ್‌ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಯಾಗಿತ್ತು. ಆದರೆ ಈಗ ಅದು ಮಸ್ಕ್‌ ಅವರು ಅಧ್ಯಕ್ಷರಾಗಿರುವ ಎಕ್ಸ್‌ ಕಾಪರ್‌ ಅಡಿ ಇರುವ ಒಂದು ಅಂಗಸಂಸ್ಥೆಯಾಗಿದೆ. ಎಕ್ಸ್‌ ಕಾಪರ್ ದೂರದೃಷ್ಟಿಗೆ ಅನುಗುಣವಾಗಿ ಟ್ವೀಟರ್‌ನ ಹೊಸ ಲೋಗೋ ಎಕ್ಸ್ ಚಿಹ್ನೆಯಲ್ಲೇ ಬಿಡುಗಡೆಯಾಗಿದೆ.

Bye our friend🙏🏻 You will be missed. pic.twitter.com/XQE6OB2CoM

— Fresa (@FresaFluffyFox)

Latest Videos

 

click me!