ಟಿವಿಎಸ್ ಮೋಟಾರ್ ಆಸ್ತಿ ವಿಭಜನೆ ವಿವಾದ, ಚೇರ್ಮೆನ್ ವೇಣು ಶ್ರೀನಿವಾಸ್ ಮಲ್ಲಿಕಾ ನಡುವೆ ಜಟಾಪಟಿ

Published : Oct 10, 2026, 01:42 PM IST
TVS Motor Asset Division Dispute

ಸಾರಾಂಶ

ಟಿವಿಎಸ್ ಮೋಟಾರ್ ಭಾರತದ ದೈತ್ಯ ಆಟೋಮೊಬೈಲ್ ಕಂಪನಿ. ಆದರೆ ಟಿವಿಎಸ್ ಕುಟುಂಬದ ಆಸ್ತಿ ವಿಭಜನೆಯಲ್ಲಿ ಕೋಲಾಹಲ ಶುರುವಾಗಿದೆ. ಮಕ್ಕಳಿಗೆ ಆಸ್ತಿ ವಿಭಜನೆಯಲ್ಲಿ ಭಿನ್ನಾಭಿಪ್ರಾಯ ತೀವ್ರಗೊಂಡಿದೆ.

ಚೆನ್ನೈ (ಅ.10) ಭಾರತದ ಆಟೋಮೊಬೈಲ್ ಕಂಪನಿಯಲ್ಲಿ ಟಿವಿಎಸ್ ಮೋಟಾರ್ ದೈತ್ಯ ಕಂಪನಿಯಾಗಿ ಬೆಳೆದು ನಿಂತಿದೆ. ಹಲವು ದೇಶಗಳಿಗೆ ಟಿವಿಎಸ್ ಬೈಕ್, ಸ್ಕೂಟರ್ ರಫ್ತಾಗುತ್ತಿದೆ. ಭಾರತದಲ್ಲೂ ಟಿವಿಎಸ್ ಅತ್ಯಂತ ಜನಪ್ರಿಯ ಆಟೋಮೊಬೈಲ್ ಕಂಪನಿಯಾಗಿದೆ. ಇದೀಗ ಟಿವಿಎಸ್ ಕುಟುಂಬದ ಆಸ್ತಿ ವಿಭಜನೆಯಲ್ಲಿ ಭಿನ್ನಾಭಿಪ್ರಾಯ ತೀವ್ರಗೊಂಡಿದೆ. ಕಂಪನಿ ಚೇರ್ಮೆನ್ ವೇಣು ಶ್ರೀನಿವಾಸನ್ ಹಾಗೂ ಪತ್ನಿ ಮಲ್ಲಿಕಾ ಶ್ರೀನಿವಾಸನ್ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಇಬ್ಬರು ಮಕ್ಕಳ ನಡುವೆ ಆಸ್ತಿ ಹಂಚಿಕೆ ವಿಚಾರದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಇಬ್ಬರು ಮಕ್ಕಳಿಗೆ ಆಸ್ತಿ ಹಂಚಿಕೆಯಲ್ಲಿ ಕೋಲಾಹಲ

ಟಿವಿಎಸ್ ಮೋಟಾರ್ ಕಂಪನಿ ಹಾಗೂ ಇತರ ಕೆಲ ಸಬ್ಸಿಡರಿ ಕಂಪನಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ವೇಣು ಶ್ರೀನಿವಾಸನ್ ಹಾಗೂ ಮಲ್ಲಿಕಾ ಶ್ರೀನಿವಾಸ್ ದಂಪತಿಗಳ ಇಬ್ಬರು ಮಕ್ಕಳಾದ ಲಕ್ಷ್ಮಿ ವೇಣು ಹಾಗೂ ಸುದರ್ಶನ್ ವೇಣು ನಡುವಿನ ಆಸ್ತಿ ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಕಳೆದ 18 ತಿಂಗಳಿನಿಂದ ಈ ವಿವಾದ ನಡೆಯುತ್ತಿದೆ. ಹಲವು ಸಂಧಾನ, ಮಧ್ಯಸ್ಥಿತಿಕೆ ಪ್ರಯತ್ನಗಳು ಕೈಗೂಡಿಲ್ಲ. ಇದೀಗ ಕಾನೂನು ಹೋರಾಟದ ಸೂಚನೆಗಳು ಲಭ್ಯವಾಗಿದೆ. ಈ ಮೂಲಕ ಯಶಸ್ವಿಯಾಗಿ ನಡೆಯುತ್ತಿದ್ದ ಉದ್ಯಮ ಕಾನೂನು ಹೋರಾಟದ ಮೂಲಕ ಹಳ್ಳಹಿಡಿಯುವ ಸಾಧ್ಯತೆಗಳು ಗೋಚರಿಸುತ್ತಿದೆ.

ಅಪ್ಪ ಮಗ ಹಾಗೂ ಅಮ್ಮ ಮಗಳ ಹೋರಾಟ

ಆಸ್ತಿ ವಿಭಜನೆಯಲ್ಲಿ ಟಿವಿಎಸ್ ಚೇರ್ಮನ್ ವೇಣು ಶ್ರೀನಿವಾಸನ್ ಸೂತ್ರ ಮುಂದಿಟ್ಟಿದ್ದಾರೆ. ಆದರೆ ಈ ಸೂತ್ರವನ್ನು ಪತ್ನಿ ಮಲ್ಲಿಕಾ ಶ್ರೀನಿವಾಸನ್ ಹಾೂ ಮಗಳು ಲಕ್ಷ್ಮಿ ವೇಣು ಒಪ್ಪಿಕೊಂಡಿಲ್ಲ. ಆಸ್ತಿ ವಿಭಜನೆಯಲ್ಲಿ ಚೇರ್ಮೆನ್ ವೇಣು ಶ್ರೀನಿವಾಸನ್ ಹಾಗೂ ಮಗ ಸುದರ್ಶನ್ ಶ್ರೀನಿವಾಸನ್ ಒಂದು ಪಕ್ಷವಾದರೆ, ಪತ್ನಿ ಮಲ್ಲಿಕಾ ಶ್ರೀನಿವಾಸನ್ ಹಾಗೂ ಲಕ್ಷ್ಮಿ ವೇಣು ಮತ್ತೊಂದು ಪಕ್ಷದಲ್ಲಿದ್ದಾರೆ.

ಸುದರ್ಶನ್ ವೇಣು ಸದ್ಯ ಟಿವಿಎಸ್ ಮೋಟಾರ್ ಕಂಪನಿ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಲಕ್ಷ್ಮಿ ವೇಣು ಸುಂದರಂ ಕ್ಲೇಟನ್ ಕಂಪನಿ ನಿರ್ವಹಿಸುತ್ತಿದ್ದಾರೆ. 2024ರಲ್ಲಿ ನಾಲ್ವರು ಕುಟುಂಬ ಸದಸ್ಯರು ಸಹಿ ಹಾಕಿದ ಪ್ರಕಾರ ಈ ರೀತಿ ಜವಾಬ್ದಾರಿಗಳನ್ನು ನೀಡಲಾಗಿತ್ತು. ಆದರೆ ಟಿವಿಎಸ್ ಮೋಟಾರ್ ಕಳೆದೆರಡು ವರ್ಷದಲ್ಲಿ ಭಾರಿ ಲಾಭದೊಂದಿಗೆ ಸಾಗಿದರೆ, ಸುಂದರಂ ಕ್ಲೇಟನ್ ನಿರೀಕ್ಷಿತ ಲಾಭಗಳಿಸುವಲ್ಲಿ ವಿಫಲವಾಗಿದೆ. ವಹಿವಾಟುಗಳ ಅಂತರ ತೀವ್ರಗೊಂಡಂತೆ ಇದೀಗ ಆಸ್ತಿ ಹಂಚಿಕೆಯಲ್ಲೂ ಅಸಮಾಧಾನಗಳು ಹೆಚ್ಚಾಗಿದೆ ಅನ್ನೋ ಮಾತಗಳು ಕೇಳಿಬರುತ್ತಿದೆ.

ಟಿವಿಎಸ್ ಮೋಟಾರ್ ಶ್ರೀನಿವಾಸನ್ ಕುಟುಂಬದಲ್ಲೇ ಇರಬೇಕು ಅನ್ನೋದು ಚೇರ್ಮೆನ್ ವೇಣು ಶ್ರೀನಿವಾಸನ್ ನಿಲುವು. ಇನ್ನು ಪುತ್ರ ಸುದರ್ಶನ್ ವೇಣು ಟಿವಿಎಸ್ ಮೋಟಾರ್ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಮಲ್ಲಿಕಾ ಹಾಗೂ ಲಕ್ಷ್ಮಿ ಅವರ ವಾದ ಪ್ರಕಾರ ಒಪ್ಪಂದ ಕೇವಲ ಬ್ರ್ಯಾಂಡ್ ಬಳಕೆ, ಕೆಲ ಸ್ಪರ್ಧಾತ್ಮಕ ನಿಷೇಧಗಳ ಕುರಿತು ಮಾತ್ರ. ಇದರಲ್ಲಿ ಆಸ್ತಿ ವಿಭಜನೆಯ ಕುರಿತು ಯಾವುದೇ ಮಾತುಕತೆ ಒಪ್ಪಂದ ನಡೆದಿಲ್ಲ ಎಂದಿದ್ದಾರೆ.

ಟಿವಿಎಸ್ ಮೋಟಾರ್ ಮಾರುಕಟ್ಟೆ ಬಂಡವಾಳ 1.83 ಲಕ್ಷ ಕೋಟಿ ರೂಪಾಯಿ ಆಗಿದ್ದರೆ, ಸುಂದರಂ ಕ್ಲೇಟನ್ (ಎಸ್‌ಸಿಎಲ್) ಮಾರುಕಟ್ಟೆ ಬಂಡವಾಳ 24,000 ಕೋಟಿ ರೂಪಾಯಿ. ಮೌಲ್ಯಗಳ ಪ್ರಕಾರ ಇಬ್ಬರು ಮಕ್ಕಳು ಸಮಾನ ಹಕ್ಕು ಹೊಂದಿದ್ದಾರೆ. ಇಲ್ಲಿ ಕಂಪನಿ ಮುಖ್ಯವಲ್ಲ, ಸಮಾನ ಹಂಚಿಕೆ ಮುಖ್ಯ ಎಂದು ಲಕ್ಷ್ಮಿ ವೇಣು ವಾದಿಸಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ದೇಶದಲ್ಲಿ ಏಕಸ್ವಾಮ್ಯಕ್ಕೆ ಯಾರಿಗೂ ಅವಕಾಶವಿಲ್ಲ: ಸ್ಟಾರ್‌ಲಿಂಕ್‌ ವಿಚಾರದಲ್ಲಿ ಮಸ್ಕ್‌ಗೆ ಸಿಂಧಿಯಾ ತಿರುಗೇಟು
ಸ್ವಲ್ಪ ಹೊತ್ತು ಹೆಚ್ಚಾಗಿ ನಿದ್ದೆ ಮಾಡಿದ್ದೇ ತಪ್ಪಾಯ್ತು: ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ ₹61 ಲಕ್ಷ ಕಳೆದುಕೊಂಡ ಟ್ರೇಡರ್!