ತಿರುಪತಿ ತಿಮ್ಮಪ್ಪನ 1300 ಕೋಟಿ ರೂ. ಬಚಾವ್‌!

By Kannadaprabha NewsFirst Published Mar 7, 2020, 8:56 AM IST
Highlights

 ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯಸ್‌ ಬ್ಯಾಂಕ್‌| ತಿರುಪತಿ ತಿಮ್ಮಪ್ಪನ 1300 ಕೋಟಿ ರೂ. ಬಚಾವ್‌!

ವಿಜಯವಾಡ[ಮಾ.07]: ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಯಸ್‌ ಬ್ಯಾಂಕ್‌ನಿಂದ ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಕೆಲವು ತಿಂಗಳ ಹಿಂದೆ ತಾನು ಇಟ್ಟಿದ್ದ 1300 ಕೋಟಿ ರು. ಠೇವಣಿಯನ್ನು ಹಿಂಪಡೆದಿತ್ತು. ಈ ಮೂಲಕ ತಿಮ್ಮಪ್ಪನ ದುಡ್ಡು ಸುರಕ್ಷಿತವಾಗಿರುವಂತೆ ನೋಡಿಕೊಂಡಿತ್ತು.

ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿದ್ದಾಗ ಟಿಟಿಡಿ ಹಣವನ್ನು ಯಸ್‌ ಬ್ಯಾಂಕ್‌ ಸೇರಿದಂತೆ 4 ಬ್ಯಾಂಕ್‌ಗಳಲ್ಲಿ ಇರಿಸಲಾಗಿತ್ತು. ಆದರೆ ಇತ್ತೀಚೆಗೆ ಟಿಟಿಡಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ವೈ.ವಿ. ಸುಬ್ಬಾರೆಡ್ಡಿ ಅವರು, ನಾಲ್ಕೂ ಬ್ಯಾಂಕ್‌ಗಳ ಹಣಕಾಸು ಸ್ಥಿತಿ ಹೇಗಿದೆ ಎಂಬ ವರದಿಯನ್ನು ಪರಿಶೀಲಿಸಿದ್ದರು. ಆಗ ಯಸ್‌ ಬ್ಯಾಂಕ್‌ ಸ್ಥಿತಿ ಅಷ್ಟು ಚೆನ್ನಾಗಿಲ್ಲ ಎಂಬ ಮುನ್ಸೂಚನೆ ಅವರಿಗೆ ದೊರಕಿತು.

ತಿಂಗಳಿಗೆ 50 ಸಾವಿರ ಲಿಮಿಟ್, ಪ್ರೂಫ್ ಕೊಟ್ಟು ಹಣ ಡ್ರಾ ಮಾಡಲು ಮುಗಿಬಿದ್ದ ಜನ

ಕೂಡಲೇ ಅವರು ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರ ಅನುಮತಿ ಪಡೆದು ಯಸ್‌ ಬ್ಯಾಂಕ್‌ನಲ್ಲಿದ್ದ ಟಿಟಿಡಿಯ 1300 ಕೋಟಿ ರು. ಠೇವಣಿಯನ್ನು ಅನ್ಯ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಸೂಚಿಸಿದ್ದರು ಎಂದು ವರದಿಗಳು ತಿಳಿಸಿವೆ.

click me!