ವಿಲೀನ ವಿರೋಧಿಸಿ ಮಾ.27ರಂದು ಬ್ಯಾಂಕ್‌ ನೌಕರರ ಮುಷ್ಕರ!

Published : Mar 06, 2020, 04:09 PM ISTUpdated : Mar 06, 2020, 05:15 PM IST
ವಿಲೀನ ವಿರೋಧಿಸಿ ಮಾ.27ರಂದು ಬ್ಯಾಂಕ್‌ ನೌಕರರ ಮುಷ್ಕರ!

ಸಾರಾಂಶ

ವಿಲೀನ ವಿರೋಧಿಸಿ ಮಾ.27ರಂದು ಬ್ಯಾಂಕ್‌ ನೌಕರರ ಮುಷ್ಕರ|  ಅತೀ ದೊಡ್ಡ ಬ್ಯಾಂಕ್‌ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್‌ ನೌಕರರ ಒಕ್ಕೂಟ ಹಾಗೂ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ನಿರ್ಧಾರ

ನವದೆಹಲಿ[ಮಾ.06]: ಸಾರ್ವಜನಿಕ ರಂಗದ ಪ್ರಮುಖ 10 ಬ್ಯಾಂಕ್‌ಗಳನ್ನು ವಿಲೀನಗೊಳಿಸಿ 4 ಬ್ಯಾಂಕ್‌ಗಳನ್ನಾಗಿ ಪರಿವರ್ತಿಸುವ ಸರ್ಕಾರದ ನಡೆಯನ್ನು ವಿರೋಧಿಸಿ, ಮಾ.27ರಂದು ಅಖಿಲ ಭಾರತ ಬ್ಯಾಂಕ್‌ ಮುಷ್ಕರಕ್ಕೆ ಬ್ಯಾಂಕ್‌ ನೌಕರರ ಸಂಘಟನೆ ಕರೆ ಕೊಟ್ಟಿದೆ. ಬ್ಯಾಂಕ್‌ ವಿಲೀನ ಮಾಡುವ ಸಂಪುಟ ನಿರ್ಧಾರ ಹೊರಬಿದ್ದ ಮರುದಿನವೇ ನೌಕರರ ಸಂಘಟನೆ ಈ ಕರೆ ಕೊಟ್ಟಿದೆ.

ಅತೀ ದೊಡ್ಡ ಬ್ಯಾಂಕ್‌ ನೌಕರರ ಸಂಘಟನೆಗಳಾದ ಅಖಿಲ ಭಾರತ ಬ್ಯಾಂಕ್‌ ನೌಕರರ ಒಕ್ಕೂಟ ಹಾಗೂ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ನಿರ್ಧರಿಸಿದ್ದು ಹಾಗಾಗಿ ಬಂದ್‌ ಯಶಸ್ವಿಯಾಗುವ ಸಾಧ್ಯತೆ ಇದೆ.

ಈ ಹಿಂದೆ ವೇತನ ಪರಿಷ್ಕಾರ ಮಾತುಕತೆ ಬಿದ್ದು ಹೋದ ಹಿನ್ನೆಲೆ ಮಾರ್ಚ್ 11 ರಿಂದ ಮೂರು ದಿನಗಳ ಬ್ಯಾಂಕ್‌ ಮುಷ್ಕರಕ್ಕೆ ಸಂಘಟನೆಗಳು ಕರೆ ನೀಡಿದ್ದವು. ಹೀಗಾಗಿ ಮಾಚ್‌ರ್‍ ತಿಂಗಳಿನಲ್ಲಿ ಸಾಲು ಸಾಲು ಮುಷ್ಕರದಿಂದ ಜನರಿಗೆ ತೊಂದರೆಯಾಗುವುದು ಖಚಿತ.

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!