ಭಾರತ ಜತೆ 71 ಸಾವಿರ ಕೋಟಿ ಮೌಲ್ಯದ ಒಪ್ಪಂದಕ್ಕೆ ಟ್ರಂಪ್‌ ಹಿಂದೇಟು!

By Kannadaprabha News  |  First Published Feb 20, 2020, 11:14 AM IST

ಭಾರತ ಜತೆ ಒಪ್ಪಂದಕ್ಕೆ ಟ್ರಂಪ್‌ ಹಿಂದೇಟು| 71 ಸಾವಿರ ಕೋಟಿ ಮೌಲ್ಯದ ವ್ಯಾಪಾರ ಒಪ್ಪಂದ ಸದ್ಯಕ್ಕಿಲ್ಲ| ಅಧ್ಯಕ್ಷೀಯ ಚುನಾವಣೆಗೂ ಮುನ್ನ ಆಗುತ್ತಾ ಗೊತ್ತಿಲ್ಲ: ಅಧ್ಯಕ್ಷ| ಭೇಟಿ, ದ್ವಿಪಕ್ಷೀಯ ಮಾತುಕತೆಗಷ್ಟೇ ಸೀಮಿತವಾಗುತ್ತಾ ಭೇಟಿ?


ವಾಷಿಂಗ್ಟನ್‌[ಫೆ.20: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚೊಚ್ಚಲ ಭಾರತ ಭೇಟಿ ವೇಳೆ ಉಭಯ ದೇಶಗಳ ನಡುವೆ 10 ಬಿಲಿಯನ್‌ ಡಾಲರ್‌ (71 ಸಾವಿರ ಕೋಟಿ ರು.) ಮೊತ್ತದ ವ್ಯಾಪಾರ ಒಪ್ಪಂದ ಏರ್ಪಡಬಹುದು ಎಂಬ ನಿರೀಕ್ಷೆ ಹುಸಿಯಾಗಲಿದೆ ಎಂದು ಸ್ವತಃ ಟ್ರಂಪ್‌ ಅವರೇ ಸ್ಪಷ್ಟಪಡಿಸಿದ್ದಾರೆ. ಭಾರತದ ಜತೆಗಿನ ಒಪ್ಪಂದವನ್ನು ಕಾದಿರಿಸಿಕೊಳ್ಳುತ್ತಿದ್ದೇನೆ. ಆದರೆ ಈ ಒಪ್ಪಂದ ನವೆಂಬರ್‌ಗೆ ನಿಗದಿಯಾಗಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನವಾದರೂ ನಡೆಯುತ್ತಾ ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಹೀಗಾಗಿ ಫೆ.24 ಹಾಗೂ 25ರಂದು ಟ್ರಂಪ್‌ ಕೈಗೊಳ್ಳುತ್ತಿರುವ ಭಾರತ ಪ್ರವಾಸ ಗಾಂಧಿ ಆಶ್ರಮ, ಮೊಟೆರಾ ಕ್ರಿಕೆಟ್‌ ಮೈದಾನ ಉದ್ಘಾಟನೆ, ಲಕ್ಷ ಜನರನ್ನುದ್ದೇಶಿಸಿ ಭಾಷಣ, ತಾಜ್‌ ಮಹಲ್‌ ಭೇಟಿ, ದ್ವಿಪಕ್ಷೀಯ ಮಾತುಕತೆಗಷ್ಟೇ ಸೀಮಿತವಾಗುತ್ತಾ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ. ಈ ನಡುವೆ, ಭಾರತೀಯ ನೌಕಾಪಡೆ 23 ಎಂಎಚ್‌-60 ಆರ್‌ ಎಂಬ ಮಲ್ಟಿರೋಲ್‌ ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ ಖರೀದಿಸಲು ಉದ್ದೇಶಿಸಿದ್ದು, ಆ ಕುರಿತ ಘೋಷಣೆ ಹೊರಬೀಳಬಹುದು ಎಂದು ಹೇಳಲಾಗಿದೆ.

Latest Videos

undefined

70 ಲಕ್ಷ ಜನ ಬರಲು ಟ್ರಂಪ್ ಏನು ದೇವರಾ?: ಕೈ ನಾಯಕ ಹೇಳಿದ್ದು ಕೇಳಿದಿರಾ?

ಏನಿದು ವ್ಯಾಪಾರ ಒಪ್ಪಂದ?

ಭಾರತದ ಉಕ್ಕು ಹಾಗೂ ಅಲ್ಯುಮಿನಿಯಂ ಉತ್ಪನ್ನಗಳಿಗೆ ಕ್ರಮವಾಗಿ ಶೇ.25 ಮತ್ತು ಶೇ.10ರಷ್ಟುಹೆಚ್ಚುವರಿ ಸುಂಕವನ್ನು 2018ರಲ್ಲಿ ಅಮೆರಿಕ ವಿಧಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಭಾರತ, ಅಮೆರಿಕದ 28 ಉತ್ಪನ್ನಗಳಿಗೆ ಹೆಚ್ಚುವರಿ ಸುಂಕ ಹೇರಿತ್ತು. ಇದರಿಂದ ಎರಡೂ ದೇಶಗಳ ನಡುವೆ ವ್ಯಾಪಾರ ಬಿಕ್ಕಟ್ಟು ಆರಂಭವಾಗಿತ್ತು. ಹಲವು ಸುತ್ತಿನ ಮಾತುಕತೆ ಬಳಿಕ ಉಭಯ ದೇಶಗಳು ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದ್ದವು. ಭಾರತ ರಫ್ತು ಮಾಡುವ ಉಕ್ಕು, ಅಲ್ಯುಮಿನಿಯಂ ಉತ್ಪನ್ನಗಳಿಗೆ ಹೆಚ್ಚುವರಿ ಸುಂಕದಿಂದ ವಿನಾಯಿತಿ ನೀಡಬೇಕು.

ಸರಳೀಕೃತ ಆದ್ಯತಾ ವ್ಯವಸ್ಥೆಯಡಿ ಭಾರತದ ದೇಶೀಯ ಉತ್ಪನ್ನಗಳಿಗೆ ರಫ್ತು ಅನುಕೂಲ ನೀಡುವ ಸೌಕರ್ಯ ಮುಂದುವರಿಸಬೇಕು. ಕೃಷಿ, ಆಟೋಮೊಬೈಲ್‌, ಬಿಡಿಭಾಗ ಹಾಗೂ ಎಂಜಿನಿಯರಿಂಗ್‌ ವಲಯದ ಉತ್ಪನ್ನಗಳಿಗೆ ಹೆಚ್ಚಿನ ಮಾರುಕಟ್ಟೆಅವಕಾಶ ಕಲ್ಪಿಸಬೇಕು ಎಂದು ಭಾರತ ಬೇಡಿಕೆ ಇಟ್ಟಿದೆ. ಇದೇ ವೇಳೆ, ತನ್ನ ಕೃಷಿ ಹಾಗೂ ಉತ್ಪಾದನಾ ವಸ್ತುಗಳು, ಡೈರಿ ಪದಾರ್ಥಗಳು, ವೈದ್ಯ ಉಪಕರಣಗಳಿಗೆ ಹೆಚ್ಚಿನ ಮಾರುಕಟ್ಟೆಅವಕಾಶ ನೀಡಬೇಕು ಎಂದು ಅಮೆರಿಕ ವಾದಿಸಿದೆ. ಕೆಲವೊಂದು ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಬಿಕ್ಕಟ್ಟು ಇದೆ ಎಂದು ಹೇಳಲಾಗಿದ್ದು, ಅದಕ್ಕೆ ಟ್ರಂಪ್‌ ಒಪ್ಪಂದಕ್ಕೆ ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

ಮೋದಿ ಇಷ್ಟ, ಆದರೆ ಭಾರತ ನಮ್ಮನ್ನು ಸರಿಯಾಗಿ ಕಾಣುತ್ತಿಲ್ಲ: ಟ್ರಂಪ್‌ ಅಳಲು

ವಾಷಿಂಗ್ಟನ್‌: ಭಾರತ ಹಾಗೂ ಅಮೆರಿಕ ವ್ಯಾಪಾರ ಸಂಬಂಧಗಳ ಬಗ್ಗೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ನಮ್ಮನ್ನು ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ರಂಪ್‌ ಹೊಗಳಿದ್ದಾರೆ. ಮೋದಿ ಅವರನ್ನು ನಾನು ಬಹುವಾಗಿ ಇಷ್ಟಪಡುತ್ತೇನೆ. ಗುಜರಾತ್‌ಗೆ ಭೇಟಿ ನೀಡಿದಾಗ ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೆ 70 ಲಕ್ಷ ಜನರನ್ನು ನಮ್ಮನ್ನು ಸ್ವಾಗತಿಸಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ತೀವ್ರ ಕುತೂಹಲವಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಭಾರತ ಚೆನ್ನಾಗಿ ನೋಡಿಕೊಂಡಿಲ್ಲ: ಬರವುದಕ್ಕೂ ಮೊದಲೇ ಇದೇನು ಹೇಳಿಬಿಟ್ರಿ ಟ್ರಂಪ್?

ಟ್ರಂಪ್‌ಗೆ ಗಾಂಧಿ ಆತ್ಮಚರಿತ್ರೆ, ಫೋಟೋ, ಚರಕ ಗಿಫ್ಟ್‌

ಅಹಮದಾಬಾದ್‌: ಇದೇ ಮೊದಲ ಬಾರಿಗೆ ಭಾರತ ಪ್ರವಾಸ ಕೈಗೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಹಮದಾಬಾದ್‌ನ ಸಾಬರಮತಿ ಆಶ್ರಮಕ್ಕೆ ಫೆ.24ರಂದು ಭೇಟಿ ನೀಡಿದಾಗ ಚರಕ, ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಅವರ ಜೀವನ ಹಾಗೂ ಕಾಲಘಟ್ಟಕುರಿತಾದ 2 ಪುಸ್ತಕ ಮತ್ತು ಗಾಂಧೀಜಿ ಅವರ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಲು ಉದ್ದೇಶಿಸಲಾಗಿದೆ.

click me!