ಗ್ರಾಹಕರಿಗೆ ಶಾಕ್: ಗ್ಯಾಸ್‌ ಸಿಲಿಂಡರ್‌ ಬೆಲೆ ಪ್ರತಿ ತಿಂಗಳೂ 5 ರು. ಏರಿಕೆ?

Published : Feb 20, 2020, 10:34 AM ISTUpdated : Feb 20, 2020, 10:35 AM IST
ಗ್ರಾಹಕರಿಗೆ ಶಾಕ್: ಗ್ಯಾಸ್‌ ಸಿಲಿಂಡರ್‌ ಬೆಲೆ ಪ್ರತಿ ತಿಂಗಳೂ 5 ರು. ಏರಿಕೆ?

ಸಾರಾಂಶ

ಗ್ಯಾಸ್‌ ಸಿಲಿಂಡರ್‌ ಬೆಲೆ ಪ್ರತಿ ತಿಂಗಳೂ 5 ರು. ಏರಿಕೆ?| ದರ ಪರಿಷ್ಕರಣೆಗೆ ಅನುಮತಿ ನೀಡಲು ಕೇಂದ್ರ ಪರಿಶೀಲನೆ| ಅಡುಗೆ ಅನಿಲ ಸಬ್ಸಿಡಿ ಹೊರೆ ಅಧಿಕವಾಗುತ್ತಿರುವ ಹಿನ್ನೆಲೆ

ನವದೆಹಲಿ[ಫೆ.20]: ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳಿಗೆ ನೀಡಲಾಗುತ್ತಿರುವ ಸಬ್ಸಿಡಿ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ತಿಂಗಳಿಗೊಮ್ಮೆ ಸಿಲಿಂಡರ್‌ ಬೆಲೆಯನ್ನು ಹೆಚ್ಚಿಸಲು ತೈಲ ಕಂಪನಿಗಳಿಗೆ ಅವಕಾಶ ನೀಡುವ ಮೂಲಕ ಹೊರೆ ಇಳಿಸಿಕೊಳ್ಳುವ ದಾರಿಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಲಾಗಿದೆ.

ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳೂ ಎಷ್ಟುಹೆಚ್ಚಿಸಬೇಕು ಎಂಬುದರ ಬಗ್ಗೆ ಲೆಕ್ಕಾಚಾರ ನಡೆಯುತ್ತಿದೆ. ಆದರೆ ಆ ಏರಿಕೆ 4ರಿಂದ 5 ರು.ನಷ್ಟುಇರಬಹುದು ಎಂದು ಮೂಲಗಳು ತಿಳಿಸಿವೆ. ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸಬ್ಸಿಡಿ ದರದಲ್ಲಿ ಪೂರೈಸುತ್ತಿವೆ. ಆದರೆ ಇದೀಗ ಅಡುಗೆ ಅನಿಲ ಬೆಲೆ ಹೆಚ್ಚಳದಿಂದಾಗಿ ಸಬ್ಸಿಡಿ ಮೊತ್ತವೂ ದುಪ್ಪಟ್ಟಾಗಿದೆ. 2021ರವರೆಗೂ ಬೆಲೆ ಇದೇ ರೀತಿ ಏರಿಕೆಯಾದರೆ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಅಡುಗೆ ಅನಿಲ ಸಬ್ಸಿಡಿಗೆಂದು ನಿಗದಿಪಡಿಸಿರುವ 35605 ಕೋಟಿ ರು. ಮೊತ್ತವನ್ನೂ ಇದು ದಾಟಿ ಹೋಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೆ ಸಿಲಿಂಡರ್ ಬೆಲೆ ಭಾರೀ ಏರಿಕೆ: ನೀವಿಗ ತುಂಬ ಬೇಕಿರುವುದು...!

ಈ ಕುರಿತು ಪ್ರತಿಕ್ರಿಯೆ ಬಯಸಿದಾಗ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಮಗೆ ಆ ಬಗ್ಗೆ ತಿಳಿದಿಲ್ಲ ಎಂದು ಹೇಳುತ್ತಿವೆ. ಕೆಲವು ವರದಿಗಳ ಪ್ರಕಾರ 2019ರ ಜುಲೈನಿಂದ 2020ರ ಜನವರಿವರೆಗೆ ಅಡುಗೆ ಅನಿಲ ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯಲ್ಲಿ 63 ರು. ಹೆಚ್ಚಳವಾಗಿದೆ. ಇದು ತಿಂಗಳಿಗೆ ಸರಾಸರಿ 9 ರು.ನಂತೆ ಏರಿಕೆಯಾಗಿದೆ.

2016-17ರಲ್ಲೂ ಇದೇ ರೀತಿ ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯನ್ನು ಆರಂಭದಲ್ಲಿ 2 ರು.ನಂತೆ ಮಾಸಿಕ ಏರಿಸಲಾಗಿತ್ತು. ಬಳಿಕ ಏರಿಕೆಯನ್ನು 4 ರು.ಗೆ ಹೆಚ್ಚಿಸಲಾಗಿತ್ತು. ಉಜ್ವಲಾ ಯೋಜನೆಯಡಿ ಬಡವರಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್‌ ನೀಡುವ ಸರ್ಕಾರ, ಮತ್ತೊಂದೆಡೆ ದರ ಏರಿಕೆ ಮಾಡುವ ಮೂಲಕ ತದ್ವಿರುದ್ಧ ಧೋರಣೆ ಅನುರಿಸುತ್ತಿದೆ ಎಂಬ ಟೀಕೆ ಬಂದ ಹಿನ್ನೆಲೆಯಲ್ಲಿ ಆ ಪರಿಷ್ಕರಣೆಯನ್ನು ನಿಲ್ಲಿಸಲಾಗಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜಪಾನ್‌ ಹಿಂದಿಕ್ಕಿದ ಭಾರತ ಈಗ 4ನೇ ದೊಡ್ಡ ಆರ್ಥಿಕತೆ ಹಿರಿಮೆ
ಭಾರತದ ವಿಮಾ ಕ್ಷೇತ್ರದ ಒಳ ನೋಟಗಳು