
ಎಷ್ಟೋ ಜನರಿಗೆ ಬೇರೆಯವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟ ಇರೋದಿಲ್ಲ. ಅಂಥವರು ಉದ್ಯಮ ಮಾಡ್ತೀವಿ, ಸ್ವತಂತ್ರವಾಗಿ ಕೆಲಸ ಮಾಡಲು ಬಯಸುತ್ತಾರೆ. ಆದರೆ ಅವರಿಗೆ ಬಂಡವಾಳ ಇರೋದಿಲ್ಲ. ಬಂಡವಾಳ ಹಾಕದೆ ದುಡಿಯುವ ಐಡಿಯಾಗಳು ಇಲ್ಲಿವೆ.
ದಿನಗೂಲಿ ಸೇವೆಗಳು (Daycare Services):
ಇತ್ತೀಚಿಗೆ ದಿನಗೂಲಿ ಸೇವೆಗಳ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಹೆಚ್ಚಿನ ಪಾಲಕರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆ ಟೈಮ್‌ನಲ್ಲಿ ನಿಮ್ಮ ಮಕ್ಕಳ ಜೊತೆಗೆ ಇತರ ಮಕ್ಕಳನ್ನು ನೋಡಿಕೊಂಡು ಆದಾಯ ಗಳಿಸಬಹುದು. ಇನ್ನು ಈಗ ತಂದೆ-ತಾಯಿ ಕೆಲಸ ಮಾಡೋದರಿಂದ ಮಕ್ಕಳನ್ನು ನೋಡಿಕೊಳ್ಳೋದು ಚಾಲೆಂಜ್ ಆಗಿದೆ.
ಫಿಟ್‌ನೆಸ್ ಉದ್ಯಮ (Fitness Industry):
ಇಂದು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಇಂದು ಫಿಟ್‌ನೆಸ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗಿದೆ. ಜಿಮ್‌ಗಳಿಗೆ ಹೋಗುವವರು ಕಡಿಮೆ ಆಗಿದ್ದಾರೆ. ಹೀಗಾಗಿ ಮನೆಯಲ್ಲೇ ವ್ಯಾಯಾಮ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಆನ್‌ಲೈನ್ ಮೂಲಕ ಫಿಟ್‌ನೆಸ್ ತರಬೇತಿ ನೀಡಬಹುದು.
ವೆಬ್ ಡೆವಲಪರ್ (Web Developer):
ಕೋಡಿಂಗ್ ಬೂಟ್‌ಕ್ಯಾಂಪ್‌ನಂತಹ ಶಿಕ್ಷಣ, ತರಬೇತಿ ಗೊತ್ತಿದ್ದರೆ ವೆಬ್ ಡೆವಲಪರ್ ಆಗಬಹುದು. ಇಲ್ಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳಿಂದ ವೈಯಕ್ತಿಕ ಬ್ಲಾಗ್‌ಗಳವರೆಗೆ ವಿವಿಧ ಉದ್ಯೋಗ ಅವಕಾಶಗಳಿವೆ. ಕೋಡಿಂಗ್‌ನಲ್ಲಿ ಆಸಕ್ತಿಯಿಲ್ಲದಿದ್ದರೆ, ಸ್ವತಂತ್ರ ವೆಬ್ ಡೆವಲಪರ್ ಆಗಿ ಉದ್ಯಮವನ್ನು ಆರಂಭಿಸಬಹುದು.
Executive Assistant
ತಂತ್ರಜ್ಞಾನ-ಆಧಾರಿತ ಆರ್ಥಿಕ ಬೆಳವಣಿಗೆಯಿಂದ Executive Assistant ಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿಶೇಷವಾಗಿ ಟೆಕ್ ಲೀಡರ್ಸ್‌ಗೆ ಇದು ತುಂಬ ಸಹಾಯ ಮಾಡುತ್ತದೆ ಅಷ್ಟೇ ಅಲ್ಲದೆ ಹೆಚ್ಚು ಕ್ಲೈಂಟ್‌ಗಳನ್ನು ನಿಭಾಯಿಸಬಹುದು.
Nonprofit Organization
ಮನೆಯಿಂದ Nonprofit Organization ಪ್ರಾರಂಭಿಸುವುದು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಇಲ್ಲಿ ಒಂದಷ್ಟು ಸವಾಲುಗಳಿವೆ.
Translator
ಭಾಷೆ ಜ್ಞಾನ ಇದ್ದರೆ, ಜಾಗತಿಕ ಯುಗದಲ್ಲಿ ಭಾಷಾಂತರಕಾರರ ಬೇಡಿಕೆ ಹೆಚ್ಚಿದೆ. ಇದು ಇಮೇಲ್‌ಗ, ದಾಖಲೆಗಳ ಭಾಷಾಂತರದ ಜೊತೆಗೆ, ಅಂತರರಾಷ್ಟ್ರೀಯ ವ್ಯಾಪಾರ ಸಭೆಗಳಿಗೆ ತಕ್ಷಣವೇ ಭಾಷಾಂತರವನ್ನು ಒದಗಿಸುತ್ತದೆ. ಯಶಸ್ಸಿಗೆ ಭಾಷೆಯ ಜ್ಞಾನದ ಜೊತೆಗೆ ಅದರ ವ್ಯಾಕರಣ, ಆಳವಾದ ತಿಳುವಳಿಕೆ ಅಗತ್ಯವಾಗಿದೆ.
ಟ್ಯೂಶನ್ ಸೇವೆಗಳು
ಗಣಿತ, ವಿಜ್ಞಾನ, ಭಾಷಾ ಮುಂತಾದ ವಿಷಯಗಳಲ್ಲಿ ಟ್ಯೂಶನ್ ಸೇವೆಗಳನ್ನು ನೀಡಬಹುದು. ಇಂದು ಎಲ್ಲರೂ ಮಾರ್ಕ್ಸ್ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಪರೀಕ್ಷಾ ತಯಾರಿಗಾಗಿ ಟ್ಯೂಟರ್‌ಗಳ ಬೇಡಿಕೆ ಹೆಚ್ಚಿದೆ. ಆನ್‌ಲೈನ್‌ನಲ್ಲಿ ಅಥವಾ ವೈಯಕ್ತಿಕವಾಗಿ ನಡೆಸಬಹುದು.
Nanny Service
ಮಕ್ಕಳ ಜೊತೆ ಇರಲು ಬಯಸುವವರು ನಾನಿ ಆಗಬಹುದು. ಈಗ ಸೆಲೆಬ್ರಿಟಿಗಳು ತಮ್ಮ ಮಕ್ಕಳಿಗೆ ನಾನಿ ನೇಮಕ ಮಾಡಿಕೊಳ್ತಾರೆ. ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ನಾನಿ ಆಗಬಹುದು. ಅಷ್ಟೇ ಅಲ್ಲದೆ ಕುಟುಂಬದ ಒಪ್ಪಂದದ ಮೇರೆಗೆ ಊಟ, ವಸತಿ ಕೂಡ ಸಿಗುವುದು.
ಐಟಿ ಸಲಹೆ (IT Consulting):
ತಂತ್ರಜ್ಞಾನವು ವ್ಯವಸಾಯ ಕಾರ್ಯಾಚರಣೆಗೆ ಅತ್ಯಗತ್ಯವಾಗಿರುವುದರಿಂದ, ಸಣ್ಣ ಕಂಪನಿಗಳಿಗೆ ಐಟಿ ಬೆಂಬಲದ ಅಗತ್ಯವಿದೆ. ತಾಂತ್ರಿಕ ಕೌಶಲ್ಯ ಮತ್ತು ಸಮಸ್ಯೆ-ಪರಿಹಾರದ ಕೌಶಲ್ಯವಿದ್ದರೆ, ಐಟಿ ಸಲಹಾ ಸೇವೆಗಳು ಲಾಭದಾಯಕವಾಗಿರುತ್ತವೆ.
ಡಿಜಿಟಲ್ ಮಾರ್ಕೆಟಿಂಗ್
ಡಿಜಿಟಲ್ ಮಾರ್ಕೆಟಿಂಗ್ ತುಂಬ ಮುಖ್ಯ. ಆದರೆ ಸಣ್ಣ ಉದ್ಯಮಿಗಳು ಆನ್‌ಲೈನ್ ಪ್ರಚಾರ ಮಾಡುವುದು ಸವಾಲಿನ ವಿಷಯ. ಆನ್‌ಲೈನ್ ಜಾಹೀರಾತಿನ ಬಗ್ಗೆ ಗೊತ್ತಿದ್ದರೆ, ಸಣ್ಣ ಉದ್ಯಮಿಗಳಿಗೆ ಪ್ರಚಾರ ಮಾಡಿಕೊಡಬಹುದು, ಸ್ಥಳೀಯ ವ್ಯಾಪಾರಗಳಿಗೆ ಸೇವೆ ನೀಡಬಹುದು. ಆಮೇಲೆ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯಾಗಿ ಕೆಲಸ ಮಾಡಬಹುದು.
ಮನೆಯಲ್ಲಿಯೇ ಮಾಡುವ ಉದ್ಯಮಗಳು
ಪಿಆರ್‌ಒಗಳು:ಬ್ರಾಂಡ್‌ಗಳು ಅಥವಾ ವ್ಯಕ್ತಿಗಳನ್ನು ಪ್ರಚಾರ ಮಾಡುವಂತೆ ಪತ್ರಿಕಾ ಪ್ರಕಟಣೆಗಳನ್ನು ರಚಿಸುವುದು, ಮಾಧ್ಯಮಗಳೊಂದಿಗೆ ಸಂಪರ್ಕ ಸಾಧಿಸುವುದು
ವಾಯ್ಸ್‌ಓವರ್ ಆಕ್ಟರ್ (Voiceover Actor): ಮನೆಯ ಸ್ಟುಡಿಯೋದಿಂದ ಆನಿಮೇಟೆಡ್ ಚಿತ್ರಗಳು, ಜಾಹೀರಾತುಗಳು, ಆಡಿಯೊ ಪುಸ್ತಕಗಳಿಗೆ ಧ್ವನಿಯನ್ನು ಕೊಡಬಹುದು.
ಗ್ರಾಂಟ್ ರೈಟಿಂಗ್ (Grant Writing): ಲಾಭರಹಿತ ಸಂಸ್ಥೆಗಳು / ಸಂಶೋಧನಾ ಸಂಸ್ಥೆಗಳಿಗೆ ಧನಸಹಾಯ ಪಡೆಯಲು ಪ್ರಸ್ತಾವನೆ ಬರೆಯುವುದು.
Photographer: ಇಂದು ಫೋಟೋಗಳಿಗೆ ಬೇಡಿಕೆ ಇದೆ. ಮದುವೆ ಫಿಕ್ಸ್ ಆದರೂ, ಡಿವೋರ್ಸ್ ಆದರೂ ಫೋಟೋಗ್ರಾಫ್ ಮೊರೆ ಹೋಗ್ತಾರೆ.
ಅಕೌಂಟೆಂಟ್ (Accountant): ಬುಕ್‌ಕೀಪಿಂಗ್, ತೆರಿಗೆ ತಯಾರಿಕೆ, ಆರ್ಥಿಕ ಪ್ಲ್ಯಾನ್ ಮಾಡಿ
ಡ್ರಾಪ್‌ಶಿಪ್ಪಿಂಗ್ ಸ್ಟೋರ್ (Dropshipping Store): ದಾಸ್ತಾನು ಇಡದೆ ಆನ್‌ಲೈನ್ ಅಂಗಡಿಯನ್ನು ನಡೆಸಿ, ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ರವಾನಿಸಿ.
On-Demand Printing: ಕಸ್ಟಮ್ ಉಡುಪುಗಳು, ಪೋಸ್ಟರ್‌ಗಳು ಅಥವಾ ಪುಸ್ತಕಗಳಿಗೆ ಪ್ರಿಂಟಿಂಗ್ ಮಾಡಿಸಬಹುದು.
Social Media Manager: ಕೆಲ ರಾಜಕಾರಣಿಗಳು ಅಥವಾ ಸೆಲೆಬ್ರಿಟಿಗಳಿಗೆ ಸೋಶಿಯಲ್ ಮೀಡಿಯಾ ಮ್ಯಾನೇಜ್ ಆಗಿ ಅವರ ಖಾತೆ ನಿರ್ವಹಿಸಬಹುದು
Online Advertiser: ಡಿಜಿಟಲ್ ಜಾಹೀರಾತು ಅಭಿಯಾನಗಳನ್ನು ಮಾಡಿ, ಹ್ಯಾಂಡಲ್ ಮಾಡಿ
Freelancer: ಯಾವುದೇ ಕಂಪೆನಿಯಲ್ಲಿ ಪರ್ಮನೆಂಟ್ ಉದ್ಯೋಗಿ ಆಗಿರದೆ, ಬರವಣಿಗೆ, ಕೋಡಿಂಗ್, ಗ್ರಾಫಿಕ್ ಡಿಸೈನ್, ವಿಡಿಯೊ ಎಡಿಟಿಂಗ್ ಕೆಲಸ ಮಾಡಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.