ಪೆಟ್ರೋಲ್ ಡೀಸೆಲ್ ಬೆಲೆಯಿಂದ ಜನರು ಕಂಗಾಲಾಗಿದ್ದಾರೆ. ಇದರಿಂದ ಜೀವನವೂ ದುಬಾರಿಯಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ಕರ್ನಾಟಕ ಹಾಗೂ ದೇಶದಲ್ಲಿ ಇಂಧನ ದರ ಎಷ್ಟಿದೆ?
ಬೆಂಗಳೂರು(ಜು.05) ದೇಶದಲ್ಲಿ ಇಂಧನ ದರ ಸ್ಥಿರವಾಗಿದೆ. ರಾಜ್ಯದಲ್ಲಿ ಮಾರಾಟ ತೆರಿಗೆ ಏರಿಕೆ ಬಳಿಕ ಪೆಟ್ರೋಲ್ ಡೀಸೆಲ್ ದರದಲ್ಲಿ ಹೆಚ್ಚಿನ ವ್ಯತ್ಯಾಸಗಳಾಗಿಲ್ಲ. ಆದರೆ 100ರ ಗಡಿ ದಾಟಿರುವ ಕಾರಣ ವಾಹನ ಸವಾರರು, ಪ್ರಯಾಣಿಕರು ಪರಿತಪಿಸುವಂತಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಬೆಲೆ ಆಧಿರಿಸಿ ತೈಲ ಮಾರುಕಟ್ಟೆ ಕಂಪನಿ(OMC) ಪ್ರತಿ ದಿನ ಇಂಧನ ದರ ಪರಿಷ್ಕರಣೆಗೊಳಿಸುತ್ತದೆ. ಇಂದು ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 102.86 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 88.94 ಪೈಸೆ ಆಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 94.72 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 87.62 ರೂಪಾಯಿ ಆಗಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 103.44 ರೂಪಾಯಿ , ಡೀಸೆಲ್ ಬೆಲೆ 89.97 ರೂಪಾಯಿ ಆಗಿದೆ. ಚೆನ್ನಲ್ಲೇ ಪೆಟ್ರೋಲ್ ಬೆಲೆ 100.75 ರೂಪಾಯಿ ಹಾಗೂ ಡೀಸೆಲ್ ಬೆಲೆ 92.34 ರೂಪಾಯಿ. ಆಯಾ ರಾಜ್ಯಗಳ ತೆರೆಗೆಗೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವ್ಯತ್ಯಾಸವಾಗಲಿದೆ.
undefined
ಜುಲೈ ಆರಂಭದಲ್ಲಿ ಪಾಕಿಸ್ತಾನದಲ್ಲಿ ಪೆಟ್ರೋಲ್ ಮೇಲೆ 7.5 ರೂಪಾಯಿ ಹಾಗೂ ಡೀಸೆಲ್ ಮೇಲೆ 9.56 ರೂಪಾಯಿ ಏರಿಕೆ ಮಾಡಲಾಗಿದೆ.
ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನ ಬೆಲೆ ಏರಿಕೆಯಿಂದ ತತ್ತರಿಸಿದೆ. ಕೆಲ ವಾರಗಳ ಹಿಂದಷ್ಟೇ ಪಾಕಿಸ್ತಾನ ‘ಈದ್ ಉಲ್ ಅದಾ’ ಪ್ರಯುಕ್ತ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಿತ್ತು. ಹೈ ಸ್ಪೀಡ್ ಡಿಸೇಲ್ ದರ 10.20 ರು. ಮತ್ತು ಪೆಟ್ರೋಲ್ ದರ 2.33 ರು. ಕಡಿತಗೊಳಿಸಿತ್ತು. ಇದೀಗ ಬೆಲೆ ಹೆಚ್ಚಿಸಿದ್ದು, ‘ಕಳೆದ 15 ದಿನಗಳಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರ ಹೆಚ್ಚುತ್ತಿರುವ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದೆ. ಇದರ ಪರಿಣಾಮ ಇಂದು ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 277.45 ರೂಪಾಯಿ ಆಗಿದ್ದರೆ, ಡೀಸೆಲ್ ಬೆಲೆ 181.86 ರೂಪಾಯಿ ಆಗಿದೆ.
ವಿಶ್ವದ ಯಶಸ್ವಿ ವ್ಯಕ್ತಿಗಳ 7 ಸಾಮಾನ್ಯ ಅಭ್ಯಾಸಗಳಿವು.. ರೂಢಿಸಿಕೊಳ್ಳಿ
ಕರ್ನಾಟಕದ ಬಾಗಲಕೋಟೆಯಲ್ಲಿ ಪೆಟ್ರೋಲ್ ಬೆಲೆ 103.57 ರೂಪಾಯಿ, ಬೆಂಗಳೂರು ಗ್ರಾಮಂತರ ಪ್ರದೇಶದಲ್ಲಿ 102.94 ರೂಪಾಯಿ ಆಗಿದೆ. ಬೆಳಗಾವಿಯಲ್ಲಿ 103.48 ರೂಪಾಯಿ, ಬಳ್ಳಾರಿಯಲ್ಲಿ 104.55 ರೂಪಾಯಿ, ಬೀದರ್‌ನಲ್ಲಿ 103.22 ರೂಪಾಯಿ, ಬಿಜಾಪುರದಲ್ಲಿ 102.99 ರೂಪಾಯಿ, ಚಾಮರಾಜನಗರದಲ್ಲಿ 102.99 ರೂಪಾಯಿ, ಚಿಕ್ಕಬಳ್ಳಾಪುರದಲ್ಲಿ 102.86 ರೂಪಾಯಿ, ಚಿಕ್ಕಮಗಳೂರಿನಲ್ಲಿ 103.90, ಚಿತ್ರದುರ್ಗದಲ್ಲಿ 104.83 ರೂಪಾಯಿ, ದಕ್ಷಿಣ ಕನ್ನಡದಲ್ಲಿ 102.03 ರೂಪಾಯಿ, ದಾವಣಗೆರೆಯಲ್ಲಿ 104.88 ರೂಪಾಯಿ, ಧಾರವಾಡದಲ್ಲಿ 102.92 ರೂಪಾಯಿ, ಗದಗದಲ್ಲಿ 103.19 ರೂಪಾಯಿ, ಹಾಸನದಲ್ಲಿ 102.85 ರೂಪಾಯಿ, ಹಾವೇರಿಯಲ್ಲಿ 103.80 ರೂಪಾಯಿ, ಕೊಡಗಿನಲ್ಲಿ 104.34 ರೂಪಾಯಿ, ಕೋಲಾರದಲ್ಲಿ 103.10 ರೂಪಾಯಿ, ಕೊಪ್ಪಳದಲ್ಲಿ 103.78 ರೂಪಾಯಿ, ಮಂಡ್ಯದಲ್ಲಿ 102.81 ರೂಪಾಯಿ, ಮೈಸೂರಿನಲ್ಲಿ 102.54 ರೂಪಾಯಿ, ರಾಯಚೂರಿನಲ್ಲಿ 103.62, ರಾಮನಗರದಲ್ಲಿ 103.34 ರೂಪಾಯಿ, ಶಿವಮೊಗ್ಗದಲ್ಲಿ 104.43 ರೂಪಾಯಿ, ತುಮಕೂರಿನಲ್ಲಿ 103.40 ರೂಪಾಯಿ, ಉಡುಪಿಯ್ಲಿ 102.30 ರೂಪಾಯಿ, ಉತ್ತರಕನ್ನಡದಲ್ಲಿ 103.90 ರೂಪಾಯಿ, ಯಾದಗಿರಿಯಲ್ಲಿ 103.25 ರೂಪಾಯಿ ಆಗಿದೆ.
ಅದಾನಿ ವಿರುದ್ಧ ಅಕ್ರಮದ ಆರೋಪ ಮಾಡಿದ್ದ ಹಿಂಡನ್‌ಬರ್ಗ್‌ಗೆ ಸೆಬಿ ನೋಟಿಸ್