ಸೂರತ್‌ನ ಡೈಮಂಡ್‌ ಬೋರ್ಸ್‌ ವಿಶ್ವದಲ್ಲೇ ಬೃಹತ್‌ ಕಚೇರಿ! ಅಮೆರಿಕದ ಪೆಂಟಗನ್ ಹಿಂದಿಕ್ಕಿ ನಂ. 1 ಪಟ್ಟಕ್ಕೆ

Published : Jul 19, 2023, 08:12 AM IST
ಸೂರತ್‌ನ ಡೈಮಂಡ್‌ ಬೋರ್ಸ್‌ ವಿಶ್ವದಲ್ಲೇ ಬೃಹತ್‌ ಕಚೇರಿ! ಅಮೆರಿಕದ ಪೆಂಟಗನ್ ಹಿಂದಿಕ್ಕಿ ನಂ. 1 ಪಟ್ಟಕ್ಕೆ

ಸಾರಾಂಶ

‘ಸೂರತ್‌ ಡೈಮಂಡ್‌ ಬೋ​ರ್ಸ್‌’ ಹೆಸರಿನ ಈ ಕಟ್ಟಡವನ್ನು 35 ಎಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 71 ಲಕ್ಷ ಚದರಡಿಯಷ್ಟು ಕಚೇರಿ ಬಳಕೆಗೆ ಲಭ್ಯವಾದ ಪ್ರದೇಶವಿದೆ. ಇದರಲ್ಲಿ 4 ಸಾವಿರಕ್ಕೂ ಹೆಚ್ಚು ಕಚೇರಿಗಳು ಇರಲಿವೆ.

ಸೂರತ್‌ (ಜುಲೈ 19, 2023): ವಜ್ರೋದ್ಯಮದಲ್ಲಿ ವಿಶ್ವದ ಮುಂಚೂಣಿ ನಗರಗಳ ಪೈಕಿ ಒಂದಾದ ಗುಜರಾತ್‌ನ ಸೂರತ್‌ ನಗರಕ್ಕೆ ಇದೀಗ ಮತ್ತೊಂದು ದಾಖಲೆಯ ಗರಿ ಸಿಕ್ಕಿದೆ. ಇಲ್ಲಿನ ವಜ್ರೋದ್ಯಮ ಅಭ್ಯುದಯಕ್ಕೆಂದೇ ಮತ್ತು ಒಂದೇ ಸೂರಿನಲ್ಲಿ ವಜ್ರೋದ್ಯಮ ಸಂಬಂಧಿತ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಹೊಸ ಕಟ್ಟಡವು, ಈಗ ‘ವಿಶ್ವದಲ್ಲೇ ಅತ್ಯಂತ ದೊಡ್ಡ ಕಚೇರಿ ಸಮುಚ್ಚಯ’ ಎಂಬ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ಕಳೆದ 80 ವರ್ಷಗಳಿಂದ ಈ ಹಿರಿಮೆ ಹೊಂದಿದ್ದ ಅಮೆರಿಕ ರಕ್ಷಣಾ ಇಲಾಖೆಯ ‘ಪೆಂಟಗನ್‌’ ಕಚೇರಿಯ ದಾಖಲೆ ಮುರಿದಿದೆ.

‘ಸೂರತ್‌ ಡೈಮಂಡ್‌ ಬೋ​ರ್ಸ್‌’ ಹೆಸರಿನ ಈ ಕಟ್ಟಡವನ್ನು 35 ಎಕರೆ ಜಾಗದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 71 ಲಕ್ಷ ಚದರಡಿಯಷ್ಟು ಕಚೇರಿ ಬಳಕೆಗೆ ಲಭ್ಯವಾದ ಪ್ರದೇಶವಿದೆ. ಇದರಲ್ಲಿ 4 ಸಾವಿರಕ್ಕೂ ಹೆಚ್ಚು ಕಚೇರಿಗಳು ಇರಲಿವೆ. ಇದಲ್ಲದೇ ಮನರಂಜನೆ ಮತ್ತು ಆಹಾರ ತಾಣಗಳಿಗೂ ಪ್ರತ್ಯೇಕ ಸ್ಥಳಾವಕಾಶ ಒದಗಿಸಲಾಗಿದೆ. ಬ್ಯಾಂಕ್‌, ರೀಟೇಲ್‌ ಸ್ಟೋರ್‌, ಕಾನ್ಫರೆನ್ಸ್‌ ಹಾಲ್‌ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗಲಿವೆ. 20 ಲಕ್ಷ ಚದರಡಿಯಷ್ಟು ಜಾಗವು ಕೇವಲ ವಾಹನಗಳ ಪಾರ್ಕಿಂಗ್‌ಗೆಂದೇ ಮೀಸಲಾಗಿದೆ.

ಇದನ್ನು ಓದಿ; 5 ವರ್ಷದಲ್ಲಿ 13.5 ಕೋಟಿ ಭಾರತೀಯರು ಬಡತನದಿಂದ ಹೊರಕ್ಕೆ: ಮೋದಿ ಅವಧಿಯಲ್ಲಿ ಕ್ರಾಂತಿಕಾರಿ ಆರ್ಥಿಕತೆ ಸುಧಾರಣೆ

65 ಸಾವಿರ ಜನರು ಕೆಲಸ ಮಾಡಬಹುದು:
ಈ ಕಟ್ಟಡದಲ್ಲಿ ವಜ್ರ ಉದ್ಯಮಕ್ಕೆ ಸಂಬಂಧಿಸಿದ ವೃತ್ತಿ ಪರಿಣತರು ಅಂದರೆ ವಜ್ರ ಕತ್ತರಿಸುವವರು, ಪಾಲಿಷ್‌ ಮಾಡುವವರು, ವ್ಯಾಪಾರಿಗಳು ವಿವಿಧ ಸೇವೆ ನೀಡಲಿದ್ದಾರೆ. ಹೀಗಾಗಿ ಸೂರತ್‌ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ 65 ಸಾವಿರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಇಲ್ಲಿ ಕಾರ್ಯನಿರ್ವಹಿಸಬಹುದು ಎಂದು ಕಟ್ಟಡ ನಿರ್ಮಾತೃರು ಹೇಳಿದ್ದಾರೆ. ಆಭರಣಗಳಿಗೆ ಬಳಸುವ ವಜ್ರವನ್ನು ಕತ್ತರಿಸಿ, ಪಾಲಿಷ್‌ ಮಾಡುವ ವಿಶ್ವದ ಶೇ.90ರಷ್ಟು ವಹಿವಾಟು ಕೇವಲ ಸೂರತ್‌ ಒಂದರಲ್ಲೇ ನಡೆಯುತ್ತದೆ.

ಈ ಹೊಸ ಕಟ್ಟಡವು ವಜ್ರ ಉದ್ಯಮಕ್ಕೆ ಸಂಬಂಧಿಸಿದ ವಿವಿಧ ಕೆಲಸಗಳಿಗೆ ನಿತ್ಯ ಅಥವಾ ಪದೇ ಪದೇ ಮುಂಬೈ ನಗರಿಗೆ ತೆರಳಬೇಕಾದ ಅನಿವಾರ್ಯತೆಯನ್ನು ನೀಗುತ್ತದೆ ಎಂಬುದು ಇಡೀ ಯೋಜನೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾದ ಮಹೇಶ್‌ ಗಢ್ವಿ ಅಭಿಪ್ರಾಯ. ಭಾರತ ಮೂಲದ ಮೋರ್ಫೋಜೆನೆಸಿಸ್‌ ಎಂಬ ಸಂಸ್ಥೆ ಜಾಗತಿಕ ಟೆಂಡರ್‌ ಗೆದ್ದು, ನಾಲ್ಕು ವರ್ಷಗಳ ಶ್ರಮದ ಮೂಲಕ ಕಟ್ಟಡವನ್ನು ಪೂರ್ಣಗೊಳಿಸಿದೆ. ಕಟ್ಟಡದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಮುಂದಿನ ನವೆಂಬರ್‌ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ.

ಇದನ್ನೂ ಓದಿ: ಈ ದಶಕದಲ್ಲೇ ಭಾರತ ಉದಯೋನ್ಮುಖ ಮಾರುಕಟ್ಟೆಯಾಗಲಿದ್ಯಾ? ಜಾಗತಿಕ ಉಜ್ವಲ ತಾಣ ಎನ್ನಲು ಈ 9 ಅಂಶಗಳೇ ಸಾಕ್ಷಿ!

ಪರಿಸರ ಸ್ನೇಹಿ:
ಗಾಳಿ, ನೀರು, ಬೆಂಕಿ, ಭೂಮಿ ಮತ್ತು ಆಕಾಶ ಎಂಬ ಪಂಚತತ್ವಗಳನ್ನು ಆಧರಿಸಿ ಪರಿಸರ ಸ್ನೇಹಿ ರೂಪದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಜೊತೆಗೆ ನಿರ್ವಹಣೆ ಕೂಡಾ ಪರಿಸರ ಸ್ನೇಹಿ ಅಂಶಗಳನ್ನು ಒಳಗೊಂಡಿದೆ.

ಉದ್ದೇಶ:
- ಭಾರತದಿಂದ ವಜ್ರ, ರತ್ನ ಮತ್ತು ಆಭರಣಗಳ ಆಮದು, ರಫ್ತು ಉತ್ತೇಜನ ಮತ್ತು ವ್ಯಾಪಾರಕ್ಕೆ ಅವಕಾಶ
- ವಜ್ರ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಅತ್ಯಾಧುನಿಕ ಸೌÜಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ಕಲ್ಪಿಸುವುದು.
- ಭಾರತದಲ್ಲೇ ವಜ್ರ ಸಂಬಂಧಿ ಉದ್ಯಮವನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವುದು.

ಇದನ್ನೂ ಓದಿ: GPay, Paytm ಮತ್ತು ಇತರ UPI ಅಪ್ಲಿಕೇಶನ್‌ ಬಳಸಿಕೊಂಡು ಕ್ರೆಡಿಟ್ ಕಾರ್ಡ್‌ ಮೂಲಕ ಪೇಮೆಂಟ್‌ ಮಾಡಲು ಹೀಗೆ ಮಾಡಿ..

  • 35 ಎಕರೆ... ಸೂರತ್‌ ಕಟ್ಟಡ ತಲೆಯೆತ್ತಿದ ಜಾಗದ ವ್ಯಾಪ್ತಿ
  • 71 ಲಕ್ಷ ಚದರಡಿ... ಸೂರತ್‌ ಕಟ್ಟಡ ಹೊಂದಿರುವ ಫ್ಲೋರ್‌ ಸ್ಪೇಸ್‌
  • 65 ಸಾವಿರ ಜನ.. ಈ ಕಟ್ಟಡದಲ್ಲಿ 65 ಸಾವಿರ ಜನರು ಒಟ್ಟಿಗೇ ಕೆಲಸ ಮಾಡುವಷ್ಟು ಜಾಗ
  • 20 ಲಕ್ಷ ಚದರಡಿ.... ವಾಹನ ನಿಲ್ಲಿಸಲು ಇರುವ ಪಾರ್ಕಿಂಗ್‌ ಸ್ಪೇಸ್‌

 
ಕಟ್ಟಡ                                      ಒಟ್ಟು ಜಾಗ          ಮಹಡಿ
ಪೆಂಟಗನ್‌                                 66 ಲಕ್ಷ ಚದರಡಿ    7
ಸೂರತ್‌ ಡೈಮಂಡ್‌ ಬೋರ್ಸ್‌    71 ಲಕ್ಷ ಚದರಡಿ    15

ಇದನ್ನೂ ಓದಿ: ಇನ್ನು 2 ವರ್ಷದಲ್ಲಿ ಇಂಟರ್ನೆಟ್‌ ಅಂತ್ಯ, ಆರ್ಥಿಕತೆ ಮೇಲೆ ತೀವ್ರ ಪರಿಣಾಮ: ಇದರ ಹಿಂದಿದೆ ಅಚ್ಚರಿಯ ಕಾರಣ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?