The Worlds Highest ATM: ಆಕಾಶದಿಂದಲೇ ಹಣ ವಿತ್‌ಡ್ರಾ ಮಾಡಿದಂತೆ ಅನಿಸ್ಬಹುದು!

By Santosh Naik  |  First Published Oct 11, 2022, 1:21 PM IST

 "ಬೆಟ್ಟದ ಮೇಲೆ ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ..' ಎನ್ನುವ ಬಸವಣ್ಣನವರ ವಚನ ಈ ಸುದ್ದಿಯನ್ನು ಓದುವಾಗ ಖಂಡಿತವಾಗಿ ನೆನಪಾಗುತ್ತದೆ. ಆದರೆ, ಇಲ್ಲಿ ಬೆಟ್ಟದ ಮೇಲೆ ಮನೆಯನ್ನು ಯಾರೂ ಕಟ್ಟಿಲ್ಲ. ಇಲ್ಲಿರೋದು ವಿಶ್ವದ ಅತೀ ಎತ್ತರದ ಎಟಿಎಂ. ಇಂಥದ್ದೊಂದು ಎಟಿಎಂ ಇರುವುದು ಪಾಕಿಸ್ತಾನದಲ್ಲಿ.
 


ನವದೆಹಲಿ (ಅ.11): ಇಂದು ಎಟಿಎಂ ಇಲ್ಲದ ನಗರ ವಿಶ್ವದಲ್ಲೇ ಇರಲಿಕ್ಕಿಲ್ಲ. ನಗರದ ಪ್ರತಿ ಗಲ್ಲಿಗಲ್ಲಿಗಳಲ್ಲಿ ನಿಮಗೆ ಎಟಿಎಂ ಕಾಣಸಿಗುತ್ತದೆ. ಎಟಿಎಂ ಗ್ರಾಹಕರ ಜೀವನದಲ್ಲಿ ಬಂದ ದಿನದಿಂದಲೂ ಬ್ಯಾಂಕ್‌ನಿಂದ ಹಣ ವಿತ್‌ಡ್ರಾ ಮಾಡುವುದು ಇನ್ನಷ್ಟು ಸುಲಭವಾಗಿದೆ. ಆದ್ದರಿಂದ ನಗರದ ಪ್ರತಿ ಮೂಲೆ ಮೂಲೆಗಳಲ್ಲಿ ಎಟಿಎಂಗಳನ್ನು ಇಡುವ ಮೂಲಕ ಜನರ ಜೀವನವನ್ನು ಸುಲಭ ಮಾಡಲಾಗುತ್ತಿದೆ. ಆದರೆ, ಪರ್ವತದ ತುದಿಯಲ್ಲಿ ಎಟಿಎಂ ನಿರ್ಮಾಣ ಮಾಡುವ ಯೋಚನೆ ಈವರೆಗೂ ಯಾರಿಗೂ ಬಂದಿರಲಿಲ್ಲ. ಅದಕ್ಕೆ ಒಂದು ಕಾರಣ, ಅಲ್ಲಿ ಹಣ ಪಡೆದುಕೊಂಡರೆ, ಖರ್ಚು ಮಾಡೋದು ಎಲ್ಲಿ ಅನ್ನೋದು. ಆದರೆ, ಪಾಕಿಸ್ತಾನದಲ್ಲಿ ಪರ್ವತದ ಮೇಲೆ ಎಟಿಎಂ ನಿರ್ಮಾಣವಾಗಿದೆ. ಇದು ವಿಶ್ವದ ಅತೀ ಎತ್ತರದ ಎಟಿಎಂ. ಇಲ್ಲಿ ಹಣವನ್ನು ಪಡೆಯಲು ನೀವು ಮೋಡಗಳನ್ನು ದಾಟಿ ಹೋಗಬೇಕು. ಹಾಗಿದ್ದರೂ, ವಿಶ್ವದ ಅತೀ ಎತ್ತರದ ಎಟಿಎಂನಲ್ಲಿ ಹಣ ಪಡೆಯಲು ಜನರ ದೊಡ್ಡ ಸಾಲು ಇರುತ್ತದೆ. ಹೀಗಿರುವಾಗ ಇಷ್ಟು ಎತ್ತರದಲ್ಲಿ ವಿದ್ಯುತ್ ಇಲ್ಲದೆ ಈ ಎಟಿಎಂ ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡಿದೆ. ಅಲ್ಲದೆ, ಈ ಎಟಿಎಂನಿಂದ ಹಣವನ್ನು ಹಿಂಪಡೆಯಲು ಜನರು ಏಕೆ ಆಸಕ್ತಿ ಹೊಂದಿದ್ದಾರೆ? ಎನ್ನುವ ಕುತೂಹಲವೂ ಆರಂಭವಾಗಿದೆ.

ಹಿಮದ ಪರ್ವತಗಳ ಮೇಲಿರುವ ಎಟಿಎಂ: ವಿಶ್ವದ ಅತಿ ಎತ್ತರದ ಈ ನಗದು ಯಂತ್ರ (ಎಟಿಎಂ) ಚೀನಾ ಮತ್ತು ಪಾಕಿಸ್ತಾನದ ನಡುವಿನ ಖಂಜರಾಬ್ ಪಾಸ್‌ನ (Khunjerab Pass ATM) ಗಡಿಯಲ್ಲಿದೆ. ಪಾಕಿಸ್ತಾನದ (Pakistan) ಹಿಮಚ್ಛಾದಿತ ಪರ್ವತಗಳ ಈ ಪ್ರದೇಶಕ್ಕೆ ದೇಶ ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರುತ್ತಾರೆ. ಇದು ಪಾಕಿಸ್ತಾನದ ಪ್ರಮುಖ ಪ್ರವಾಸಿ ಸ್ಥಳಗಳನ್ನೂ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನ್ಯಾಷನಲ್ ಬ್ಯಾಂಕ್ ಆಫ್ ಪಾಕಿಸ್ತಾನ್ (ಎನ್‌ಬಿಪಿ) ಇಲ್ಲಿ ಎಟಿಎಂ (ATM) ಸ್ಥಾಪಿಸಲು ನಿರ್ಧಾರ ಮಾಡಿತ್ತು. 2016 ರಲ್ಲಿ ಇಲ್ಲಿ ಎಟಿಎಂ ಸ್ಥಾಪಿಸಲಾಯಿತು. ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿ, ಅದನ್ನು ಚಲಾಯಿಸಲು ಸೌರ ಮತ್ತು ಪವನ ಶಕ್ತಿಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ. 4693 ಮೀಟರ್ ಎತ್ತರದಲ್ಲಿ ನಿರ್ಮಿಸಲಾದ ಈ ಎಟಿಎಂ, ವಿಶ್ವದ ಅತೀ ಎತ್ತರದ ಎಟಿಎಂ ಎಂದು ಗಿನ್ನೆಸ್‌ ದಾಖಲೆಯಲ್ಲಿ ಹೆಸರು ಪಡೆದುಕೊಂಡಿದೆ.

ಬೆಟ್ಟದ ಮೇಲೆ ನಿರ್ಮಾಣವಾಗಿರುವ ಈ ಎಟಿಎಂನಿಂದ ಹಣವನ್ನು ವಿತ್‌ಡ್ರಾ ಮಾಡಿದಾಗ, ಹೆಚ್ಚಿನ ಪ್ರವಾಸಿಗರು ಆಕಾಶದಿಂದಲೇ ಹಣ ವಿತ್‌ಡ್ರಾ (Withdraw) ಮಾಡಿದಂತೆ ಅನಿಸುತ್ತದೆ ಎಂದು ಅನುಭವ ಹಂಚಿಕೊಂಡಿದ್ದಾರೆ. ಇನ್ನು ಪ್ರವಾಸಿಗರು ಈ ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡುವುದನ್ನು ಹೆಮ್ಮೆ ಎಂದೇ ಭಾವಿಸುತ್ತಾರೆ. ಇಲ್ಲಿ ಹಣ ತೆಗೆದುಕೊಂಡ ಬಳಿಕ, ಎಟಿಎಂ ಎದುರು ಸೆಲ್ಫಿ ಕ್ಲಿಕ್‌ ಮಾಡಿಕೊಳ್ಳುವ ಮೂಲಕ ತಮ್ಮ ನೆನಪುಗಳನ್ನು ದಾಖಲಿಸಿಕೊಂಡಿದ್ದಾರೆ. ಈ ಎಟಿಎಂನಲ್ಲಿ ಅಂದಾಜು 15 ದಿನಗಳ ಅಂತರದಲ್ಲಿ 40-50 ಲಕ್ಷ ರೂಪಾಯಿ ಹಣವನ್ನು ವಿತ್‌ಡ್ರಾ ಮಾಡಿದ್ದಾರೆ ಎಂದು ಹೇಳಲಾಗಿದೆ.

ಪ್ರಮುಖ ಬ್ಯಾಂಕುಗಳ ಎಟಿಎಂ ನಗದು ವಿತ್ ಡ್ರಾ ಮಿತಿ ಬದಲು?ಎಷ್ಟು ಉಚಿತ ವಹಿವಾಟು ನಡೆಸಬಹುದು?

ಎಟಿಎಂ ಯಂತ್ರವನ್ನು ಸ್ಥಳೀಯ ನಾಗರೀಕರು,  ಗಡಿ ಭದ್ರತಾ ಪಡೆಗಳು (Border security forces) ಮತ್ತು ಗಡಿ ಪ್ರದೇಶದ ಸಮೀಪ ವಾಸಿಸುವ ಪ್ರವಾಸಿಗರು ಬಳಸುತ್ತಿದ್ದಾರೆ. ಇದರೊಂದಿಗೆ ಪ್ರವಾಸಿಗರನ್ನು ಕೂಡ ಎಟಿಎಂ ತನ್ನತ್ತ ಸೆಳೆಯುತ್ತಿದೆ. ಈ ಎಟಿಎಂನಿಂದ ಹಣ ಡ್ರಾ ಮಾಡುವ ಹಲವು ಪ್ರವಾಸಿಗರು ‘ಆಕಾಶದಿಂದ ಹಣ ತೆಗೆದಂತೆ ಅನಿಸುತ್ತಿದೆ' ಎಂದು ಹೇಳಿದ್ದಾರೆ. ಪ್ರವಾಸಿಗರು ಈ ಎಟಿಎಂಗೆ ಭೇಟಿ ನೀಡುವುದನ್ನು ಗೌರವವೆಂದು ಪರಿಗಣಿಸುತ್ತಾರೆ ಮತ್ತು ಇಲ್ಲಿಂದ ಹಣವನ್ನು ತೆಗೆದುಕೊಳ್ಳುವ ಚಿತ್ರಗಳನ್ನು ಫೋನ್‌ನಲ್ಲಿ ತೆಗೆಯುತ್ತಿದ್ದಾರೆ.

Tap to resize

Latest Videos

ಅಬ್ಬಬ್ಬಾ.. ಇದು 24,679 ವಜ್ರ ಅಳವಡಿಸಿದ ಉಂಗುರ, ಗಿನ್ನಿಸ್‌ ದಾಖಲೆಗೆ ಸೇರ್ಪಡೆ

ಎಟಿಎಂನ ಮೇಲ್ವಿಚಾರಣೆಯ ಮಹಿಳಾ ಅಧಿಕಾರಿಯೊಬ್ಬರು ಈ ಯೋಜನೆಯನ್ನು ಪೂರ್ಣಗೊಳಿಸಲು ಸುಮಾರು ನಾಲ್ಕು ತಿಂಗಳುಗಳನ್ನು ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಹತ್ತಿರದ ಎನ್‌ಬಿಪಿ ಬ್ಯಾಂಕ್ ಇಲ್ಲಿಂದ 87 ಕಿಮೀ ದೂರದಲ್ಲಿದೆ. ಕೆಟ್ಟ ಹವಾಮಾನ, ಕಷ್ಟಕರವಾದ ಪರ್ವತ ಪಾಸ್‌ಗಳು ಮತ್ತು ಭೂಕುಸಿತಗಳನ್ನು ಎದುರಿಸುವ ನಡುವೆಯೂ ಗ್ರಾಹಕರು ಹಣವನ್ನು ಹಿಂಪಡೆಯಲು ಈ ಎಟಿಎಂಗೆ ಹೋಗುತ್ತಾರೆ. ಇಲ್ಲಿಂದ 15 ದಿನಗಳಲ್ಲಿ ಸರಾಸರಿ 40-50 ಲಕ್ಷ ರೂಪಾಯಿ ಹಿಂಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

click me!