Legend With Evening: ಅಹಂ ಕಿತ್ಹಾಕಿದರೆ ಗೆಲವು ನಿಶ್ಚಿತ: ಕಪೀಲ್‌ ದೇವ್‌

By Girish Goudar  |  First Published Mar 27, 2022, 4:16 AM IST

*   1983ರ ವಿಶ್ವಕಪ್‌ ಕ್ರಿಕೆಟ್‌ ಅನ್ನು ನಾನು ಗೆದ್ದಿಲ್ಲ. ನಾವು ಜಯಗಳಿಸಿದ್ದೇವೆ 
*  ಶೇ. 98ರಷ್ಟು ನಿಜ ‘83’ ಸಿನಿಮಾ ಶೇ. 98ರಷ್ಟು ಸತ್ಯ
*  ಹೃದಯ, ಭಾವನೆ ಸರಿಯಿದ್ದರೆ ಆರೋಗ್ಯವೂ ಸರಿಯಾಗಿರುತ್ತದೆ ಅಷ್ಟೇ 


ಹುಬ್ಬಳ್ಳಿ(ಮಾ.27):  ನಾನು ಎಂಬ ಅಹಂ ಕಿತ್ತು ಹಾಕಿ. ಅಲ್ಲಿ ನಾವು ಎಂಬ ಭಾವನೆ ತಂದುಕೊಳ್ಳಿ. ಆಗ ಗೆಲುವು ತನ್ನಿಂದ ತಾನಾಗಿಯೇ ಬರುತ್ತದೆ. 1983ರಲ್ಲಿ ಭಾರತ ತಂಡ ಕ್ರಿಕೆಟ್‌ನಲ್ಲಿ ವಿಶ್ವಕಪ್‌ನಲ್ಲಿ(World Cup) ಗೆದ್ದಿದ್ದು ಕೂಡ ಇಡೀ ತಂಡದ ಶ್ರಮದಿಂದಲೇ ಹೊರತು ನನ್ನಿಂದ ಅಲ್ಲ!

ಇದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಟೈ ಉದ್ಯಮಿಗಳ ಸಮಾವೇಶದ ಸಮಾರೋಪದಲ್ಲಿ ನಡೆದ ಲೆಜೆಂಡ್‌ ವಿಥ್‌ ಇವನಿಂಗ್‌(An evening with Legends) ಕಾರ್ಯಕ್ರಮದಲ್ಲಿ ಅವರು ಸಭಿಕರೊಂದಿಗೆ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಭಾರತ ಕ್ರಿಕೆಟ್‌(Indian Cricket Team) ತಂಡದ ಮಾಜಿ ನಾಯಕ ಕಪೀಲ್‌ ದೇವ್‌(Kapil Dev) ಪ್ರತಿಕ್ರಿಯಿಸಿದರು.

Tap to resize

Latest Videos

"

Wrist Assured: ದಿಗ್ಗಜ ಕ್ರಿಕೆಟಿಗ ಜಿಆರ್‌ ವಿಶ್ವನಾಥ್ ಆತ್ಮಕಥನ ಬಿಡುಗಡೆ

ವಿಶ್ವ ಕಪ್‌ ಗೆಲ್ಲುವ ಮುನ್ನ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದ್ದು ಹೇಗೆ? ಎಂಬ ಪ್ರಶ್ನೆಯನ್ನು ಸಭಿಕರೊಬ್ಬರು ಕೇಳಿದರು. ಅದಕ್ಕೆ ಮೇಲಿನಂತೆ ಉತ್ತರಿಸಿದ ಅವರು, ಆಟವಾಗಲಿ, ಉದ್ಯಮವಾಗಲಿ ಏನೇ ಆದರೂ ತಂಡದ ಜೊತೆಗೂಡಿ ಒಗ್ಗಟ್ಟಿನಿಂದ ಆಡಿದಾಗ ಮಾತ್ರ ಗೆಲವು ತಾನಾಗಿಯೇ ಬರುತ್ತದೆ. ನಾನು ಎಂಬ ಅಹಂನ್ನು ಪ್ರತಿಯೊಬ್ಬರೂ ಕಿತ್ತುಹಾಕಬೇಕು. ನಾನು ಎಂಬುದರ ಬದಲಿಗೆ ನಾವು ಎಂಬುದು ನಿಮ್ಮಲ್ಲಿ ಬಂದರೆ ಮುಗಿತು ಯಶಸ್ಸು ಎನ್ನುವುದು ತನ್ನಿಂದ ತಾನಾಗಿಯೇ ಬರುತ್ತದೆ. ಇಡೀ ಪ್ರಪಂಚವೇ ನಿಮ್ಮ ಪರವಾಗಿ ನಿಲ್ಲುತ್ತದೆ. 1983ರ ವಿಶ್ವಕಪ್‌ ಕ್ರಿಕೆಟ್‌ ಅನ್ನು ನಾನು ಗೆದ್ದಿಲ್ಲ. ನಾವು ಜಯಗಳಿಸಿದ್ದೇವೆ. ಅದರ ಶ್ರೇಯಸ್ಸು ತಂಡಕ್ಕೆ ಸಲ್ಲಬೇಕೇ ಹೊರತು ಕಪಿಲ್‌ ದೇವ್‌ಗೆ ಅಲ್ಲ. ಉದ್ಯಮಿಗಳು ಇದನ್ನೇ ಅಳವಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದರು.

ಮನುಷ್ಯನಿಗೆ ಓದು ಬಹುಮುಖ್ಯ. ಜ್ಞಾನ ಎನ್ನುವುದು ದೊಡ್ಡ ಶಕ್ತಿ. ನಿರಂತರ ಓದುತ್ತಲೇ ಇರಬೇಕು. ಭಗವದ್ಗೀತೆಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಯೋಚನೆ ಸರಿಯಾದ ದಾರಿಯಲ್ಲಿದ್ದರೆ ಜಗತ್ತೇ ನಿಮ್ಮೊಂದಿಗೆ ಬರುತ್ತದೆ. ಇದೆಲ್ಲವೂ ಓದುವುದರಿಂದ ಬರುತ್ತದೆ ಎಂದ ಅವರು, ಕೆಲಸವನ್ನು ಕೆಲಸ ಎಂದಷ್ಟೇ ಭಾವಿಸದೇ ಅದನ್ನು ಉತ್ಸಾಹ, ಕಠಿಣ ಪರಿಶ್ರಮ, ಬದ್ಧತೆಯಿಂದ ಮಾಡುವುದನ್ನು ಕಲಿಯಬೇಕು ಎಂದು ನುಡಿದರು.

ಫೋಟೋ ಬಿಡಿ; ಮಾತನಾಡಿ

ಕಪೀಲ್‌ ದೇವ್‌ ಬಂದು ಸಭೀಕರ ಮಧ್ಯೆ ಕುಳಿತುಕೊಳ್ಳುತ್ತಿದ್ದಂತೆ ಜನತೆ ಅವರ ಹಿಂದೆ, ಅಕ್ಕಪಕ್ಕ ನಿಂತು ಸೆಲ್ಫಿ ತೆಗೆಸಿಕೊಳ್ಳುವುದು, ಫೋಟೋ ತೆಗೆಸಿಕೊಳ್ಳುವುದಕ್ಕೆ ಮುಗಿಬೀಳುತ್ತಿದ್ದರು. ಆಗ ಸುಮ್ಮನೆ ಇದ್ದ ಕಪೀಲ ದೇವ್‌ ಅವರು, ಬಳಿಕ ತಮ್ಮ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದರು.

India vs Sri Lanka 2nd Test ಕಪಿಲ್ ದೇವ್ ಜತೆ ಭಾರತ- ಲಂಕಾ ಟೆಸ್ಟ್ ವೀಕ್ಷಿಸಿದ ಬೊಮ್ಮಾಯಿ

ಫೋಟೋ ತೆಗೆಸಿಕೊಂಡು ಏನ್‌ ಮಾಡ್ತಿರಿ. ಬೇರೆಯವರಿಗೆ ತೋರಿಸಿಕೊಳ್ಳುವುದಕ್ಕೆ ಫೋಟೋ ತೆಗೆದುಕೊಳ್ಳಬೇಡಿ. ಮೊದಲು ನಿಮ್ಮನ್ನು ನೀವು ಇಂಪ್ರೆಸ್‌ ಮಾಡಿಕೊಳ್ಳಿ. ನಾನು ನೆಲ್ಸನ್‌ ಮಂಡೇಲಾ(Nelson Mandela) ಅವರನ್ನು ಭೇಟಿಯಾಗಿದ್ದೆ. ಆವಾಗ ನಾನು ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವ ಕೆಲಸ ಮಾಡಲಿಲ್ಲ. ಬದಲಿಗೆ ನಿಮ್ಮೊಂದಿಗೆ ಐದು ನಿಮಿಷ ಮಾತನಾಡಬೇಕು ಎಂದು ಕೇಳಿಕೊಂಡಿದ್ದೆ. ಆಗ 5 ನಿಮಿಷ ಅವರೊಂದಿಗೆ ಮಾತನಾಡಿದ್ದ ವಿಷಯ ನಂಗೆ ಈಗಲೂ ದೊಡ್ಡ ಮೆಮೋರಿ. ನಿಮ್ಮ ಮೆದುಳು ದೊಡ್ಡ ಮೆಮೋರಿ. ಯಾರೇ ಸಿಕ್ಕರೂ ಹೆಚ್ಚೆಚ್ಚು ಮಾತನಾಡುವುದನ್ನು ಬೆಳೆಸಿಕೊಳ್ಳಿ. ನಿಮ್ಮ ವ್ಯಕ್ತಿತ್ವ ವೃದ್ಧಿಸುತ್ತದೆ ಎಂದರು.

ಶೇ. 98ರಷ್ಟು ನಿಜ ‘83’ ಸಿನಿಮಾ ಶೇ. 98ರಷ್ಟು ಸತ್ಯ. ಅದನ್ನು ಮರುಸೃಷ್ಟಿಸಲಾಗಿದೆ ಎಂದು ಕಪೀಲದೇವ ಹೇಳಿದರು. ಸಂವಾದದಲ್ಲಿ 83 ಸಿನಿಮಾ ಸಂಪೂರ್ಣ ಸತ್ಯವೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿನಿಮಾ ಶೇ. 98ರಷ್ಟು ನೈಜತೆಯಿಂದ ಕೂಡಿದೆ ಎಂದರು. ಆರೋಗ್ಯದ ರಹಸ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಕೃಷಿ ಕುಟುಂಬದಿಂದ ಬಂದವನು. ಹೃದಯ, ಭಾವನೆ ಸರಿಯಿದ್ದರೆ ಆರೋಗ್ಯವೂ ಸರಿಯಾಗಿರುತ್ತದೆ ಅಷ್ಟೇ ಎಂದು ಚಟಾಕಿ ಹಾರಿಸಿದರು.
 

click me!