15ನೇ ಬಜೆಟ್ ಮಂಡನೆಗೂ ಮುನ್ನ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟಿದೆ. ಈ ಬಜೆಟ್‌ನಲ್ಲಿ ಸಾಲ ಮತ್ತು ಸುಳ್ಳು ಹೇಳೋದು ಬಿಟ್ಟರೆ ಬೇರೆ ಏನೂ ಇರುವುದಿಲ್ಲ ಎಂದಿದೆ.
ಬೆಂಗಳೂರು (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸುತ್ತಿರುವ ರಾಜ್ಯ ಬಜೆಟ್ ಅಭಿವೃದ್ಧಿಯ ದೃಷ್ಟಿಕೋನದ ಜೊತೆಗೆ ರಾಜಕೀಯ ಲೆಕ್ಕಾಚಾರಕ್ಕು ಹಾದಿ ಮಾಡಿ ಕೊಟ್ಟಿದೆ. ಪ್ರಸಕ್ತ ಸಾಲಿನಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಬಜೆಟ್‌ನಲ್ಲಿ ಹತ್ತು ಹಲವು ಘೋಷಣೆಗಳನ್ನು ಮಾಡುವ ನಿರೀಕ್ಷೆ ಗರಿಗೆದರಿದ್ದು, ಇತ್ತ ವಿರೋಧ ಪಕ್ಷ ಬಿಜೆಪಿ ಸಹ ಬಜೆಟ್‌ನ್ನು ಮುಂದಿಟ್ಟುಕೊಂಡು ಬೇಳೆ ಬೇಯಿಸಿಕೊಳ್ಳುವ ಚಿಂತನೆ ನಡೆಸಿದೆ.
ಸಿದ್ದು ಬಜೆಟ್ , ಬೆಂಗಳೂರಿನ ವಿವಿಧ ವಲಯಗಳಲ್ಲಿ ಭಾರಿ ನಿರೀಕ್ಷೆ
undefined
15ನೇ ಬಜೆಟ್ ಮಂಡನೆಗೂ ಮುನ್ನ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಟಾಂಗ್ ಕೊಟ್ಟಿದೆ. ಈ ಬಜೆಟ್‌ನಲ್ಲಿ ಸಾಲ ಮತ್ತು ಸುಳ್ಳು ಹೇಳೋದು ಬಿಟ್ಟರೆ ಬೇರೆ ಏನೂ ಇರುವುದಿಲ್ಲ. ಎಂದು ಎಂದು ಈಗ ಟ್ರೆಂಡಿಗ್‌ನಲ್ಲಿರುವ ಕರಿಮಣಿ ಮಾಲೀಕ ನಾನಲ್ಲ ಹಾಡಿನ ಥರಾನೆ ಏನು ಇರೋದಿಲ್ಲಾ, ಏನು ಇರೋದಿಲ್ಲಾ ಎಂದು ಕಾರ್ಟೂನ್ ಒಂದನ್ನು ಮಾಡಲಾಗಿದೆ. ಅದರಲ್ಲಿ ಸಿದ್ದರಾಮಯ್ಯ ಈ ವರ್ಷ ರಾಜ್ಯ ಅತೀ ಹೆಚ್ಚು ಸಾಲ ಮಾಡಲಿ ಎಂಬುದು ನನ್ನ ಬಜೆಟ್ ಸ್ಪೆಷಾಲಿಟಿ ಕಣೋ ಎಂದು ಹೇಳುವಂತಿದೆ.
ಏನು ಇರೋದಿಲ್ಲಾ,
ಏನು ಇರೋದಿಲ್ಲಾ
ಬಜೆಟ್ ನಲ್ಲಿ "ಸಾಲ-ಸುಳ್ಳು” ಬಿಟ್ಟರೇ, ಬೇರೆ ಏನು ಇರೋದಿಲ್ಲಾ...!! pic.twitter.com/x217THCn34