
ಬೆಂಗಳೂರು (ಫೆ.16): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.16 ರಂದು ರಾಜ್ಯ ಬಜೆಟ್ ಮಂಡಿಸಲಿದ್ದು ವಿವಿಧ ವಲಯಗಳಲ್ಲಿ ಬಜೆಟ್ ಘೋಷಣೆಗಳ ಬಗ್ಗೆ ಭಾರಿ ನಿರೀಕ್ಷೆ ಮೂಡಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ಬಳಿಕ ಮಂಡಿಸಲಿರುವ ಎರಡನೇ ಬಜೆಟ್ ಇದಾಗಿದ್ದರೂ, ಪೂರ್ಣ ಅವಧಿಗೆ ಮಂಡಿಸಲಿರುವ ಮೊದಲ ಬಜೆಟ್ ಆಗಿರುತ್ತದೆ.
ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ಹೊಸ ಕೊಡುಗೆಗಳನ್ನು ನೀಡಬಹುದೆಂಬ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 2024-25 ನೇ ಸಾಲಿನ ಆಯವ್ಯಯದತ್ತ ಜಿಲ್ಲೆಗಳ ಜನರ ದೃಷ್ಟಿ ನೆಟ್ಟಿದೆ. ರಾಜ್ಯ ಬಜೆಟ್‌ನಲ್ಲಿ ಈ ಬಾರಿ ರಾಜಧಾನಿ ಬೆಂಗಳೂರಿಗೆ ಹಲವು ದೊಡ್ಡ ಪ್ರಮಾಣದ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಗಳಿವೆ. ಅದಕ್ಕೆ ಪೂರಕವಾಗಿ ಬಿಬಿಎಂಪಿಯಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಪ್ರಮುಖವಾಗಿ ಸುರಂಗ ರಸ್ತೆ, ಸ್ಕೈಡೆಕ್ ವೀಕ್ಷಣಾ ಗೋಪುರ ನಿರ್ಮಾಣದಂತಹ ಹೊಸ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಶಾಲಾ ಕಾಲೇಜು ಅಭಿವೃದ್ಧಿ, ಆಂಗ್ಲ ಮಾಧ್ಯಮ ಶಾಲೆ ಆರಂಭ, ಮಡಿಕಲ್ ಕಾಲೇಜು ನಿರ್ಮಾಣ ಮತ್ತಿತರ ಯೋಜನೆಗಳಿಗಾಗಿ ಅನುದಾನ ದೊರೆಯಬಹುದೆಂದು ನಿರೀಕ್ಷಿಸಲಾಗಿದೆ. ರಾಜಧಾನಿಯಲ್ಲಿ ನಿರ್ವಹಣಾ ಯೋಜನೆಗಳ ಜತೆಗೆ ಸುರಂಗ ರಸ್ತೆ ನಿರ್ಮಾಣ, ಸ್ಕೈಡೆಕ್ ನಿರ್ಮಾಣದಂತಹ ಯೋಜನೆಗಳು ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
- ಜಿಲ್ಲೆಗಳ ಅಭಿವೃದ್ಧಿಗೆ ಹೊಸ ಕೊಡುಗೆಗಳ ಘೋಷಣೆ ನಿರೀಕ್ಷೆ
- ಬೆಂಗಳೂರಿಗೆ ಹಲವು ದೊಡ್ಡ ಯೋಜನೆ ಘೋಷಣೆ ಸಾಧ್ಯತೆ
- ಶಾಲಾ ಕಾಲೇಜು ಅಭಿವೃದ್ಧಿಗೆ ಹೆಚ್ಚಿನ ಅನುದಾನ ನಿರೀಕ್ಷೆ
- ಆಂಗ್ಲ ಮಾಧ್ಯಮ ಶಾಲೆ, ಮೆಡಿಕಲ್ ಕಾಲೇಜು ಘೋಷಣೆ ಸಾಧ್ಯತೆ
- ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣಕ್ಕೆ ಅನುದಾನ ನಿರೀಕ್ಷೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.