ನಾರಿಯೇ'ಅಮುಲ್' ಶಕ್ತಿ; ದೇಶದ ನಂ.1 ಡೈರಿ ಸಂಸ್ಥೆಯಲ್ಲಿದೆ 36 ಲಕ್ಷ ಮಹಿಳೆಯರ ಪಾಲು!

By Suvarna News  |  First Published Feb 23, 2024, 7:32 PM IST

ದೇಶದ ನಂ.1 ಡೈರಿ ಉತ್ಪನ್ನ ಸಂಸ್ಥೆ ಅಮುಲ್ ಇತ್ತೀಚೆಗಷ್ಟೇ ಸುವರ್ಣ ಮಹೋತ್ಸವ ಆಚರಿಸಿಕೊಂಡಿದೆ. 36 ಲಕ್ಷ ಮಹಿಳೆಯರನ್ನು ಈ ಸಂದರ್ಭದಲ್ಲಿ ಸಂಸ್ಥೆ ಅಭಿನಂದಿಸಿದೆ. ಏಕೆಂದ್ರೆ ಇವರು ಈ ಸಂಸ್ಥೆ ಬೆನ್ನೆಲುಬು. ಇದರಲ್ಲಿ ಪ್ರತಿಯೊಬ್ಬರೂ ಪಾಲು ಕೂಡ ಹೊಂದಿದ್ದಾರೆ. 


Business Desk: ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು. ಏಕೆಂದ್ರೆ ಆಕೆಯಲ್ಲಿ ಆ ಛಲ, ಶ್ರದ್ಧೆ ಎಲ್ಲವೂ ಹುಟ್ಟಿನಿಂದಲೇ ಬಂದಿರುತ್ತದೆ. ಇನ್ನೂ ಲಕ್ಷಾಂತರ ಮಹಿಳೆಯರು ಕೈಜೋಡಿಸಿದರೆ ಅಲ್ಲೊಂದು ಕ್ರಾಂತಿ ನಡೆಯದೆ ಇರಲು ಸಾಧ್ಯವೇ? ಇಂಥ ಕ್ರಾಂತಿಗೆ ಭಾರತದ ಜನಪ್ರಿಯ ಡೈರಿ ಉತ್ಪನ್ನ 'ಅಮೂಲ್' ಸಾಕ್ಷಿಯಾಗಿದೆ. ಟೆಸ್ಟ್ ಆಫ್ ಇಂಡಿಯಾ ಎಂದು ಎಲ್ಲರ ಬಾಯಲ್ಲಿ ಕುಣಿದಾಡುವ ಅಮೂಲ್ ಉತ್ಪನ್ನಗಳ ರುಚಿಯ ಹಿಂದೆ ಲಕ್ಷಾಂತರ ಭಾರತೀಯ ನಾರಿಯರ ಶ್ರಮವಿದೆ. ಪ್ರತಿದಿನ 300 ಲಕ್ಷಕ್ಕೂ ಅಧಿಕ ಹಾಲನ್ನು ಸಂಗ್ರಹಿಸೋದು ಖಂಡಿತಾ ಸುಲಭದ ಮಾತಲ್ಲ. ಇದರಿಂದ ಆರ್ಥಿಕತೆಗೆ 200 ಕೋಟಿ ರೂ. ಕೊಡುಗೆ ಕೂಡ ಸಿಗುತ್ತದೆ. ಗುಜರಾತಿನ 
18,565 ಗ್ರಾಮದ ಡೈರಿ ಸಹಕಾರಿ ಸಂಘಗಳು ಒಟ್ಟಾಗಿ ಸೇರಿ 'ಅಮುಲ್' ಅನ್ನು ಮುನ್ನಡೆಸುತ್ತಿವೆ. ಈ ಸಂಘಟನೆಗಳ ಹಿಂದೆ 36 ಲಕ್ಷ ಮಹಿಳಾ ಹೈನುಗಾರರ  ಪರಿಶ್ರಮವಿದೆ.

ಇತ್ತೀಚೆಗಷ್ಟೇ ಗುಜರಾತ್ ಮೂಲದ 'ಅಮುಲ್' 50ನೇ ವರ್ಷವನ್ನು ಆಚರಿಸಿಕೊಂಡಿತು. ಭಾರತದ ನಂ.1 ಹಾಲಿನ ಉತ್ಪನ್ನವಾಗಿರುವ 'ಅಮುಲ್' ಸಂಘಟನಾ ಶಕ್ತಿಗೆ ಒಂದು ಅತ್ಯುತ್ತಮ ನಿದರ್ಶನ. ಅದರಲ್ಲೂ ನಾರಿಶಕ್ತಿಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ಸಂಘಟನೆ. 1973ರಲ್ಲಿ ಅಮುಲ್ ಬ್ರ್ಯಾಂಡ್ ಸ್ಥಾಪನೆಗೊಂಡಿತು. ಅಮುಲ್ 18 ಜಿಲ್ಲಾ ಹಾಲು ಸಂಘಟನೆಗಳ ಸಮೂಹವಾಗಿದೆ. ಈ ಸಂಸ್ಥೆ ವಹಿವಾಟು ₹72,000 ಕೋಟಿ ರೂ.

Tap to resize

Latest Videos

ಅಮುಲ್‌ ಲಸ್ಸಿಯಲ್ಲಿ ಫಂಗಸ್‌ ಇದೆ ಅನ್ನೋ ಆರೋಪ ಸುಳ್ಳು, ಕಂಪನಿ ಸ್ಪಷ್ಟನೆ

ಅಮುಲ್ ಶಕ್ತಿಯೇ ಹೈನುಗಾರರು. ನೀವು ಅಮುಲ್ ಉತ್ಪನ್ನ ಖರೀದಿಸಿದಾಗ ಅದರಲ್ಲಿ ಶೇ.85ರಷ್ಟು ಭಾಗ ಹೈನುಗಾರರಿಗೆ ಸಿಗುತ್ತದೆ. ಅಂದರೆ 100ರೂ. ಮೌಲ್ಯದ ಉತ್ಪನ್ನ ಖರೀದಿಸಿದಾಗ ಅದರಲ್ಲಿ 85ರೂ. ನೇರವಾಗಿ ಹೈನುಗಾರರಿಗೆ ಲಭಿಸುತ್ತದೆ. ಈ ಮೂಲಕ ಅಮುಲ್ ಹೈನುಗಾರರ ಜೀವನ ನಿರ್ವಹಣೆಗೆ ನೆರವು ನೀಡುವ ಜೊತೆಗೆ ಗುಣಮಟ್ಟ ನಿರ್ವಹಣೆಗೆ ಸಹಾಯ ಒದಗಿಸುತ್ತಿದೆ.

ಅಮುಲ್ ಭಾರತದ ಮೊದಲ ಸಹಕಾರ ಆಂದೋಲನಕ್ಕೆ ನಾಂದಿ ಹಾಡಿದೆ. ಇದು ಮಹಿಳಾ ಸಬಲೀಕರಣದ ಚಾಂಪಿಯನ್ ಎಂದೇ ಹೇಳಬಹುದು. 1946ರಿಂದ ಈ ಸಹಕಾರಿ ಮಾದರಿ ಮಹಿಳೆಯರನ್ನು ಸೇರಿಸಿಕೊಂಡು ಸಂಪನ್ಮೂಲ ಕ್ರೋಢೀರಣಕ್ಕೆ ನಾಂದಿ ಹಾಡಿದೆ. ಹಾಗೆಯೇ ಮಹಿಳೆಯರ ಜ್ಞಾನ, ಪರಿಣತಿಯನ್ನು ಬಳಸಿಕೊಂಡು ಅಮುಲ್ ಅನ್ನು ಯಶಸ್ವಿ ಉದ್ಯಮವನ್ನಾಗಿ ರೂಪಿಸುವಲ್ಲಿ ಈ ಸಂಘಟನೆ ಯಶಸ್ವಿಯಾಗಿದೆ. ಭಾರತದ ಈ ಅತೀದೊಡ್ಡ ಡೈರಿ ಸಂಸ್ಥೆಯಲ್ಲಿ 36 ಲಕ್ಷ ಮಹಿಳೆಯರು ಪಾಲು ಹೊಂದಿದ್ದಾರೆ. ಇದೇ ಕಾರಣಕ್ಕೆ ಅಮುಲ್ ತನ್ನ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ 'There is no Amul without women power' ಎಂಬ ವಾಕ್ಯವನ್ನು ತನ್ನ ಜಾಹೀರಾತಿನಲ್ಲಿ ಸೇರಿಸುವ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿದೆ. 

ಭಾರತದಲ್ಲಿ ಅಮುಲ್ ಬ್ರ್ಯಾಂಡ್ ಬಗ್ಗೆ ಮಕ್ಕಳಿಂದ ಹಿರಿಯರ ತನಕ ಎಲ್ಲರಿಗೂ ಗೊತ್ತು. ಹಾಲು, ಮೊಸರು, ಬೆಣ್ಣಿ, ಚೀಸ್, ಐಸ್ ಕ್ರೀಮ್ ಹೀಗೆ ಹತ್ತಾರು ರುಚಿಕರ ಡೈರಿ ಉತ್ಪನ್ನಗಳ ಮೂಲಕ ಇದು ಎಲ್ಲರ ಮನೆ, ಮನ ತಣಿಸಿದೆ. ಇನ್ನು ಅಮುಲ್ ಸಂಸ್ಥೆಯ ಮಾರುಕಟ್ಟೆ ಬಳಕೆ, ವಿನೂತನ ತಂತ್ರಗಳ ಬಳಕೆ ಕೂಡ ಗಮನ ಸೆಳೆದಿದೆ. 

ಟೇಸ್ಟ್ ಆಫ್ ಇಂಡಿಯಾ ಅನ್ನೋದು ಅಮುಲ್ ಟ್ಯಾಗ್ ಲೈನ್. ಈ ಒಂದು ಹೇಳಿಕೆ ಮೂಲಕವೇ ಇದು ದೇಶಾದ್ಯಂತ ಜನರ ಮನಸ್ಸಲ್ಲಿ ನೆಲೆಯೂರಿದೆ. ಹೀಗಾಗಿ ಅಮುಲ್ ಎಂದ ತಕ್ಷಣ ಭಾರತೀಯರಿಗೆ ರುಚಿಯ ಜೊತೆಗೆ ಹೆಮ್ಮೆಯ ಭಾವನೆ ಕೂಡ ಮೂಡುತ್ತದೆ. 

ಅಮುಲ್ ಸಂಸ್ಥಾಪಕರಾದ  ಡಾ.ವರ್ಗೀಸ್ ಕುರಿಯನ್ ಭಾರತದಲ್ಲಿ ಕ್ಷೀರ ಕ್ರಾಂತಿಗೆ ಮಾತ್ರ ಕಾರಣರಾಗಿಲ್ಲ, ಬದಲಿಗೆ ಮಹಿಳಾ ಸಬಲೀಕರಣಕ್ಕೆ ಕೂಡ ಭದ್ರ ಬುನಾದಿ ಹಾಕಿದರು. ಗುಜರಾತ್ ನ ಲಕ್ಷಾಂತರ ಮಹಿಳೆಯರ ಪಾಲಿಗೆ ಅವರು ಆರ್ಥಿಕ ಸ್ವಾವಲಂಬನೆಯ ಹಾದಿ ತೋರಿದ ಮಹಾತ್ಮ ಎಂದೇ ಹೇಳಬಹುದು. 

click me!