SBI ಲಾಭ ಗಳಿಕೆ ಏರಿಕೆಯಾಗಿದ್ದರೂ ಷೇರು ಬೆಲೆ ಕುಸಿತ, ಕಾರಣವೇನು? ಇಲ್ಲಿದೆ ಮಾಹಿತಿ

By Suvarna NewsFirst Published May 19, 2023, 4:09 PM IST
Highlights

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 2023ರ ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದ ವರದಿ ಪ್ರಕಟಿಸಿದ್ದು, ಲಾಭ ಗಳಿಕೆಯಲ್ಲಿ ಶೇ.83ರಷ್ಟು ಏರಿಕೆ ದಾಖಲಿಸಿದೆ. ಈ ಮೂಲಕ ಲಾಭ ಗಳಿಕೆ 9,114 ಕೋಟಿ ರೂ.ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಲಾಭ 16,695 ಕೋಟಿ ರೂ.ಆಗಿತ್ತು.ಆದರೂ ಷೇರು ಮಾರುಕಟ್ಟೆ ಮೇಲೆ ಮಾತ್ರ ಇದು ಜಾದೂ ಮಾಡಲಿಲ್ಲ ಏಕೆ? ಇಲ್ಲಿದೆ ಮಾಹಿತಿ.

ನವದೆಹಲಿ (ಮೇ 19): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆ ಗಳಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಲಾಭ ಮಾರ್ಚ್ 2023ಕ್ಕೆ ಅಂತ್ಯವಾದ ಹಣಕಾಸು ಸಾಲಿನಲ್ಲಿ 50,232 ಕೋಟಿ ರೂ. ಇದು ಕಳೆದ ಸಾಲಿಗಿಂತ ಶೇ.59ರಷ್ಟು ಹೆಚ್ಚು. ಇನ್ನು 2023ರ ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಲಾಭ ಶೇ.83ರಷ್ಟು ಏರಿಕೆಯಾಗಿ 9,114 ಕೋಟಿ ರೂ.ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಲಾಭ 16,695 ಕೋಟಿ ರೂ.ಆಗಿತ್ತು.ಇನ್ನು ಬ್ಯಾಂಕ್ ಡೆವಿಡೆಂಡ್ ಕೂಡ ಹೆಚ್ಚಳ ಮಾಡಿದೆ. ಪ್ರತಿ ಷೇರಿನ ಮೇಲಿನ ಡಿವಿಡೆಂಡ್ ಕಳೆದ ವರ್ಷ 7.10ರೂ. ಇದ್ದರೆ ಈ ವರ್ಷ 11.30ರೂ.ಗೆ ಹೆಚ್ಚಳ ಮಾಡಲಾಗಿದೆ. ಎಸ್ ಬಿಐ ಉತ್ತಮ ಲಾಭ ಗಳಿಸಿದ್ದರೂ ಷೇರು ಬೆಲೆ ಮಾತ್ರ ಇಳಿಕೆ ದಾಖಲಿಸಿದೆ. ಗುರುವಾರ ಬಿಎಸ್ ಇಯಲ್ಲಿ ಎಸ್ ಬಿಐ ಷೇರು 576.10ರೂ.ಗೆ ಅಂದರೆ ಶೇ.1.77 ಕಡಿಮೆ ಬೆಲೆಗೆ ಕ್ಲೋಸ್ ಆಗಿದೆ.ಗುರುವಾರ ಸೆನ್ಸೆಕ್ಸ್ ಕೂಡ ಶೇ.0.21ರಷ್ಟು ಕಡಿಮೆ ಅಂದ್ರೆ 61,431.74.ಕ್ಕೆ ಕ್ಲೋಸ್ ಆಗಿತ್ತು. ಹಾಗಾದ್ರೆ ಎಸ್ ಬಿಐ ಷೇರು ಬೆಲೆ ಇಳಿಕೆಗೆ ಕಾರಣವೇನು?

'ಎಸ್ ಬಿಐ ದಾಖಲೆಯ ಲಾಭಾಂಶ ಗಳಿಸಲಿದೆ ಎಂಬ ನಿರೀಕ್ಚೆ ಮಾರುಕಟ್ಟೆಗಿತ್ತು. ಹಾಗಾಗಿ ಎಸ್ ಬಿಐ ಲಾಭ ಪ್ರಕಟಿಸಿದಾಗ ಅಚ್ಚರಿಯಾಗಲಿಲ್ಲ. ಫಲಿತಾಂಶ ಪ್ರಕಟಿಸಿದ ಬಳಿಕ ಷೇರು ಬುಕ್ಕಿಂಗ್ ನಲ್ಲಿ ಕೂಡ ಲಾಭವಾಗಿದೆ' ಎನ್ನುತ್ತಾತೆ ಬ್ರೋಕಿಂಗ್ ಸಂಸ್ಥೆಯೊಂದರ ವಿಶ್ಲೇಷಕರು.

ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ; ಮೇ 1ರಿಂದಲೇ ಜಾರಿಗೆ

ಲಾಭ ಗಳಿಕೆಯಲ್ಲಿ ಹೆಚ್ಚಳ ಹೇಗಾಯಿತು?
ಈ ಬಗ್ಗೆ ಎಸ್ ಬಿಐ ಮುಖ್ಯಸ್ಥ ದಿನೇಶ್ ಖಾರ ಮಾಹಿತಿ ನೀಡಿದ್ದು, ಉತ್ತಮ ನಿರ್ವಹಣೆಗೆ ಬ್ಯಾಂಕಿನ ಆಸ್ತಿ ಗುಣಮಟ್ಟದಲ್ಲಿ ಸುಧಾರಣೆಯಾಗಿರೋದೇ ಕಾರಣ ಎಂದಿದ್ದಾರೆ. ಬ್ಯಾಂಕ್ ನ ನಿವ್ವಳ ಅನುತ್ಪಾದಕ ಆಸ್ತಿ (ಎನ್ ಪಿಎಸ್) 2023 ರ ಮಾರ್ಚ್ ಗೆ 90,928ಕೋಟಿ ರೂ.ಗೆ ಇಳಿಕೆಯಾಗಿದೆ. ಇದಕ್ಕೂ ಮುನ್ನ ಎನ್ ಪಿಎಸ್ 112,023 ಕೋಟಿ ರೂ. ಇತ್ತು. ನಿವ್ವಳ ಎನ್ ಪಿಎಸ್ 10 ವರ್ಷಗಳ ಕಡಿಮೆ ಮಟ್ಟದಲ್ಲಿತ್ತು ಎಂದು ಖಾರ ಮಾಹಿತಿ ನೀಡಿದ್ದಾರೆ.

ಕ್ರೆಡಿಟ್ ವೆಚ್ಚ
ಎಸ್ ಬಿಐ ಕ್ರೆಡಿಟ್ ವೆಚ್ಚ ವರ್ಷದಿಂದ ವರ್ಷಕ್ಕೆ ಶೇ.0.32ರಷ್ಟು ಪ್ರಗತಿ ದಾಖಲಿಸಿದೆ.ಕಳೆದ ವರ್ಷಕ್ಕೆ ಹೋಲಿಸಿದರೆ ದೇಶೀಯ ನಿವ್ವಳ ಬಡ್ಡಿ ಮಾರ್ಜಿನ್ (NIM) ಶೇ.3.58ರಷ್ಟಿದ್ದು, ಕಳೆದ ಸಾಲಿಗೆ ಹೋಲಿಸಿದರೆ 22 ಬಿಪಿಎಸ್ ಪ್ರಗತಿ ದಾಖಲಿಸಿದೆ.ಇನ್ನು 2023ನೇ ಆರ್ಥಿಕ ಸಾಲಿನಲ್ಲಿ ನಿವ್ವಳ ಬಡ್ಡಿ ಆದಾಯ (NII) ಶೇ.19.99ರಷ್ಟು ಹೆಚ್ಚಳ ಕಂಡಿದೆ.

SBI ಗ್ರಾಹಕರೇ ಗಮನಿಸಿ, ನೆಟ್ ಬ್ಯಾಂಕಿಂಗ್ ನೋಂದಣಿ ಮನೆಯಲ್ಲೇ ಕುಳಿತು ಮಾಡ್ಬಹುದು, ಹೇಗೆ? ಇಲ್ಲಿದೆ ಮಾಹಿತಿ

ಠೇವಣಿಗಳಲ್ಲಿ ಏರಿಕೆ?
ಠೇವಣಿಗಳ ದರದಲ್ಲಿ ಕೂಡ ಏರಿಕೆಯಾಗಿದೆ. 'ಮಾರುಕಟ್ಟೆಯ ಕಾರ್ಯನಿರ್ವಹಣೆ ಆಧರಿಸಿ ಠೇವಣಿ ದರ ಏರಿಕೆಯಾಗುತ್ತದೆ. ಠೇವಣಿಗಳು ಹೆಚ್ಚಾಗಲು ರೆಪೋದರ ಏರಿಕೆ ಮುಖ್ಯಕಾರಣವಾಗಿದೆ. ಇದನ್ನು ಹೊರತುಪಡಿಸಿ ಕೂಡ ಅನೇಕ ಕಾರಣಗಳಿವೆ' ಎಂದು ಖಾರ ತಿಳಿಸಿದ್ದಾರೆ. ಒಟ್ಟು ದೇಶೀಯ ಠೇವಣಿಗಳ ಪ್ರಮಾಣ 2023ರ ಮಾರ್ಚ್ ಗೆ 42.54 ಲಕ್ಷ ಕೋಟಿ ರೂ. ಇತ್ತು. ಬ್ಯಾಂಕ್ ಠೇವಣಿಗಳು ಒಟ್ಟು ಶೇ. 9.19ರಷ್ಟು ಬೆಳವಣಿಗೆ ದಾಖಲಿಸಿವೆ.CASA ಠೇವಣಿಗಳು ಶೇ.4.95ರಷ್ಟು ಏರಿಕೆ ಕಂಡಿವೆ.ಎಸ್ ಬಿಐ ಪ್ರಸ್ತುತ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಒಂದು ವರ್ಷದಿಂದ ಮೂರು ವರ್ಷಗಳೊಳಗಿನ ಠೇವಣಿಗಳಿಗೆ ಶೇ.6.8ರಿಂದ ಶೇ.7ರಷ್ಟು ಬಡ್ಡಿದರ ನೀಡುತ್ತಿದೆ. ಇನ್ನು ದೀರ್ಘ ಅವಧಿಯ ಠೇವಣಿಗಳು ಅಂದರೆ ಮೂರರಿಂದ ಹತ್ತು ವರ್ಷಗಳ ಅವಧಿಯ ಠೇವಣಿಗಳಿಗೆ ಶೇ.6.5ರಷ್ಟು ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಈ ಅವಧಿಯ ಠೇವಣಿಗಳ ಮೇಲೆ ಹೆಚ್ಚುವರಿ ಶೇ.0.5ರಷ್ಟು ಬಡ್ಡಿ ನೀಡಲಾಗುತ್ತದೆ.

 

click me!