Online Job : ಮನೆಯಲ್ಲಿ ಏನ್ ಮಾಡ್ತೀರಿ ಅನ್ನೋದನ್ನೇ ವಿಡಿಯೋ ಮಾಡಿ ಹಣ ಗಳಿಸಿ

By Suvarna NewsFirst Published May 19, 2023, 12:18 PM IST
Highlights

ಬೇರೆಯವರು ಮನೆಯಲ್ಲಿ ಏನು ಮಾಡ್ತಾರೆ ಅನ್ನೋದ್ರಿಂದ ಹಿಡಿದು, ಡ್ರೆಸ್, ಫ್ಯಾಷನ್, ಶಿಕ್ಷಣ ಸೇರಿ ಅನೇಕ ವಿಷ್ಯಗಳನ್ನು ತಿಳಿಯವು ಕುತೂಹಲ ಜನರಿಗಿರುತ್ತದೆ. ಅವರಿಗೆ, ಅವರಿಷ್ಟದ ಮಾಹಿತಿಯನ್ನು ನೀವು ನೀಡಿದ್ರೆ ನಿಮ್ಮ ಜೇಬು ತುಂಬುತ್ತೆ. ಅವರ ಜ್ಞಾನ ಹೆಚ್ಚಾಗುತ್ತೆ.
 

ಮನೆ ಕೆಲಸ ಮಾಡ್ತಾನೆ ಹಣ ಗಳಿಸಲು ಈಗ ಸಾಧ್ಯ. ನಮ್ಮ ಡಿಜಿಟಲ್ ಫ್ಲಾಟ್ಫಾರ್ಮ್ ಬದಲಾಗಿದೆ. ಆರಾಮವಾಗಿ ನಾವು ಹಣವನ್ನು ಸಂಪಾದನೆ ಮಾಡಬಹುದು. ಯುಟ್ಯೂಬ್, ರೀಲ್ಸ್, ಶಾರ್ಟ್ಸ್ ಹೀಗೆ ನಾನಾ ವಿಧಗಳಲ್ಲಿ ಜನರು ಹಣ ಸಂಪಾದನೆ ಮಾಡ್ತಿದ್ದಾರೆ. ಇದ್ರಲ್ಲಿ ಬ್ಲಾಗ್ ಹಾಗೂ ವ್ಲಾಗ್ ಎರಡೂ ಸೇರಿದೆ. ಹಿಂದೆ ಹೆಚ್ಚು ಜನಪ್ರಿಯತೆ ಗಳಿಸಿದ್ದ ಬ್ಲಾಗ್ ಗಿಂತ ಈಗ ವ್ಲಾಗ್ ಜನರಿಗೆ ಪ್ರಿಯವಾಗ್ತಿದೆ. ನಾವಿಂದು ವ್ಲಾಗ್ ಬಗ್ಗೆ ನಿಮಗೊಂದಿಷ್ಟು ಮಾಹಿತಿಯನ್ನು ನೀಡ್ತೇವೆ.

ವ್ಲಾಗ್ (Vlog) ಅಂದ್ರೇನು? : ವ್ಲಾಗ್ ಎಂದರೆ ವಿಡಿಯೋ ಬ್ಲಾಗಿಂಗ್ (Blogging) . ಯಾವುದೇ ವಿಷಯವನ್ನು ನಾವು ವೀಡಿಯೋ ಮೂಲಕ ಹೇಳೋದನ್ನು ವ್ಲಾಗ್ ಎಂದು ಕರೆಯಲಾಗುತ್ತದೆ. ವೀಡಿಯೊ (Video) ಬ್ಲಾಗಿಂಗ್‌ನಲ್ಲಿ ನಾವು ನಮ್ಮ ಮುಖವನ್ನು ತೋರಿಸ್ತೇವೆ. ನಮಗೆ ಜ್ಞಾನವಿರುವ ವಿಷ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ನಡೆಸುತ್ತೇವೆ. ವಿಷ್ಯದ ಬಗ್ಗೆ ಆಸಕ್ತಿ ಇರುವವರು ಈ ವಿಡಿಯೋ ನೋಡ್ತಾರೆ. ಅವರು ನೋಡ್ತಿದ್ದಂತೆ ನಮ್ಮ ವ್ಲಾಗ್ ಪ್ರಸಿದ್ಧಿಗೆ ಬರುತ್ತದೆ. ಯಾವುದೇ ವಿಷ್ಯದ ಬಗ್ಗೆ ವ್ಲಾಗ್ ಮಾಡಬಹುದು. ನೀವು ಯಾವುದೇ ವಿಷ್ಯದಲ್ಲಿ ಜ್ಞಾನ ಹೊಂದಿಲ್ಲ ಎಂದಾದ್ರೆ ನಿಮ್ಮ ದಿನಚರಿಯನ್ನೇ ನೀವು ವಿಡಿಯೋ ಮಾಡಿ ಹಂಚಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ದಿನಚರಿ ವ್ಲಾಗ್ ಹೆಚ್ಚು ಪ್ರಸಿದ್ಧಿ ಪಡೆದಿದೆ. 

Personal Finance: ಆನ್ಲೈನ್ ನಲ್ಲಿ ಹಣ ಗಳಿಸೋದು ಹೇಗೆ?

ವ್ಲಾಗ್ ಜನಪ್ರಿಯತೆ ಹೆಚ್ಚಾಗಲು ಕಾರಣವೇನು? : ಬ್ಲಾಗ್ ಗಿಂತ ವ್ಲಾಗ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬ್ಲಾಗ್ ಅಂದ್ರೆ ಅದ್ರಲ್ಲಿ ನಮ್ಮ ಅನುಭವವನ್ನು ಬರೆಯಬೇಕಾಗುತ್ತದೆ.  ವ್ಲಾಗ್ ನಲ್ಲಿ ವೀಡಿಯೊ ಮಾಡಲಾಗುತ್ತದೆ. ಓದುವುದಕ್ಕಿಂತ ವಿಡಿಯೋ ವೀಕ್ಷಣೆ ಮಾಡೋದು ಸುಲಭ. ಜನರಿಗೆ ವಿಷ್ಯ ಬೇಗ ಅರ್ಥವಾಗುತ್ತದೆ. ವ್ಯಕ್ತಿಗಳ ಪರ್ಸನಲ್ ವಿಷ್ಯ ತಿಳಿಯುವ ಕುತೂಹಲ ಜನರಿಗಿರುತ್ತದೆ. ನಿಮ್ಮ ದಿನಚರಿಯನ್ನು ನೋಡ್ತಾ, ಜನರು ಮನರಂಜನೆ (Entertainment) ಪಡೆಯುವ ಮೂಲಕ ಟೈಂ ಪಾಸ್ ಮಾಡ್ತಾರೆ.
ವ್ಲಾಗಿಂಗ್ ಮೂಲಕ ಜನರಿಗೆ ಶಿಕ್ಷಣ ನೀಡುವ ಜನರಿದ್ದಾರೆ. ವ್ಲಾಗ್ ಮೂಲಕ ಅವರು ತಮ್ಮ ಕೌಶಲ್ಯವನ್ನು ಇತರರಿಗೆ ಕಲಿಸುತ್ತಾರೆ. ಇದಲ್ಲದೆ ಪ್ರಪಂಚದ ಎಲ್ಲ ದೇಶದ ಜನರು ನಿಮ್ಮನ್ನು ವೀಕ್ಷಣೆ ಮಾಡುವ ಕಾರಣ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ.

ಇದಲ್ಲದೆ ವ್ಲಾಗ್ ಶುರು ಮಾಡುವುದು ಬಹಳ ಸುಲಭ. ಇದಕ್ಕೆ ಯಾವುದೇ ಬಂಡವಾಳದ ಅಗತ್ಯವಿಲ್ಲ. ಸ್ಮಾರ್ಟ್‌ಫೋನ್ ಮತ್ತು ವೀಡಿಯೊ ಎಡಿಟಿಂಗ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ ಸಾಕು. ವ್ಲಾಗ್ ಖಾತೆ ತೆರೆದು, ವೀಡಿಯೊ ಪೋಸ್ಟ್ ಮಾಡುವುದನ್ನು ನೀವು ಕಲಿಯಬೇಕು. ಒಮ್ಮೆ ನೀವು ವೀಡಿಯೊಗಳನ್ನು ಹಂಚಿಕೊಳ್ಳಲು ಪ್ರಾರಂಭಿಸಿದ ನಂತರ ನಿಮಗೆ ಧೈರ್ಯ ಹಾಗೂ ಸ್ಫೂರ್ತಿ ಎರಡೂ ಸಿಗುತ್ತದೆ. ಟೆಕ್ನಿಕ್ ತಿಳಿದ ನಂತ್ರ ಹಾಗೂ ಜನರಿಗೆ ಯಾವುದು ಇಷ್ಟ ಎಂಬುದು ನಿಮ್ಮ ಅರಿವಿಗೆ ಬಂದ ನಂತ್ರ ನೀವು ಅವರನ್ನು ಸೆಳೆಯುವ ವಿಡಿಯೋ ಸಿದ್ಧಪಡಿಸಬಹುದು.

Earn Money: ದಿನದಲ್ಲಿ ಗಂಟೆ ಕೆಲಸ ಮಾಡಿ, ಹಣ ಗಳಿಸಿ

ಆರಂಭದಲ್ಲಿಯೇ ವ್ಲಾಗ್ ನಿಂದ ನಿಮಗೆ ಹಣ ಸಿಗದೆ ಇರಬಹುದು. ಇದಕ್ಕೆ ಹತಾಶರಾಗುವ ಅಗತ್ಯವಿಲ್ಲ. ವ್ಲಾಗ್ ಗೆ ಹೆಚ್ಚಿನ ಖರ್ಚು ಬರದ ಕಾರಣ ನೀವು ವಿಡಿಯೋ ಮಾಡಿ ಪೋಸ್ಟ್ ಮಾಡ್ತಾ ಇರಿ. ನಿರಂತರತೆಯನ್ನು ನೀವು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. 
ಯುಟ್ಯೂಬ್ ವ್ಲಾಗಿಂಗ್ ಜನಪ್ರಿಯವಾಗಿದೆ. ಇದಲ್ಲದೆ ಈಗ ಅನೇಕ ವ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗಳು ಬಂದಿವೆ. ಅಲ್ಲಿಂದ ನೀವು ವ್ಲಾಗಿಂಗ್ ವೃತ್ತಿ ಶುರುಮಾಡಬಹುದು. ಫೇಸ್‌ಬುಕ್ ವೀಡಿಯೋ ಮತ್ತು ಲೈವ್ ನಂತಹ ಎರಡು ಪ್ಲಾಟ್‌ಫಾರ್ಮ್‌ಗಳು ವ್ಲಾಗಿಂಗ್‌ಗಾಗಿ ಹೆಚ್ಚು ಬಳಸಲ್ಪಡುತ್ತವೆ. ಸ್ನ್ಯಾಪ್‌ಚಾಟ್, ಇನ್ಸ್ಟಾಗ್ರಾಮ್‌ನಂತಹ ಇತರ ಪ್ಲಾಟ್‌ಫಾರ್ಮ್‌ ಯೂಟ್ಯೂಬ್‌ಗಿಂತ ಭಿನ್ನವಾಗಿವೆ. ವ್ಲಾಗರ್‌ಗಳಿಗೆ ಹೊಸ ಅನುಭವವನ್ನು ನೀಡುತ್ತಿವೆ.
 

click me!