ತೆರಿಗೆ ಮುಕ್ತ ಪಿಪಿಎಫ್ ಖಾತೆ: ಇಲ್ಲಿದೆ ಡಿಟೇಲ್ಸ್

First Published Jun 14, 2018, 4:09 PM IST
Highlights

ಪಿಪಿಎಫ್ ಖಾತೆಯ ಅನುಕೂಲತೆಗಳು ಏನೆನು?

ಆದಾಯ ತೆರಿಗೆಯಿಂದ ಸಂಪೂರ್ಣ ವಿನಾಯಿತಿ

ಆಕರ್ಷಕ ಬಡ್ಡಿದರ ಮತ್ತು ಆದಾಯ ಸುರಕ್ಷತೆ

ಸಾಲ ಸೌಲಭ್ಯಕ್ಕೂ ಪಿಪಿಎಫ್ ಖಾತೆ ಸಹಾಯ

ಬೆಂಗಳೂರು(ಜೂ.14): ಸಾರ್ವಜನಿಕ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸರ್ಕಾರದ ಬೆಂಬಲಿತ ಧೀರ್ಘಕಾಲೀನ ಹೂಡಿಕೆಯ ಯೋಜನೆಯಾಗಿದೆ. ಇದು ಆದಾಯ ತೆರಿಗೆಯಿಂದ ಸಂಪೂರ್ಣವಾಗಿ ವಿನಾಯಿತಿ ಪಡೆದ ಆಕರ್ಷಕ ಬಡ್ಡಿದರಗಳು ಮತ್ತು ಆದಾಯ ಸುರಕ್ಷತೆಯನ್ನು ಒದಗಿಸುತ್ತದೆ.

ಸಾಲ ಸೌಲಭ್ಯಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಪಿಪಿಎಫ್ ಖಾತೆಯ ವಿಸ್ತರಣೆಯ ಸೌಲಭ್ಯಗಳನ್ನೂ ಸಹ ಪಡೆಯಬಹುದಾಗಿದೆ. ಅಪ್ರಾಪ್ತ ವಯಸ್ಕರ ಪರವಾಗಿ ಪೋಷಕರೂ ಪಿಪಿಎಫ್ ಖಾತೆಗಳನ್ನು ತೆರೆಯಬಹುದು. ಅಲ್ಲದೇ ಪಿಪಿಎಫ್ ಠೇವಣಿಗಳನ್ನು ಪೂರ್ಣ ಪ್ರಮಾಣದ ಮೊತ್ತದಲ್ಲಿ ಅಥವಾ 12 ಕಂತುಗಳಲ್ಲಿ ತುಂಬುವ ಸೌಲಭ್ಯವಿದೆ. ಅಲ್ಲದೇ ನ್ಯಾಯಾಲಯದ ತೀರ್ಪಿನ ಪ್ರಕಾರ ಸಹ ಸಾಲಗಾರರು ನಿಮ್ಮ ಪಿಪಿಎಫ್ ಖಾತೆಗಳನ್ನು ಲಗತ್ತಿಸಲು ಸಾಧ್ಯವಿಲ್ಲ.

ಇನ್ನು ಪಿಪಿಎಫ್ ಖಾತೆಗಳು ವರ್ಷಕ್ಕೆ 7.6 ರಷ್ಟು ಬಡ್ಡಿದರವನ್ನು ಹೊಂದಿದೆ. ಪಿಪಿಎಫ್ ನಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳ ಕುರಿತು ಸರ್ಕಾರ ಪ್ರತಿ ತ್ರೈಮಾಸಿಕ ಅವಧಿಯಲ್ಲಿ ನಿರ್ಧರಿಸುತ್ತದೆ. ಅಲ್ಲದೇ ಪಿಪಿಎಫ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಪ್ರತಿ ವರ್ಷದ ಮಾರ್ಚ್ 31 ರಂದು ಪಾವತಿಸಲಾಗುತ್ತದೆ. ಪ್ರತಿ ತಿಂಗಳಿನ ಬಡ್ಡಿದರವನ್ನು ಐದನೇ ತಿಂಗಳಿನಿಂದ ಪ್ರಾರಂಭಿಸಿ ಕೊನೆಯ ತಿಂಗಳವರೆಗೆ ಖಾತೆಯಲ್ಲಿ ಲಭ್ಯವಿರುವ ಕನಿಷ್ಠ ಮೊತ್ತವನ್ನು ಆಧರಿಸಿ ನಿರ್ಧರಿಸಲಾಗುತ್ತದೆ.

ಅಲ್ಲದೇ ಪಿಪಿಎಫ್ ಖಾತೆಗ: ಮೇಲಿನ ಬಡ್ಡಿಯ ಆದಾಯ ಸಂಪೂರ್ಣ ತೆರಿಗೆ ಮುಕ್ತವಾಗಿರುತ್ತದೆ. ಅಂದರೆ ನಿಮ್ಮ ಕೊಡುಗೆ, ಬಡ್ಡಿಯ ಆದಾಯ ಪಿಪಿಎಫ್ ನಲ್ಲಿ ಹಣ ಪಡೆದುಕೊಂಡಿರುವುದು ಹೀಗೆ ಎಲ್ಲವೂ ಶೂನ್ಯ ತೆರಿಗೆ ಅಡಿಯಲ್ಲಿ ಬರುತ್ತದೆ. ಇದೇ ವೇಳೆ ಮೂರನೇ ಹಣಕಾಸು ವರ್ಷದಿಂದ ಪಿಪಿಎಫ್ ಖಾತೆ ಮೂಲಕ ಗ್ರಾಹಕರು ಸಾಲ ಸೌಲಭ್ಯವನಬ್ನೂ ಪಡೆಯಬಹುದಾಗಿದೆ.

ಪಿಪಿಎಫ್ ಖಾತೆಗಳನ್ನು ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಆಥವಾ ಅಂಚೆ ಕಚೇರಿಯಲ್ಲಿ ತೆರೆಯಬಹುದಾಗಿದೆ. ಈ ದಿನಗಳಲ್ಲಿ ಕೆಲವು ಬ್ಯಾಂಕ್ ಗಳು ಪಿಪಿಎಫ್ ಖಾತೆಯನ್ನು ಆನ್ ಲೈನ್ ಮೂಲಕವೂ ತೆರೆಯಲು ಅವಕಾಶ ಮಾಡಿ ಕೊಡುತ್ತಿದೆ. ಒಟ್ಟಿನಲ್ಲಿ ಪಿಪಿಎಫ್ ಖಾತೆ ಎಂಬುದು ಎಲ್ಲ ರೀತಿಯಿಂದಲೂ ಅನುಕೂಲತೆ ಒದಗಿಸುತ್ತಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

click me!