‘ಹೇಳಿ ಹೋಗು ಕಾರಣ..’ ಇನ್ಫೊಸಿಸ್ ತೊರೆದ ಸಿಇಒ ಸಂಗೀತಾ ಸಿಂಗ್!

Published : Jun 13, 2018, 06:06 PM IST
‘ಹೇಳಿ ಹೋಗು ಕಾರಣ..’ ಇನ್ಫೊಸಿಸ್ ತೊರೆದ ಸಿಇಒ ಸಂಗೀತಾ ಸಿಂಗ್!

ಸಾರಾಂಶ

ಇನ್ಫೋಸಿಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಸ್ಥಾನಕ್ಕೆ ಸಂಗೀತಾ ಸಿಂಗ್ ರಾಜೀನಾಮೆ ದಿಢೀರ್ ರಾಜೀನಾಮೆ ಪ್ರಕಟಿಸಿದ ಸಂಗೀತಾ ಸಿಂಗ್ ಅತ್ಯುನ್ನತ ಹುದ್ದೆಯಲ್ಲಿರುವ ಮಹಿಳಾ ಉದ್ಯೋಗಿ ಎಂಬ ಪ್ರಶಂಸೆಗೆ ಪಾತ್ರ ರಾಜೀನಾಮೆ ಕುರಿತು ಹೇಳಿಕೆ ನೀಡಲು ಸಂಸ್ಥೆ ನಿರಾಕರಣೆ

ಬೆಂಗಳೂರು(ಜೂ.13): ದೇಶದ ಅತಿ ದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಸ್ಥಾನಕ್ಕೆ ಸಂಗೀತಾ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ.

ಇನ್ಫೋಸಿಸ್ ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವಲ್ಲಿ ಒಬ್ಬರಾಗಿದ್ದ ಸಂಗೀತಾ ಸಿಂಗ್‌, ಹೆಲ್ತ್‌ಕೇರ್‌ ಹಾಗೂ ಲೈಫ್‌ ಸೈನ್ಸ್‌ ವಿಭಾಗದ ವ್ಯವಹಾರಗಳ ಮುಖ್ಯಸ್ಥರಾಗಿದ್ದರು. ಸಂಗೀತಾ ಇನ್ಫೋಸಿಸ್ ನ ಉನ್ನತ ಹುದ್ದೆಗೆ ಸೇರಿದ 2 ವರ್ಷದೊಳಗೇ ರಾಜೀನಾಮೆ ನೀಡಿದ್ದಾರೆ. 

ಭಾರತದ ಐಟಿ ಉದ್ಯಮಗಳ ಪೈಕಿ ಅತ್ಯುನ್ನತ ಹುದ್ದೆಯಲ್ಲಿರುವ ಮಹಿಳಾ ಉದ್ಯೋಗಿ ಎಂಬ ಪ್ರಶಂಸೆಗೂ ಸಂಗೀತಾ ಪಾತ್ರರಾಗಿದ್ದರು. ವಿಪ್ರೋದಲ್ಲಿ ಹೆಲ್ತ್‌ಕೇರ್‌ ಹಾಗೂ ಲೈಫ್‌ಸೈನ್ಸ್‌ ವಿಭಾಗದಲ್ಲಿ ಕೆಲಸ ನಿರ್ವಹಿಸಿ ಅನುಭವಿದ್ದ ಅವರು, ಬಳಿಕ ಇನ್ಫೋಸಿಸ್‌ಗೆ ಸೇರಿದ್ದರು. 

ಹಿರಿಯ ಅಧಿಕಾರಿಯ ರಾಜೀನಾಮೆ ಸಂಬಂಧ ಸಂಸ್ಥೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದು, ಸಂಗೀತಾ ಸಿಂಗ್‌ ಸಂಪರ್ಕಕ್ಕೆ ಅಲಭ್ಯರಾದ ಕಾರಣ ರಾಜೀನಾಮೆ ಹಿಂದಿನ ಅಧಿಕೃತ ಕಾರಣ ಇನ್ನೂ ನಿಗೂಢವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?
ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!