ಇನ್ಫೋಸಿಸ್‌ ಕುಟುಂಬದಿಂದ ಈ ವರ್ಷ ₹920 ಕೋಟಿ ದೇಣಿಗೆ; ಯಾವ ಕ್ಷೇತ್ರಕ್ಕೆ ಅಧಿಕ ದಾನ?

Published : Nov 21, 2026, 09:16 AM IST
Infosys shares

ಸಾರಾಂಶ

ಇನ್ಫೋಸಿಸ್ ಕುಟುಂಬವು ಈ ವರ್ಷ ₹920 ಕೋಟಿ ದೇಣಿಗೆ ನೀಡಿದೆ. ಎಚ್‌ಸಿಎಲ್‌ನ ಶಿವ್ ನಾಡಾರ್ ₹2,593 ಕೋಟಿ ನೀಡುವ ಮೂಲಕ ಅತಿ ಹೆಚ್ಚು ದಾನ ಮಾಡಿದವರಾಗಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಅತಿ ಹೆಚ್ಚು ದೇಣಿಗೆ ಹರಿದುಬಂದಿದೆ.

ಮುಂಬೈ: ಕನ್ನಡಿಗ ನಾರಾಯಣ ಮೂರ್ತಿ ಸ್ಥಾಪಿತ ಟೆಕ್‌ ದಿಗ್ಗಜ ಕಂಪನಿ ಇನ್ಫೋಸಿಸ್‌ ಕುಟುಂಬವು 2026ರ ಆರ್ಥಿಕ ವರ್ಷದಲ್ಲಿ (2025ರ ಏ.1ರಿಂದ 2026ರ ಮಾ.31ರ ವರೆಗೆ) ಬರೋಬ್ಬರಿ 920 ಕೋಟಿ ರು. ದೇಣಿಗೆ ನೀಡಿದೆ ಎಂದು ಹುರುನ್ ಇಂಡಿಯಾ ಮತ್ತು ಎಡೆಲ್‌ಗಿವ್ ಸಂಸ್ಥೆ ಶುಕ್ರವಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

ನಂದನ್ ನಿಲೇಕಣಿ, ರೋಹಿಣಿ ನಿಲೇಕಣಿ, ಎಸ್ ಗೋಪಾಲಕೃಷ್ಣನ್, ಕೆ. ದಿನೇಶ್, ಕುಮಾರಿ ಶಿಬುಲಾಲ್ ಮತ್ತು ಎನ್ ಆರ್ ನಾರಾಯಣ ಮೂರ್ತಿ ಅವರು ಒಟ್ಟಾಗಿ ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳು ಹಾಗೂ ಸಂಸ್ಥೆಗಳಿಗೆ 2026ರಲ್ಲಿ ನೀಡಿದ ಒಟ್ಟು ದೇಣಿಗೆಯ ಮೊತ್ತ ಇದಾಗಿದೆ. 2025ರಲ್ಲಿ ಈ ಕುಟುಂಬ 850 ಕೋಟಿ ರು. ದಾನ ಮಾಡಿತ್ತು.

ಶಿವ್‌ ನಾಡಾರ್‌ ಟಾಪ್‌

ಎಚ್‌ಸಿಎಲ್‌ ಮುಖ್ಯಸ್ಥ ಶಿವ್‌ ನಾಡಾರ್‌ ಹಾಗೂ ಕುಟುಂಬ 2,593 ಕೋಟಿ ರು. ದೇಣಿಗೆ ನೀಡುವ ಮೂಲಕ, ‘2026 ರಲ್ಲಿ ದೇಶದ ಅತ್ಯಂತ ಉದಾರರು’ ಎಂಬ ಪಟ್ಟವನ್ನು ಉಳಿಸಿಕೊಂಡಿದೆ. ಉಳಿದಂತೆ, ಭಾರತದ ಅತಿ ಸಿರಿವಂತ ಗೌತಮ್‌ ಅದಾನಿ ಕುಟುಂಬ 877 ಕೋಟಿ ರು. ದೇಣಿಗೆ ನೀಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.127ರಷ್ಟು ಹೆಚ್ಚು. ಅವರ ನಂತರದ ಸ್ಥಾನದಲ್ಲಿರುವ ಬಜಾಜ್‌ ಕುಟುಂಬದ ದೇಣಿಗೆಯಲ್ಲಿ ಶೇ.42ರಷ್ಟು ಏರಿಕೆಯಾಗಿ 632 ಕೋಟಿ ರು. ಆಗಿದೆ. 4ನೇ ಸ್ಥಾನದಲ್ಲಿರುವ ಮುಕೇಶ್‌ ಅಂಬಾನಿಯವರ ಕೊಡುಗೆ ಶೇ.1ರಷ್ಟು ಕುಸಿದು 620 ಕೋಟಿ ರು. ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ದೇಶದ ವಿದೇಶಿ ವಿನಿಮಯ ಮೀಸಲು ನಿಧಿ ಭಾರಿ ಕುಸಿತ: ಒಂದೇ ವಾರದಲ್ಲಿ 14.2 ಬಿಲಿಯನ್ ಡಾಲರ್ ಇಳಿಕೆ
25 ದಿನಗಳಲ್ಲಿ 52 ಲಕ್ಷ ಮದುವೆ: 1.25 ಕೋಟಿ ಜನರಿಗೆ ಉದ್ಯೋಗ- 7.5 ಕೋಟಿ ರೂ ವ್ಯವಹಾರ! ವರದಿ ಬಿಡುಗಡೆ