Milk Price Hike : ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ, ಎಮ್ಮೆ ಹಾಲಿನ ಬೆಲೆ 6 ರೂ.ಗೆ ಏರಿಸಿದ ಈ ಕಂಪನಿ

Published : Nov 19, 2026, 09:11 PM IST
Milk

ಸಾರಾಂಶ

Milk Price Hike : ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಮತ್ತೆ ಮತ್ತೆ ತಟ್ಟುತ್ತಿದೆ. ಒಂದಾದ್ಮೇಲೆ ಒಂದರಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ ಆಗ್ತಿದೆ. ಈಗ ಮತ್ತೊಂದು ಕಂಪನಿ ಹಾಲಿನ ದರ ಏರಿಕೆ ಮಾಡಿದೆ.

ಸಾಮಾನ್ಯ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಈಗಾಗಲೇ ಮದರ್ ಡೈರಿ ಮತ್ತು ಅಮೂಲ್ ಹಾಲಿನ ಬೆಲೆ ಹೆಚ್ಚಿಸಿರುವ ಬೆನ್ನಲ್ಲೇ ಇದೀಗ ಗೋಕುಲ್ ಡೈರಿ ಕೂಡ ಹಾಲಿನ ದರವನ್ನು ಹೆಚ್ಚಿಸಿದೆ. ಎಮ್ಮೆ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 6 ರೂಪಾಯಿ ಹಾಗೂ ಹಸುವಿನ ಹಾಲಿನ ಬೆಲೆಯನ್ನು 2 ರೂಪಾಯಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಹೊಸ ದರಗಳು 2026ರ ನವೆಂಬರ್ 21ರ ಶನಿವಾರದಿಂದ ಜಾರಿಗೆ ಬರಲಿವೆ.

ಡೈರಿ ಯೂನಿಯನ್ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಲು ವಿತರಕರು ಹಾಗೂ ಆಡಳಿತ ಮಂಡಳಿಯಿಂದಲೂ ಬೆಲೆ ಏರಿಕೆ ಮಾಡುವಂತೆ ಬೇಡಿಕೆ ಬಂದಿತ್ತು ಎನ್ನಲಾಗಿದೆ. ಇದೀಗ ಹಾಲಿನ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬೀಳಲಿದೆ.

ಎಮ್ಮೆ ಹಾಲಿನ ಬೆಲೆಯಲ್ಲಿ ಹೆಚ್ಚಳ

ಈ ಬಾರಿ ಎಮ್ಮೆ ಹಾಲಿನ ಬೆಲೆಯಲ್ಲಿ ಅತಿ ಹೆಚ್ಚು ಏರಿಕೆ ಮಾಡಲಾಗಿದೆ. ಪ್ರತಿ ಲೀಟರ್ಗೆ 6 ರೂಪಾಯಿ ಹೆಚ್ಚಿಸಲಾಗಿದೆ. ಇನ್ನು ರೈತರಿಂದ ಖರೀದಿಸುವ ಎಮ್ಮೆ ಹಾಲಿನ ದರವನ್ನು ಪ್ರತಿ ಲೀಟರ್ಗೆ 3 ರೂಪಾಯಿ ಹೆಚ್ಚಿಸಲಾಗಿದೆ. ಅದೇ ರೀತಿ ಹಸುವಿನ ಹಾಲಿನ ಮಾರಾಟ ದರ ಹಾಗೂ ರೈತರಿಂದ ಖರೀದಿಸುವ ದರವನ್ನು ಪ್ರತಿ ಲೀಟರ್ಗೆ ತಲಾ 2 ರೂಪಾಯಿ ಹೆಚ್ಚಿಸಲಾಗಿದೆ.

ಹಾಲಿನ ಬೆಲೆ ಏರಿಕೆಗೆ ಕಾರಣವೇನು?

ಮಾಧ್ಯಮ ವರದಿಗಳ ಪ್ರಕಾರ, ಗೋಕುಲ್ ಡೈರಿ ಸುಮಾರು 70 ಕೋಟಿ ರೂಪಾಯಿಗಳ ಆರ್ಥಿಕ ನಷ್ಟವನ್ನು ಎದುರಿಸುತ್ತಿದೆ. ಈ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಲಿನ ಮಾರಾಟ ದರ ಹೆಚ್ಚಿಸಲು ನಿರ್ಧರಿಸಲಾಗಿದೆ. ಡೈರಿಯಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡಿರುವ ಪ್ರಮುಖ ನಿರ್ಧಾರಗಳಲ್ಲಿ ಇದೂ ಒಂದಾಗಿದೆ. ಅಲ್ಲದೆ, ಮುಂದಿನ ಜನವರಿಯಲ್ಲಿ ಮತ್ತೊಮ್ಮೆ ಹಾಲಿನ ಬೆಲೆ ಏರಿಕೆಯಾಗುವ ಸಾಧ್ಯತೆಯನ್ನೂ ಡೈರಿ ತಳ್ಳಿಹಾಕಿಲ್ಲ.

ಈ ವರ್ಷ ಕೇವಲ ಆರು ತಿಂಗಳ ಅವಧಿಯಲ್ಲಿ ಹಾಲಿನ ಬೆಲೆಯಲ್ಲಿ ಎರಡು ಬಾರಿ ಏರಿಕೆಯಾಗಿದೆ. ಮೊದಲ ಬಾರಿಗೆ ಮೇ ತಿಂಗಳಲ್ಲಿ ಬೆಲೆ ಹೆಚ್ಚಿಸಲಾಗಿತ್ತು. ಇದೀಗ ನವೆಂಬರ್ನಲ್ಲಿಯೂ ದರ ಏರಿಕೆ ಮಾಡಲಾಗಿದೆ. ಸಾಮಾನ್ಯವಾಗಿ ಚಳಿಗಾಲವು ಹೈನುಗಾರಿಕೆ ಉದ್ಯಮಕ್ಕೆ ಲಾಭದಾಯಕ ಅವಧಿಯಾಗಿದೆ. ಈ ಸಮಯದಲ್ಲಿ ಹಾಲಿನ ಉತ್ಪಾದನೆ ಮತ್ತು ಪೂರೈಕೆ ಉತ್ತಮವಾಗಿರುವುದರಿಂದ ಡೈರಿಗಳಿಗೆ ನಷ್ಟ ಕಡಿಮೆ, ಲಾಭ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಹಾಲಿನ ಬೆಲೆ ಏರಿಕೆ ಮಾಡಿರುವುದು ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಸ್ಟ್‌ 172 ರೂಪಾಯಿಗೆ ಅನ್‌ಲಿಮಿಟೆಡ್‌ ಕಾಲ್‌: ಮೂರು ಬಂಪರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ BSNL
ಪಾತಾಳಕ್ಕೆ ಕುಸಿಯುತ್ತಿದೆ ಚಿನ್ನದ ಬೆಲೆ, ಇದರ ನಡುವೆ ಚಿನ್ನದ ಆಭರಣದಲ್ಲಿ ಕಲಬೆರಕೆ ಇದ್ದರೂ ಹಾಲ್‌ಮಾರ್ಕ್ ಟೆಸ್ಟ್‌ ಪಾಸ್! ಏನಿದು 'ಗೋಲ್ಡ್ ಪೌಡರ್'?