ನಗದು ವಿತ್ ಡ್ರಾಗೆ ಶೇ.2ರಷ್ಟು ಟಿಡಿಎಸ್: ಮೊತ್ತ ಎಷ್ಟು ಗೊತ್ತಾ?

Published : Aug 31, 2019, 07:45 PM ISTUpdated : Aug 31, 2019, 07:47 PM IST
ನಗದು ವಿತ್ ಡ್ರಾಗೆ ಶೇ.2ರಷ್ಟು ಟಿಡಿಎಸ್: ಮೊತ್ತ ಎಷ್ಟು ಗೊತ್ತಾ?

ಸಾರಾಂಶ

ನಾಳೆ(ಸೆ.01)ಯಿಂದ ನಗದು ವಿತ್ ಡ್ರಾ ಹೊಸ ವ್ಯವಸ್ಥೆ ಜಾರಿ| ಹೊಸ ವ್ಯವಸ್ಥೆಗೆ ಮುನ್ನುಡಿ ಬರೆದ ಆದಾಯ ತೆರಿಗೆ ಇಲಾಖೆ| ಒಂದು ಕೋಟಿ ರೂ.ಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್| ಕಳೆದ ಕೇಂದ್ರ ಬಜೆಟ್’ನಲ್ಲಿ ಮಾಡಲಾಗಿದ್ದ ಘೋಷಣೆ ಜಾರಿಗೆ| ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡಲು ಕೇಂದ್ರದ ವಿನೂತನ ಕ್ರಮ|

ನವದೆಹಲಿ(ಆ.31): ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಬದಲಾವಣೆಗಳು ಸಹಜ. ಅದರಂತೆ ಒಂದು ಕೋಟಿ ರೂ.ಗೂ ಅಧಿಕ ನಗದು ವಿತ್ ಡ್ರಾ ಮೇಲೆ ಶೇಕಡಾ 2ರಷ್ಟು ಟಿಡಿಎಸ್ ಕಡಿತ ಮಾಡಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ.

ನೂತನ ವ್ಯವಸ್ಥೆ ನಾಳೆ(ಸೆ.01)ರಿಂದಲೇ ಜಾರಿಗೆ ಬರಲಿದ್ದು, ಆ.31ರವರೆಗೆ 1 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ನಗದನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ರಾಹಕರು ವಿತ್ ಡ್ರಾ ಮಾಡಿದ್ದರೆ ಅವರಿಗೂ ಶೇ.2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ. 

ಕಳೆದ ಕೇಂದ್ರ ಬಜೆಟ್’ನಲ್ಲಿ 1 ಕೋಟಿ ರೂ. ಅಧಿಕ ಹಣವನ್ನು ವಿತ್ ಡ್ರಾ ಮಾಡಿದ ಗ್ರಾಹಕರ ಮೇಲೆ ಶೇ.2ರಷ್ಟು ಟಿಡಿಎಸ್ ಹಾಕುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದರು. 

ಬ್ಯಾಂಕ್’ಗಳಲ್ಲಿ ಗಳಲ್ಲಿ ನಗದು ವಹಿವಾಟುಗಳಿಗೆ ಕಡಿವಾಣ ಹಾಕಿ ಡಿಜಿಟಲ್ ಮೂಲಕ ವ್ಯವಹಾರ ಉತ್ತೇಜಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. 

ಸೆಪ್ಟೆಂಬರ್ 1ರಿಂದ ಮೊದಲು 1 ಕೋಟಿ ರೂ.ಗಿಂತ ಕಡಿಮೆ ನಗದು ಮೊತ್ತ ವಿತ್ ಡ್ರಾ ಮಾಡಿದ್ದರೆ ಟಿಡಿಎಸ್ ಅನ್ವಯವಾಗುವುದಿಲ್ಲ, ಆದರೆ ಹಣಕಾಸು ಕಾಯ್ದೆ 194 ಎನ್ ಅಡಿಯಲ್ಲಿ ಏ.1ರಿಂದ ಇಲ್ಲಿಯವರೆಗೆ ನಗದು ವಿತ್ ಡ್ರಾ ಮಾಡಿ, ಅದರ ಮೊತ್ತ 1 ಕೋಟಿ ರೂ. ದಾಟಿದ್ದರೆ ಶೇ.2ರಷ್ಟು ಟಿಡಿಎಸ್ ಕಡಿತವಾಗುತ್ತದೆ. 

ಅಲ್ಲದೆ ಆ.31ರವರೆಗೆ ವ್ಯಕ್ತಿ ಬ್ಯಾಂಕ್, ಸಹಕಾರಿ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಿಂದ ವಿತ್ ಡ್ರಾ ಮಾಡಿದ ಹಣದ ಮೊತ್ತ 1 ಕೋಟಿ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ಮುಂದಿನ ವಿತ್ ಡ್ರಾಗಳಿಗೆ ಶೇ.2ರಷ್ಟು ಟಿಡಿಎಸ್ ಕಡಿತ ಅನ್ವಯವಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!