
ಬೆಂಗಳೂರು(ಆ.31): ಕೇಂದ್ರ ಸರ್ಕಾರ ಮೂರನೇ ಸುತ್ತಿನ ಬ್ಯಾಂಕ್ ವಿಲೀನ ಘೋಷಣೆ ಮಾಡಿದ್ದು, ಈ ಮೂಲಕ 27 ಸಾರ್ವಜನಿಕ ಬ್ಯಾಂಕ್‌ಗಳ ಬದಲಾಗಿ ಇನ್ನು ಮುಂದೆ ಕೇವಲ 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಾರ್ಯಚರಿಸಲಿವೆ.
ಮೂರನೇ ಸುತ್ತಿನಲ್ಲಿ ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್‌ಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ
ವಿಲೀನಗೊಳ್ಳಲಿದ್ದು, ಅಂತೆಯೇ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳಲಿದೆ.
ಕಾರ್ಪೊರೇಷನ್ ಬ್ಯಾಂಕ್ ಮತ್ತು ಆಂಧ್ರ ಬ್ಯಾಂಕ್‌ಗಳು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ಸೇರಲಿವೆ. ಇದೇ ವೇಳೆ ಅಲಹಾಬಾದ್ ಬ್ಯಾಂಕ್ ಇಂಡಿಯನ್ ಬ್ಯಾಂಕ್‌ನಲ್ಲಿ ವಿಲೀನಗೊಳ್ಳಲಿದೆ.
ಸಾರ್ವಜನಿಕ ಬ್ಯಾಂಕ್ ವಿಲೀನ ಪ್ರಕ್ರಿಯೆ:
ಬ್ಯಾಂಕ್ ಮತ್ತು 2018-19ರ ಆರ್ಥಿಕ ವರ್ಷದ ಅಂದಾಜು ವಹಿವಾಟು(ಲಕ್ಷ ಕೋಟಿ ರೂ.ಗಳಲ್ಲಿ):
1. ಪಂಜಾಬ್ ನ್ಯಾಶನಲ್ ಬ್ಯಾಂಕ್(11.82), ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್(4.4), ಯುನೆಟೆಡ್ ಬ್ಯಾಂಕ್ ಆಫ್ ಇಂಡಿಯಾ(2.08)
ಒಟ್ಟು(17.94)- ಎರಡನೇ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್
2. ಕೆನರಾ ಬ್ಯಾಂಕ್(10.43) ಸಿಂಡಿಕೇಟ್ ಬ್ಯಾಂಕ್(4.77)
ಒಟ್ಟು(15.20)- ನಾಲ್ಕನೇ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್
3. ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ(7.41) ಆಂದ್ರ ಬ್ಯಾಂಕ್(3.99), ಕಾರ್ಪೋರೇಶನ್ ಬ್ಯಾಂಕ್(3.20)
ಒಟ್ಟು(14.60)- ಐದನೇ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್
4. ಇಂಡಿಯನ್ ಬ್ಯಾಂಕ್(4.30) ಅಲಹಾಬಾದ್ ಬ್ಯಾಂಕ್(3.78)
ಒಟ್ಟು(8.08)- ಏಳನೇ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್
ಮಾಹಿತಿ ಮೂಲ: ಕೇಂದ್ರ ವಿತ್ತ ಸಚಿವಾಲಯ
ಒಟ್ಟಿನಲ್ಲಿ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಆರ್ಥಿಕ ಶಿಸ್ತು ಮತ್ತು ಬ್ಯಾಂಕ್ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕೇಂದ್ರದ ಈ ನಡೆ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.