ಧೈರ್ಯವೂ ಇಲ್ಲ, ಜ್ಞಾನವೂ ಇಲ್ಲ: ಮೋದಿ ಕಾಲೆಳೆದ ಸ್ವಾಮಿ!

Published : Aug 31, 2019, 03:04 PM ISTUpdated : Aug 31, 2019, 03:13 PM IST
ಧೈರ್ಯವೂ ಇಲ್ಲ, ಜ್ಞಾನವೂ ಇಲ್ಲ: ಮೋದಿ ಕಾಲೆಳೆದ ಸ್ವಾಮಿ!

ಸಾರಾಂಶ

ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಸುಬ್ರಮಣಿಯನ್ ಸ್ವಾಮಿ| 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಕುರಿತು ಸ್ವಾಮಿ ವ್ಯಂಗ್ಯ| ಗುರಿ ಸಾಧಿಸಲು ಬೇಕಾದ  ಧೈರ್ಯ ಮತ್ತು ಜ್ಞಾನ ನಮ್ಮಲ್ಲಿಲ್ಲ ಎಂದ ಸ್ವಾಮಿ| ಭಾರತದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ| ಕೇಂದ್ರ ಸರ್ಕಾರ ಕೂಡಲೇ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಸ್ವಾಮಿ ಆಗ್ರಹ|

ನವದೆಹಲಿ(ಆ.31): ಪ್ರಧಾನಿ ನರೇಂದ್ರ ಮೋದಿ ಅವರ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು, ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ.

 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಲು ಬೇಕಾದ  ಧೈರ್ಯ ಮತ್ತು ಜ್ಞಾನ ಎರಡೂ ನಮ್ಮಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದಾಗಿ ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಅಲ್ಲದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ಕೇಂದ್ರ ಬಜೆಟ್ ವೇಳೆ ಈ ಕುರಿತು ಪ್ರಸ್ತಾಪ ಮಾಡಿದ್ದರು. ಆದರೆ ಅದನ್ನು ಸಾಧಿಸುವ ಮಾರ್ಗದ ಕುರಿತು ಯಾರೂ ಮಾತನಾಡುತ್ತಿಲ್ಲ ಎಂದು ಸ್ವಾಮಿ ಹರಿಹಾಯ್ದಿದ್ದಾರೆ.

ಭಾರತದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದ್ದು, ಆರ್ಥಿಕತೆಯ ಪುನಶ್ಚೇತನ ಸಾಧ್ಯವಾಗದಿರುವುದು ದುರಂತ ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ. 

ಕಳೆದ ಆರು ವರ್ಷಗಳಲ್ಲೇ ಜಿಡಿಪಿ ದರ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಕೇಂದ್ರ ಸರ್ಕಾರ ಕೂಡಲೇ ಹೊಸ ಆರ್ಥಿಕ ನೀತಿಯನ್ನು ಜಾರಿಗೊಳಿಸದೆ ಹೋದರೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಗುಡ್ ಬೈ ಹೇಳಲು ಸಿದ್ಧರಾಗಬೇಕಾಗುತ್ತದೆ ಎಂದು ಸ್ವಾಮಿ ವ್ಯಂಗ್ಯವಾಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Zomato ಅಪ್ಲಿಕೇಶನ್‌ಗೆ ಟೋಪಿ ಹಾಕಿದ ಗ್ರಾಹಕರು, ರೆಸ್ಟೋರೆಂಟ್‌: ಕಮಿಷನ್, ಪ್ಲಾಟ್‌ಫಾರ್ಮ್ ಫೀಸ್‌ನಿಂದ ಬಚಾವ್‌ ಆಗಲು ಸಿಕ್ತು ಟ್ರಿಕ್‌
ಏರ್‌ಟೆಲ್ ಗ್ರಾಹಕರಿಗೆ ಬಂಪರ್ ಆಫರ್: ಅತೀ ಕಡಿಮೆ ದರದ ಪ್ಲ್ಯಾನ್‌ನಲ್ಲಿ ಇಡೀ ವರ್ಷ ಅನ್‌ಲಿಮಿಟೆಡ್ ಕಾಲಿಂಗ್!