ಟಾಟಾ ಸಮೂಹ ತನ್ನ ಹಾಸ್ಪಿಟಾಲಿಟಿ ವಿಭಾಗ ಇಂಡಿಯನ್ ಹೋಟೆಲ್ಸ್ ಕಂಪನಿ ಮೂಲಕ, ಲಕ್ಷದ್ವೀಪದಲ್ಲಿ ಎರಡು ತಾಜ್ ಬ್ರ್ಯಾಂಡ್‌ನ ಹೋಟೆಲ್‌ಗಳನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ.
ನವದೆಹಲಿ (ಜ.8): ಭಾರತದ ಅತ್ಯಂತ ಐಷಾರಾಮಿ ಹೋಟೆಲ್‌ಗಳನ್ನು ನಿರ್ಮಾಣ ಮಾಡಿರುವ ಟಾಟಾ ಗ್ರೂಪ್‌ನ ಇಂಡಿಯನ್ ಹೋಟೆಲ್ಸ್ ಕಂಪನಿ (ಐಎಚ್‌ಸಿಎಲ್) ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದ ಸುಹೇಲಿ ಹಾಗೂ ಕದ್ಮತ್ ದ್ವೀಪಗಳಲ್ಲಿ ಎರಡು ತಾಜ್ ಬ್ರ್ಯಾಂಡ್‌ನ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುವಿದಾಗಿ ಘೋಷಣೆ ಮಾಡಿದೆ. ಈ ರೆಸಾರ್ಟ್‌ಗಳು 2026ರಲ್ಲಿ ಆರಂಭವಾಗುವ ಸಾಧ್ಯತೆಗಳಿದ್ದು, ದ್ವೀಪದ ಪರಿಸರ ವ್ಯವಸ್ಥೆಯ ಸುಸ್ಥಿರತೆ ಹಾಗೂ ಸಂರಕ್ಷಣೆಯ ಮೇಲೆ ಕೇಂದ್ರೀಕರಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದೆ. ಭಾರತದ ಅತಿ ದೊಡ್ಡ ಹಾಸ್ಪಿಟಾಲಿಟಿ ಕಂಪನಿಯಾದ ಐಎಚ್‌ಸಿಎಲ್, ರಾಜಸ್ಥಾನ, ಕೇರಳ, ಗೋವಾ ಹಾಗೂ ಅಂಡಮಾನ್‌ಗಳಂಥ ಸ್ಥಳಗಳನ್ನು ಜಾಗತಿಕ ಪ್ರವಾಸಿ ನಕ್ಷೆಯಲ್ಲಿ ಇರಿಸಿರುವ ನಮ್ಮ ಬದ್ಧತೆಯೇ ಲಕ್ಷದ್ವೀಪದಲ್ಲಿ ಕೆಲಸ ಮಾಡಲಿದೆ ಎಂಧು ತಿಳಿಸಿದೆ. ಐಎಚ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪುನೀತ್ ಛತ್ವಾಲ್ ಮಾತನಾಡಿ, ಈ ರೆಸಾರ್ಟ್‌ಗಳು ಪ್ರವಾಸಿಗರಿಗೆ ವಿಶಿಷ್ಟವಾದ ಮತ್ತು ವಿಭಿನ್ನವಾದ ಅನುಭವವನ್ನು ನೀಡುತ್ತವೆ ಮತ್ತು ಪರಿಸರದ ಮೇಲೆ ಯಾವುದೇ ಕೆಟ್ಟ ಪ್ರಭಾವವನ್ನು ಈ ರೆಸಾರ್ಟ್‌ಗಳು ಬೀರೋದಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಹದಗೆಟ್ಟ ಸಂಬಂಧಗಳ ಮಧ್ಯೆ, ಲಕ್ಷದ್ವೀಪವನ್ನು ಭಾರತೀಯ ಪ್ರವಾಸಿಗರಿಗೆ ಪ್ರಮುಖ ವಿಹಾರ ತಾಣವಾಗಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿ ಐಎಸ್‌ಸಿಎಲ್ ಈ ನಿರ್ಧಾರ ಮಾಡಿದೆ. ಭಾರತವು ತನ್ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಲ್ಡೀವ್ಸ್ ಸರ್ಕಾರ ಆರೋಪಿಸಿದೆ ಮತ್ತು ಅದರ ಕೆಲವು ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ. ಪ್ರತಿಕ್ರಿಯೆಯಾಗಿ, ಮೋದಿ 2023 ಡಿಸೆಂಬರ್‌ನಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಲಕ್ಷದ್ವೀಪವನ್ನು ಪ್ರವಾಸಿ ತಾಣವನ್ನಾಗಿ ಆಯ್ಕೆ ಮಾಡಲು ಭಾರತೀಯರನ್ನು ಒತ್ತಾಯಿಸಿದರು.
ಸುಹೇಲಿ ದ್ವೀಪದಲ್ಲಿ ನಿರ್ಮಾಣವಾಗಲಿರುವ ತಾಜ್ ಸುಹೇಲಿಯಲ್ಲಿ 110 ಕೋಣೆಗಳು ಇರಲಿದ್ದು, ಇದರಲ್ಲಿ 60 ಬೀಚ್ ವಿಲ್ಲಾಗಳು ಆಗಿರಲಿದೆ. 50 ವಾಟರ್ ವಿಲ್ಲಾ ಆಗಿರಲಿದೆ. ಇನ್ನು ತಾಜ್ ಕದ್ಮತ್‌ನಲ್ಲಿ 110 ಕೋಣೆಗಳು ಇರಲಿದ್ದು, ಇದರಲ್ಲಿ 75 ಬೀಚ್ ವಿಲ್ಲಾಗಳಾಗಿದ್ದರೆ, 35 ವಾಟರ್ ವಿಲ್ಲಾ ಆಗಿರಲಿದೆ. ಏಲಕ್ಕಿ ದ್ವೀಪ ಎಂದೂ ಕರೆಯಲ್ಪಡುವ ಕಡ್ಮತ್ ದ್ವೀಪವು ಹವಳದ ದ್ವೀಪವಾಗಿದ್ದು, ಸಮುದ್ರ ಆಮೆಗಳ ಗೂಡುಕಟ್ಟುವಿಕೆಗೆ ಪ್ರಮುಖವಾದ ಸಮುದ್ರದ ಹಾಸುಗಳನ್ನು ಹೊಂದಿರುವ ದೊಡ್ಡ ಆವೃತ ಮತ್ತು ಸಮುದ್ರ ಸಂರಕ್ಷಿತ ಪ್ರದೇಶವಾಗಿದೆ.
Photos: ನೀವೆಷ್ಟೇ ಲಕ್ಷ ಖರ್ಚು ಮಾಡಿದ್ರೂ, ಲಕ್ಷದ್ವೀಪದ ಸೌಂದರ್ಯ ನಿಮಗೆಲ್ಲೂ ಸಿಗದು..
ಐಎಚ್‌ಸಿಎಲ್ ಉತ್ತರ ಪ್ರದೇಶದ ದುಧ್ವಾದಲ್ಲಿ ಜಾಗೀರ್ ಮ್ಯಾನರ್ ಎಂಬ SeleQtions ಹೋಟೆಲ್ ಅನ್ನು ಸಹ ಪ್ರಾರಂಭಿಸಿದೆ. ಈ 20-ಕೋಣೆಗಳ ಹೋಟೆಲ್, ತೋಟಗಳು ಮತ್ತು ಕಾಡುಗಳ ನಡುವೆ ವ್ಯಾಪಿಸಿದೆ. 1940 ರ ದಶಕದ ಪರಂಪರೆಯ ಕೊಠಡಿಗಳು ಮತ್ತು ಐಷಾರಾಮಿ ವಿಲ್ಲಾಗಳನ್ನು ಇದು ಹೊಂದಿದೆ.
ಭಾರತೀಯರ ಕುರಿತು ಟೀಕೆ ಮಾಡಿದ ಮಾಲ್ಡೀವ್ಸ್ ಆಡಳಿತಾರೂಢ ಪಕ್ಷದ ಸದಸ್ಯ, ನೆಟ್ಟಿಗರು ಕೊಟ್ರು ಪರ್ಫೆಕ್ಟ್ ಉತ್ತರ!