ಕೆಲ್ಸ ಸಿಕ್ತಾ?: ಸಿಟಿಸಿ, ಟೇಕ್ ಹೋಂ ನೋಡಿಕೊಂಡ್ರಿ ತಾನೆ?

By Web DeskFirst Published Aug 8, 2018, 12:15 PM IST
Highlights

ಸಿಟಿಸಿ, ಟೇಕ್ ಹೋಂ ನಡುವಿನ ವ್ಯತ್ಯಾಸವೇನು? ನೇಮಕಾತಿ ಪತ್ರ ಗಮನಿಸುವುದು ಒಳಿತು! ವೇತನ ಸಂಬಂಧಿ ಮಾತುಕತೆಯಲ್ಲಿ ಇರಲಿ ಸ್ಪಷ್ಟತೆ! ವೇತನ ಬಂದಾಗ ವ್ಯತ್ಯಾಸ ಕಂಡು ಆಘಾತಗೊಳ್ಳದಿರಿ

ಬೆಂಗಳೂರು(ಆ.8): ಸಂದರ್ಶನ ಮುಗಿಸಿ ಕೆಲಸಕ್ಕೆ ಸೇರುವ ಮುನ್ನ ನೇಮಕಾತಿ ಪತ್ರದಲ್ಲಿ ಇರುವ ವೇತನದ ಮೊತ್ತ ನೋಡಿ ಖಂಡಿತ ಎಲ್ಲರಿಗೂ ಖುಷಿಯಾಗಿರುತ್ತದೆ. ಆದರೆ ಮೊದಲ ತಿಂಗಳ ಸಂಬಳ ಕೈಗೆ ಬಂದಾಗ ತುಸು ಆಘಾತವಾಗುತ್ತದೆ. ನೇಮಕಾತಿ ಪತ್ರದಲ್ಲಿರುವ ಮೊತ್ತಕ್ಕೂ ಪಾವತಿಯಾದ ಮೊತ್ತಕ್ಕೂ ಏನೋ ವ್ಯತ್ಯಾಸ ಇರುವಂತೆ ಅನಿಸುತ್ತದೆ. 

ಇದಕ್ಕೆ ಕಾರಣ ನೀವು ಸಂದರ್ಶನದ ದಿನ ನೇಮಕಾತಿ ಪತ್ರ ಪಡೆಯುವ ಮುನ್ನ, ಸಿಟಿಸಿ ಮತ್ತು ಟೇಕ್ ಹೋಮ್ ನಡುವಿನ ವ್ಯತ್ಯಾಸ ತಿಳಿದುಕೊಳ್ಳದೇ ಇರುವುದು. ಸಿಟಿಸಿ ಮತ್ತು ಟೇಕ್ ಹೋ ಸ್ಯಾಲರಿ ನಡುವಿನ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ.

ಸಿಟಿಸಿ ಅಂದರೆ ಉದ್ಯೋಗಿಗಳಿಗೆ ಉದ್ಯೋಗದಾತ ಸಂಸ್ಥೆ ಕೊಡ ಮಾಡುವ ಒಟ್ಟು ಮೊತ್ತವನ್ನೇ ಕಾಸ್ಟ್ ಟು ಕಂಪನಿ ಎಂದು ಕರೆಯಲಾಗುತ್ತದೆ. ಇದು ಬೋನಸ್ ಮತ್ತಿತರ ಸಂಗತಿಗಳನ್ನು ಒಳಗೊಂಡಿರುತ್ತದೆ. ಭವಿಷ್ಯ ನಿಧಿ ಕೂಡ ಸಿಟಿಸಿ ಪರಿಧಿಯೊಳಗೆ ಬರುತ್ತದೆ. ಇದೇ ಕಾರಣಕ್ಕೆ ನಿಮಗೆ ಕಂಪನಿ ವೇತನದ ಆಫರ್ ನೀಡಿದ ಮೊತ್ತಕ್ಕಿಂತ ಶೇ. 10-20 ರಷ್ಟು ಕಡಿಮೆ ಹಣ ಕೈ ಸೇರುತ್ತದೆ. 

ಅಂದರೆ ಪಿಎಫ್ ಮತ್ತಿತರ ಮೊತ್ತವನ್ನು ಕಡಿತ ಮಾಡಿಕೊಳ್ಳಲಾಗುತ್ತದೆ. ನಿಮಗೆ ಕಂಪನಿ ಸ್ಯಾಲರಿ ಆಫರ್ ನೀಡಿದಾಗಲೇ ಇದನ್ನೆಲ್ಲ ತಿಳಿದುಕೊಳ್ಳುವುದು ಉತ್ತಮ. ಕೆಲವೊಮ್ಮೆ ತೆರಿಗೆ ವಿನಾಯಿತಿಯಿಂದಲೂ ತಪ್ಪಿಸಿಕೊಳ್ಳಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗುವ ಸಂಭವವಿರುತ್ತದೆ. 

ಇದರೊಂದಿಗೆ ವೈದ್ಯಕೀಯ ವಿಮೆಯನ್ನು ಭರ್ತಿ ಮಾಡುವುದು ಕಡ್ಡಾಯ. ಸಿಬ್ಬಂದಿ ಮತ್ತು ಕಂಪನಿ ನಡುವಿನ ಕರಾರಿಗೆ ತಕ್ಕಂತೆ ವೇತನ ಪಾವತಿಯಾಗಿರುತ್ತದೆ. ಕೆಲಸಕ್ಕೆ ಸೇರುವ ಮೊದಲು ಅಥವಾ ಅಪಾಂಟ್ಮೆಂಟ್ ಲೆಟರ್ ಗೆ ಸಹಿ ಹಾಕುವ ಮೊದಲು ಸ್ಯಾಲರಿ ಕುರಿತಾಗಿ ಸಮಗ್ರ ಮಾತುಕತೆ ಮಾಡಿಕೊಳ್ಳಬೇಕು ಮತ್ತು ತೆರಿಗೆ ವಿನಾಯಿತಿ ಮತ್ತಿತರ ಅಂಶಗಳನ್ನು ತಿಳಿದುಕೊಂಡಿರಬೇಕು.

click me!