ಮೋದಿ ಎಫೆಕ್ಟ್?: ನಷ್ಟದ ಲೆಕ್ಕ ತೋರಿಸಿದ ಪಿಎನ್ ಬಿ!

Published : Aug 08, 2018, 11:10 AM IST
ಮೋದಿ ಎಫೆಕ್ಟ್?: ನಷ್ಟದ ಲೆಕ್ಕ ತೋರಿಸಿದ ಪಿಎನ್ ಬಿ!

ಸಾರಾಂಶ

ಲಲಿತ್ ಬರೆದ ಪಿಎನ್‌ಬಿ ಹಣೆಬರಹ! ತ್ರೈಮಾಸಿಕ ಅವಧಿಯಲ್ಲಿ ನಷ್ಟದ ಲೆಕ್ಕ! 940 ಕೋಟಿ ರೂ. ನಷ್ಟದಲ್ಲಿ ಪಿಎನ್‌ಬಿ! ಎನ್‌ಪಿಎ ಶೇ. 18.26ಕ್ಕೆ ಏರಿಕೆಯೇ ಕಾರಣ

ನವದೆಹಲಿ(ಆ.8): ಹಗರಗಳಿಂದ ಬೆಂದು ಬೆಂಡಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 2018-19ನೇ ಸಾಲಿನ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲೇ 940 ಕೋಟಿ ರೂ. ನಷ್ಟ ಅನುಭವಿಸಿದೆ.

2017-18ನೇ ಸಾಲಿನ ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಪಿಎನ್‌ಬಿ 343.40 ಕೋಟಿ ರೂ. ಲಾಭ ಗಳಿಸಿತ್ತು. ಕೇವಲ ಒಂದು ವರ್ಷದ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಒಟ್ಟು ಆದಾಯ 14,468.14 ಕೋಟಿ ರೂ.ದಿಂದ 15,072 ಕೋಟಿ ರೂ.ಗೆ ಏರಿಕೆಯಾಗಿತ್ತು. 

ಆದರೆ ಜೂನ್ 30, 2018ರ ವೇಳೆಗೆ ಬ್ಯಾಂಕಿನ ಅನುತ್ಪಾದಕ ಆಸ್ತಿ ಮೌಲ್ಯ(ಎನ್‌ಪಿಎ) ಶೇ.18.26ಕ್ಕೆ ಏರಿಕೆಯಾಗಿರುವುದರಿಂದ ಸಾರ್ವಜನಿಕ ವಲಯದ ಬ್ಯಾಂಕ್ ನಷ್ಟ ಅನುಭವಿಸುತ್ತಿದೆ ಎಂದು ವರದಿ ತಿಳಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ಇಂಡಿಗೋ ಅವಾಂತರ: ನಾಲ್ವರು ಫ್ಲೈಟ್ ಆಪರೇಷನ್ ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದ ಡಿಜಿಸಿಎ