ಈ ಬಾರಿ ಸ್ವಿಸ್‌ ಬ್ಯಾಂಕಿಂದ ರಿಯಲ್‌ ಎಸ್ಟೇಟ್‌ ಮಾಹಿತಿ!

By Suvarna News  |  First Published Sep 13, 2021, 8:29 AM IST

* ಮೊದಲ ಬಾರಿಗೆ ಭಾರತೀಯರ ಸ್ಥಿರಾಸ್ತಿ ಮಾಹಿತಿ ಬಹಿರಂಗ

* ಈ ಬಾರಿ ಸ್ವಿಸ್‌ ಬ್ಯಾಂಕಿಂದ ರಿಯಲ್‌ ಎಸ್ಟೇಟ್‌ ಮಾಹಿತಿ


 

ನವದೆಹಲಿ(ಸೆ.13): ಸ್ವಿಜರ್ಲೆಂಡ್‌ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ, ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತೀಯರ ಹಣದ ಕುರಿತ 3ನೇ ವರದಿ ಶೀಘ್ರವೇ ಭಾರತದ ಕೈ ಸೇರಲಿದೆ. ಜೊತೆಗೆ ಈ ಬಾರಿ ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಸ್ವಿಸ್‌ ಬ್ಯಾಂಕ್‌ಗಳು ಭಾರತೀಯರು ಹೊಂದಿರುವ ರಿಯಲ್‌ ಎಸ್ಟೇಟ್‌ ಆಸ್ತಿಗಳ ಕುರಿತೂ ಮಾಹಿತಿಯನ್ನು ಹಂಚಿಕೊಳ್ಳಲಿದೆ.

Latest Videos

undefined

ಅಂದರೆ ಭಾರತೀಯರು ಸ್ವಿಜರ್ಲೆಂಡ್‌ನಲ್ಲಿರುವ ಹೊಂದಿರುವ ಫ್ಲ್ಯಾಟ್‌, ಅಪಾರ್ಟ್‌ಮೆಂಟ್‌, ಮನೆ ಮತ್ತು ಅದರಿಂದ ಬರುತ್ತಿರುವ ಆದಾಯದ ಕುರಿತ ಭಾರತ ಸರ್ಕಾರದ ಕೈ ಸೇರಲಿದೆ. ಇದರಿಂದಾಗಿ ಈ ಆಸ್ತಿಗಳ ಕುರಿತಾಗಿ ಭಾರತೀಯರು ಸರ್ಕಾರಕ್ಕೆ ಸಲ್ಲಿಸಬೇಕಿರುವ ತೆರಿಗೆಗಳ ಕುರಿತು ಮಾಹಿತಿ ಸಂಗ್ರಹಿಸಲು ಅನುಕೂಲ ಮಾಡಿಕೊಡಲಿದೆ.

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಹೊಂದಿರುವ ಹಣದ ಮಾಹಿತಿಯನ್ನು ಸೆಪ್ಟೆಂಬರ್‌, 2019ರಲ್ಲಿ ಮೊದಲ ಬಾರಿ ನೀಡಲಾಗಿತ್ತು. ಈ ಬಾರಿ ಬ್ಯಾಂಕ್‌ ಖಾತೆಯ ಮಾಹಿತಿಯೊಂದಿಗೆ ರಿಯಲ್‌ ಎಸ್ಟೇಟ್‌ ಕುರಿತ ಮಾಹಿತಿಯನ್ನು ಸಹಾ ನೀಡುತ್ತಿದೆ. ಕಳೆದ 2ವರ್ಷದಿಂದ ಸ್ವಿಸ್‌ ಬ್ಯಾಂಕ್‌ 30 ಲಕ್ಷಕ್ಕೂ ಅಧಿಕ ಖಾತೆಗಳ ಮಾಹಿತಿಯನ್ನು ವಿವಿಧ ದೇಶಗಳೊಂದಿಗೆ ಹಂಚಿಕೊಂಡಿದೆ. ಇದರಲ್ಲಿ ಭಾರತವೂ ಸಹ ಪ್ರಮುಖ ದೇಶವಾಗಿದೆ.

click me!