ಸ್ವಿಗ್ಗಿಯಿಂದ Rs 99 Store ಆರಂಭ, ಫುಡ್‌ ಫ್ರೀ ಡೆಲಿವರಿ!

Published : Jul 01, 2025, 07:31 PM IST
Swiggy Instamart users get up to Rs 5 lakh in free cash what is the truth

ಸಾರಾಂಶ

ಸ್ವಿಗ್ಗಿ ತನ್ನ ಆ್ಯಪ್‌ನಲ್ಲಿ 99 ರೂ.ಗಳ ಫ್ಲ್ಯಾಟ್‌ ಪ್ರೈಸ್‌ ಮೀಲ್‌ಗಳನ್ನು ಒಳಗೊಂಡ ಹೊಸ ವಿಭಾಗವನ್ನು ಪ್ರಾರಂಭಿಸಿದೆ. ಈ ಆಫರ್‌ 175ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಆಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಬೆಂಗಳೂರು (ಜು.1): ದೆಹಲಿ, ಬೆಂಗಳೂರು ಮತ್ತು ಕೋಲ್ಕತ್ತಾ ಸೇರಿದಂತೆ 175 ಕ್ಕೂ ಹೆಚ್ಚು ನಗರಗಳಲ್ಲಿ ಫ್ಲ್ಯಾಟ್‌ ಪ್ರೈಸ್‌ ಮೀಲ್‌ಗಳ ಪ್ಲ್ಯಾನ್‌ ಲೈವ್‌ಆಗಿದೆ ಎಂದು ಕಂಪನಿಯು ಜುಲೈ 1 ರಂದು ತಿಳಿಸಿದೆ.ಸ್ವಿಗ್ಗಿ ತನ್ನ ಅಪ್ಲಿಕೇಶನ್‌ನಲ್ಲಿRs 99 Store ವಿಭಾಗವನ್ನು ಪ್ರಾರಂಭಿಸಿದೆ, ಇದು ತನ್ನ ಇಕೋ ಸೇವರ್ ಮೋಡ್ ಮೂಲಕ ಫ್ರೀ ಡೆಲಿವರಿಯೊಂದಿಗೆ 99 ರೂಪಾಯಿಗೆ ಸಿಂಗಲ್‌ ಸರ್ವ್‌ ಫುಡ್‌ಗಳನ್ನು ನೀಡಲಿದೆ.

ಈ ವಿಭಾಗವು 175 ಕ್ಕೂ ಹೆಚ್ಚು ನಗರಗಳಲ್ಲಿ ಲೈವ್ ಆಗಿದೆ. ಹೆಚ್ಚಿ ಫ್ರೀಕ್ವೆನ್ಸಿಯಲ್ಲಿ ಅಪ್ಲಿಕೇಶನ್‌ಅನ್ನು ಬಳಸುವ, ಕಡಿಮೆ ಬೆಲೆಯಲ್ಲಿ ಆಹಾರವನ್ನು ಹುಡುಕುವ ಮತ್ತು ವಿಶೇಷವಾಗಿ Gen-Z ಬಳಕೆದಾರರು ಮತ್ತು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದೆ.

ಈ ಆಫರಿಂಗ್‌ನಲ್ಲಿ ಪಾಲುದಾರ ರೆಸ್ಟೋರೆಂಟ್‌ಗಳಿಂದ ಬಿರಿಯಾನಿ, ರೋಲ್ಸ್, ನೂಡಲ್ಸ್, ಬರ್ಗರ್‌ಗಳು, ಕೇಕ್‌ಗಳು ಮತ್ತು ಪ್ರಾದೇಶಿಕ ಪಾಕಪದ್ಧತಿಗಳಂತಹ ವಿಭಾಗಗಳನ್ನು ಒಳಗೊಂಡ ಕ್ವಿಕ್‌ ರೆಡಿ ವಸ್ತುಗಳನ್ನು ಒಳಗೊಂಡಿದೆ. ಎಲ್ಲಾ ವಸ್ತುಗಳ ಬೆಲೆ 99 ರೂ.ಗಳಾಗಿದ್ದು, ಇಕೋ ಸೇವರ್ ಆಯ್ಕೆಯ ಅಡಿಯಲ್ಲಿ ಯಾವುದೇ ವಿತರಣಾ ಶುಲ್ಕ ಇದಕ್ಕೆ ಇರೋದಿಲ್ಲ.

"99 ರೂ.ಗಳಲ್ಲಿ, ಇದು ಕೇವಲ ಬೆಲೆಯಲ್ಲ - ಇದು ಭರವಸೆಯಾಗಿದೆ" ಎಂದು ಸ್ವಿಗ್ಗಿಯ ಆಹಾರ ಮಾರುಕಟ್ಟೆಯ ಸಿಇಒ ರೋಹಿತ್ ಕಪೂರ್ ತಿಳಿಸಿದ್ದಾರೆ. "ನಾವು ರೆಸ್ಟೋರೆಂಟ್ ಪಾಲುದಾರರು ಮತ್ತು ನಮ್ಮ ವಿತರಣಾ ಪಡೆಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ, ಇದರಿಂದಾಗಿ ದೈನಂದಿನ ಊಟವನ್ನು ಹೆಚ್ಚು ಕೈಗೆಟುಕುವಂತೆ ಮಾಡಬಹುದು." ಎಂದು ತಿಳಿಸಿದ್ದಾರೆ.

ಸ್ವಿಗ್ಗಿ 99 ಸ್ಟೋರ್ "ಡಿಶ್-ಫಾರ್ವರ್ಡ್ ವಿನ್ಯಾಸ"ವನ್ನು ಹೊಂದಿದ್ದು, ಇದು ಹೆಚ್ಚು ಮಾರಾಟವಾಗುವ ವಸ್ತುಗಳನ್ನು ಹೈಲೈಟ್ ಮಾಡಿ ಆವಿಷ್ಕಾರಕ್ಕೆ ಸಹಾಯ ಮಾಡುತ್ತದೆ ಮತ್ತು ಬಜೆಟ್‌ನಲ್ಲಿ ಗ್ರಾಹಕರಿಗೆ ದೈನಂದಿನ ಊಟ ಅಥವಾ ಭೋಜನದ ಆಯ್ಕೆಯಾಗುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

ಕ್ವಿಕ್‌ ಕಾಮರ್ಸ್‌ ಮತ್ತು ಹೈಪರ್‌ಲೋಕಲ್ ಅಪ್ಲಿಕೇಶನ್‌ಗಳಿಂದ ತೀವ್ರಗೊಳ್ಳುತ್ತಿರುವ ಸ್ಪರ್ಧೆಯ ಮಧ್ಯೆ, ಫುಡ್‌ ಡೆಲಿವರಿ ಅಪ್ಲಿಕೇಶನ್‌ಗಳು ಡ್ರೈವ್‌ ಫ್ರೀಕ್ವೆನ್ಸಿ ಮತ್ತು ರಿಟೆನ್ಶನ್‌ ಹೆಚ್ಚಿಸಲು ಹೆಚ್ಚುತ್ತಿರುವ ಒತ್ತಡವನ್ನು ಎದುರಿಸುತ್ತಿರುವಾಗ ಈ ಅನಾವರಣ ಬಂದಿದೆ.

ಈ ಕ್ರಮವು ಸ್ವಿಗ್ಗಿಗೆ ಕಡಿಮೆ ಮೌಲ್ಯದ ಊಟಗಳನ್ನು ಆರ್ಡರ್ ಮಾಡುವ ಅಥವಾ ಡೆಲಿವರಿ ಶುಲ್ಕದಿಂದಾಗಿ ಹಿಂಜರಿಯುವ ಯೂಸರ್‌ಗಳನ್ನು ಗುರಿಯಾಗಿಸಿಕೊಳ್ಳಲು ಸಾಧ್ಯವಾಗಲಿದೆ. ಇದು ಕಂಪನಿಯು ಪೀಕ್ ಇಲ್ಲದ ಸಮಯದಲ್ಲಿ ತನ್ನ ವಿತರಣಾ ಫ್ಲೀಟ್ ಅನ್ನು ಉತ್ತಮವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಹೆಚ್ಚಿನ ಲಾಭದ ವಸ್ತುಗಳನ್ನು ಬೃಹತ್ ಪ್ರಮಾಣದಲ್ಲಿ ಸಾಗಿಸಲು ರೆಸ್ಟೋರೆಂಟ್‌ಗಳಿಗೆ ಹೆಚ್ಚುವರಿ ಚಾನಲ್ ಅನ್ನು ನೀಡುತ್ತದೆ.

ಕಳೆದ ಕೆಲವು ತ್ರೈಮಾಸಿಕಗಳಿಂದ ನಿಧಾನಗತಿಯ ಬೆಳವಣಿಗೆಯನ್ನು ಎದುರಿಸುತ್ತಿರುವ ಹಾಗೂ ರೈಡ್-ಹೇಲಿಂಗ್ ಸ್ಟಾರ್ಟ್ಅಪ್ ರಾಪಿಡೊ ಆಹಾರ-ವಿತರಣಾ ಮಾರುಕಟ್ಟೆಯನ್ನು ಪ್ರವೇಶಿಸಲು ಯೋಜಿಸುತ್ತಿರುವ ಸಮಯದಲ್ಲಿ ಇದು ಬಂದಿದೆ.

ಫುಡ್‌ ಡೆಲಿವರಿಯಲ್ಲಿ ರಾಪಿಡೊಪ್ರವೇಶವು ಸ್ವಿಗ್ಗಿಯ ಗಮನವನ್ನೂ ಸೆಳೆದಿದೆ, ಸಿಇಒ ಶ್ರೀಹರ್ಷ ಮಜೆಟಿ ಅವರು ಕಂಪನಿಯು ಈ ಪ್ರಯತ್ನವನ್ನು ಗಮನಿಸುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ತನ್ನ ನಡೆಗಳನ್ನು ಯೋಜಿಸುತ್ತದೆ ಎಂದು ಹೇಳಿದ್ದಾರೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಚಿನ್ನದ ಬೆಲೆ 15,200 ರೂ ಇಳಿಕೆ, ಬಂಗಾರ ಖರೀದಿಗೆ ಇದು ಸೂಕ್ತ ಸಮಯವೇ?
ಸೊಂಟಕ್ಕಿಂತ ಕೆಳಗೆ ಮಹಿಳೆಯರು ಚಿನ್ನ ಧರಿಸಬಾರದು ಅಂತಾ ಹೇಳೋದು ಯಾಕೆ? ಶೇ. 99ರಷ್ಟು ಜನರಿಗೆ ಇದು ಗೊತ್ತಿಲ್ಲ!