ಜೂನ್‌ ತಿಂಗಳಲ್ಲಿ ಭಾರೀ ಕುಸಿದ ಟಾಟಾ ಮೋಟಾರ್ಸ್‌ ವಾಹನಗಳ ಮಾರಾಟ!

Published : Jul 01, 2025, 03:30 PM IST
Tata Motors

ಸಾರಾಂಶ

ಜೂನ್‌ನಲ್ಲಿ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಶೇ. 12 ರಷ್ಟು ಹೆಚ್ಚಾಗಿ 5,228 ಕ್ಕೆ ತಲುಪಿದ್ದರೆ, ತ್ರೈಮಾಸಿಕದಲ್ಲಿ ಶೇ. 2 ರಷ್ಟು ಇಳಿಕೆಯಾಗಿ 16,231 ಕ್ಕೆ ತಲುಪಿದೆ. 

ಮುಂಬೈ (ಜು.1): ದೇಶದ ಅತಿದೊಡ್ಡ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳ ತಯಾರಕರಾದ ಟಾಟಾ ಮೋಟಾರ್ಸ್ ಲಿಮಿಟೆಡ್, ಜೂನ್ ತಿಂಗಳ ಮಾರಾಟ ಅಂಕಿಅಂಶಗಳನ್ನು ಜುಲೈ 1ರಂದು ವರದಿ ಮಾಡಿದೆ, ಇದು ವರ್ಷದಿಂದ ವರ್ಷಕ್ಕೆ ಭಾರೀ ಕಡಿಮೆಯಾಗಿದೆ. ಟಾಟಾ ಮೋಟಾರ್ಸ್‌ನ ದೇಶೀಯ ಮಾರಾಟವು ಜೂನ್‌ನಲ್ಲಿ ಕಳೆದ ವರ್ಷಕ್ಕಿಂತ ಶೇ. 12 ರಷ್ಟು ಕುಸಿದು 65,019 ಯೂನಿಟ್‌ಗಳಿಗೆ ತಲುಪಿದೆ. ಕಳೆದ ಜೂನ್‌ನಲ್ಲಿ ಕಂಪನಿಯು 74,147 ಯೂನಿಟ್‌ಗಳನ್ನು ಮಾರಾಟ ಮಾಡಿತ್ತು.

ಏಪ್ರಿಲ್-ಜೂನ್ ಅವಧಿಯಲ್ಲಿ ಒಟ್ಟಾರೆ ಮಾರಾಟವು ಶೇ. 10 ರಷ್ಟು ಕುಸಿದು 2.03 ಲಕ್ಷ ಯೂನಿಟ್‌ಗಳಿಗೆ ತಲುಪಿದೆ. ವಾಣಿಜ್ಯ ವಾಹನಗಳ ಮಾರಾಟವು ಕಳೆದ ವರ್ಷ ಜೂನ್‌ನಲ್ಲಿ ಶೇ. 5 ರಷ್ಟು ಕುಸಿದು 30,238 ಕ್ಕೆ ತಲುಪಿದ್ದರೆ, ಮೊದಲ ತ್ರೈಮಾಸಿಕದಲ್ಲಿ ಆ ಸಂಖ್ಯೆ ಶೇ. 6 ರಷ್ಟು ಕುಸಿದಿದೆ.

ಮಧ್ಯಮ ಭಾರ ಮತ್ತು ಆಂತರಿಕ ದಹನಕಾರಿ ವಾಹನಗಳ ದೇಶೀಯ ಮಾರಾಟವು ಕಳೆದ ವರ್ಷದಲ್ಲಿ 14,640 ಯುನಿಟ್‌ಗಳಿಂದ 12,781 ಯುನಿಟ್‌ಗಳಿಗೆ ಇಳಿದಿದೆ. ಮೊದಲ ತ್ರೈಮಾಸಿಕದಲ್ಲಿ ಒಟ್ಟು ವಾಣಿಜ್ಯ ವಾಹನ ಮಾರಾಟವು 6% ರಷ್ಟು ಕಡಿಮೆಯಾಗಿ 37,730 ಯುನಿಟ್‌ಗಳಿಗೆ ಇಳಿದಿದೆ.

"ಮೊದಲ ತ್ರೈಮಾಸಿಕವು ವಾಣಿಜ್ಯ ವಾಹನ ಉದ್ಯಮಕ್ಕೆ ನಿಧಾನಗತಿಯ ಸೂಚನೆಯೊಂದಿಗೆ ಪ್ರಾರಂಭವಾಗಿದೆ, HCV ಮತ್ತು SCVPU ವಿಭಾಗಗಳಲ್ಲಿ ತುಂಬಾ ನೀರಸ ಪ್ರದರ್ಶನ ಕಂಡುಬಂದಿದೆ, ಆದರೆ ಬಸ್‌ಗಳು, ವ್ಯಾನ್‌ಗಳು ವರ್ಷದಿಂದ ವರ್ಷಕ್ಕೆ ಸಾಧಾರಣ ಬೆಳವಣಿಗೆಯನ್ನು ಕಂಡಿವೆ" ಎಂದು ಟಾಟಾ ಮೋಟಾರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್ ಹೇಳಿದ್ದಾರೆ.

"ನಮ್ಮ ಬೇಡಿಕೆ-ಪುಲ್ ತಂತ್ರವನ್ನು ಚಾಲನೆ ಮಾಡುವ ಮತ್ತು ಗ್ರಾಹಕ ಎಂಗೇಜ್‌ಮೆಂಟ್‌ ಬಲಪಡಿಸುವ ಮೂಲಕ ನಮ್ಮ ಗ್ರಾಹಕರು ತಮ್ಮ ವ್ಯವಹಾರವನ್ನು ಬೆಳೆಸಲು ಸಹಾಯ ಮಾಡುವ ಹೆಚ್ಚಿನ ಮೌಲ್ಯ ಮತ್ತು ಸೂಕ್ತವಾದ ಪರಿಹಾರಗಳನ್ನು ನೀಡುವತ್ತ ನಾವು ಗಮನ ಹರಿಸಿದ್ದೇವೆ" ಎಂದು ಅವರು ಹೇಳಿದರು. ಜೂನ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು 5,228 ಯೂನಿಟ್‌ಗಳಿಗೆ 12% ರಷ್ಟು ಹೆಚ್ಚಾಗಿದ್ದು, ತ್ರೈಮಾಸಿಕದಲ್ಲಿ ಅವು 2% ರಷ್ಟು ಕುಸಿದು 16,231 ಯೂನಿಟ್‌ಗಳಿಗೆ ತಲುಪಿವೆ.

ಟಾಟಾ ಮೋಟಾರ್ಸ್ ಷೇರುಗಳು ಮಂಗಳವಾರ 0.7% ರಷ್ಟು ಕಡಿಮೆಯಾಗಿ ₹683.2 ಕ್ಕೆ ವಹಿವಾಟು ನಡೆಸುತ್ತಿವೆ. ಕಳೆದ ಒಂದು ತಿಂಗಳಲ್ಲಿ ಷೇರುಗಳು 4% ರಷ್ಟು ಕುಸಿದಿವೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ