ಮೋದಿ ವಿರುದ್ಧ ಮತ: ಫೇಲಾಗಿದ್ದಾರಂತೆ ಕಾಯುವುದರಲ್ಲಿ ಹಿತ!

By Suvarna NewsFirst Published Jan 31, 2020, 7:33 PM IST
Highlights

ಮೋದಿ ಸರ್ಕಾರದ ವಿರುದ್ಧ ಮೂಡಿದ ಜನಾಭಿಪ್ರಾಯ| ಮೋದಿ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡ ಜನತೆ?| ಕೇಂದ್ರ ಬಜೆಟ್’ಗೂ ಮುನ್ನ ನಡೆಸಿದ ಸಮೀಕ್ಷೆ| ಮೋದಿ ಸರ್ಕಾರ ಅವಧಿಯಲ್ಲಿ ಹಣದುಬ್ಬರ ಹೆಚ್ಚಿದೆ ಎಂದ ಶೇ.75ರಷ್ಟು ಭಾರತೀಯರು| ಕಳೆದ ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ7.35ರಷ್ಟಿತ್ತು| 

ನವದೆಹಲಿ(ಜ.31): ಪ್ರತಿ ಬಾರಿಯೂ ಸದಾ ಮೋದಿ ಸರ್ಕಾರದ ಪರವಾಗಿಯೇ ಜನಾಭಿಪ್ರಾಯ ಹೊರ ಹಾಕುತ್ತಿದ್ದ ದೇಶದ ಜನತೆ, ಈ ಬಾರಿ ಅದೇಕೊ ಮೋದಿ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಂತೆ ಕಾಣುತ್ತಿದೆ. 

ಕೇಂದ್ರ ಬಜೆಟ್’ಗೂ ಮುನ್ನ ನಡೆಸಿದ ಸಮೀಕ್ಷೆಯಲ್ಲಿ, ಹಣದುಬ್ಬರವನ್ನು ಹತೋಟಿಗೆ ತರುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂಬ ಜನಾಭಿಪ್ರಾಯ ಹೊರ ಹೊಮ್ಮಿದೆ. IANS ಸಿ-ವೋಟರ್ ನಡೆಸಿದ ಸಮೀಕ್ಷೆಯಲ್ಲಿ ಮೋದಿ ಸರ್ಕಾರದ ಆರ್ಥಿಕ ನೀತಿ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದೆ.

ಆರ್ಥಿಕ ಸಮೀಕ್ಷೆ ಬಹಿರಂಗ: ಅಭಿವೃದ್ಧಿ ಮೋದಿ ಸರ್ಕಾರದ ಅಂಗ!

ಶೇ.72 ರಷ್ಟು ಭಾರತೀಯರು  ಮೋದಿ ಸರ್ಕಾರ ಅವಧಿಯಲ್ಲಿ ಹಣದುಬ್ಬರ ಹೆಚ್ಚಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ಏರಿಕೆ ತಮ್ಮ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ತರಕಾರಿಗಳ ಬೆಲೆ ಏರಿಕೆ ಅದರಲ್ಲೂ ಪ್ರಮುಖವಾಗಿ ಈರುಳ್ಳಿ ಬೆಲೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಜೆಟ್‌ನಿಂದ ಯಾರಿಗೆ ಏನು ಬೇಕು? ವಿತ್ತ ಮಂತ್ರಿಯಿಂದ ಜಾದೂ ನಿರೀಕ್ಷೆ!

ಕಳೆದ ಡಿಸೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಶೇ7.35 ರಷ್ಟಿತ್ತು. ಇದು 2020ರ ಅವಧಿಯಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದ್ದು, ಹಣದುಬ್ಬರವನ್ನು ನಿಯಂತ್ರಿಸಲು ಮೋದಿ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

click me!