ಹಾರ್ಸ್ ರೈಡರ್ ಜೊತೆ ಬಿಲ್ ಗೇಟ್ಸ್ ಪುತ್ರಿಯ ಮದುವೆ| ಮದುವೆ ವಿಷಯ ಕೇಳಿದ ಬಿಲ್ ಗೇಟ್ಸ್ ಏನು ರಿಯಾಕ್ಷನ್ ಕೊಟ್ಟರು?| ಈಜಿಪ್ಟ್ ಮೂಲದ ಹಾರ್ಸ್ ರೈಡಿಂಗ್ ಕ್ರೀಡಾಪಟು ನಾಯೆಲ್ ನಾಸರ್| ನಾಸರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಜೆನ್ನಿಫರ್ ಗೇಟ್ಸ್| ನಾಸರ್-ಜೆನ್ನಿಫರ್ ಮದುವೆಗೆ ಗೇಟ್ಸ್ ದಂಪತಿ ಗ್ರೀನ್ ಸಿಗ್ನಲ್|
ವಾಷಿಂಗ್ಟನ್(ಜ.31): ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ - ಮೆಲಿಂಡಾ ದಂಪತಿಯ ಹಿರಿಯ ಪುತ್ರಿ ಜೆನ್ನಿಫರ್ ಗೇಟ್ಸ್ ನಿಶ್ಚಿತಾರ್ಥ ಪೂರ್ಣಗೊಂಡಿದೆ.
ಈಜಿಪ್ಟ್ ಮೂಲದ ಹಾರ್ಸ್ ರೈಡಿಂಗ್ ಕ್ರೀಡಾಪಟು ನಾಯೆಲ್ ನಾಸರ್ ವರೊಂದಿಗೆ ಜೆನ್ನಿಫರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
A post shared by Jennifer Gates (@jenniferkgates) on Jan 29, 2020 at 12:29pm PST
ಹಿಮಗಡ್ಡೆಗಳ ನಡುವೆ ನಾಸರ್ ಜೊತೆ ಇರುವ ಫೋಟೋಗಳನ್ನು ಜೆನ್ನಿಫರ್ ತಮ್ಮ ಇನ್ಸಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಾಸರ್ ಮತ್ತು ಜೆನ್ನಿಫರ್ ಕಳೆದ ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆಧಾರ್ ವ್ಯವಸ್ಥೆ ವಿಶ್ವಕ್ಕೇ ಮಾದರಿ: ಬಿಲ್ ಗೇಟ್ಸ್ ಪ್ರಶಂಸೆ!
ಇನ್ನು ಜೆನ್ನಿಫರ್ ಇನ್ಸ್ಟಾಗ್ರಾಮ್ ಪೋಸ್ಟ್’ಗೆ ಬಿಲ್ ಗೇಟ್ಸ್ ಹಾಗೂ ಮೆಲಿಂದಾ ಕೂಡಾ ಹರ್ಷ ವ್ಯಕ್ತಪಡಿಸಿದ್ದಾರೆ. ನಾಸರ್ ಜೊತೆ ನಿನ್ನನ್ನು ಜೋಡಿಯಾಗಿ ನೋಡಲು ತುಂಬಾ ಸಂತೋಷವಾಗುತ್ತಿದೆ ಎಂದು ಮೆಲಿಂದಾ ಗೇಟ್ಸ್ ಟ್ವೀಟ್ ಮಾಡಿದ್ದಾರೆ.
ನಾಸರ್ ಪೋಷಕರು ಮೂಲತಃ ಈಜಿಪ್ಟಿನವರಾಗಿದ್ದು, ಅಮೆರಿಕದಲ್ಲಿ ನೆಲೆಸಿದ್ದಾರೆ. 2020ರ ಒಲಿಂಪಿಕ್ಸ್’ನಲ್ಲಿ ಈಜಿಪ್ಟ್ ದೇಶದ ಪರವಾಗಿ ಕುದುರೆ ಸವಾರಿ ಕ್ರೀಡೆಯಲ್ಲಿ ನಾಸರ್ ಭಾಗವಹಿಸಲಿರುವುದು ವಿಶೇಷ.